ಎಚ್ಎಎಲ್ ನಲ್ಲಿ 215 ಅಪ್ರೆಂಟಿಸ್ ಹುದ್ದೆಗಳಿವೆ, ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 01: ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. 2016-17 ನೇ ಸಾಲಿನಲ್ಲಿ ಮತ್ತೊಮ್ಮೆ ಪೂರ್ಣಾವಧಿ ಅಪ್ರೆಂಟಿಸ್ ತರಬೇತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು 16/12/2016 ಕೊನೆಯ ದಿನವಾಗಿದೆ.

ಹುದ್ದೆ: ಅಪ್ರೆಂಟಿಸ್ ತರಬೇತಿ
ಒಟ್ಟು ಹುದ್ದೆಗಳು: 215
ವಿದ್ಯಾರ್ಹತೆ: ಇಂಜಿನಿಯರಿಂಗ್ ಪದವಿ
ಉದ್ಯೋಗ ಎಲ್ಲಿ : ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 16/12/2016

ಈ ತರಬೇತಿಗಾಗಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಪಾಸಾದವರು ನಂತರ ವೈಯಕ್ತಿಕ ಸಂದರ್ಶನಕ್ಕೆ ಹಾಜರಾಗಬಹುದು.

HAL recruitment 2016-17 notification 215 Apprentice Apply Online

ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ತರಬೇತಿ/ವಿದ್ಯಾಭ್ಯಾಸ, ಸ್ಟೈಫಂಡ್ ಮತ್ತು ಭತ್ಯೆ ಪ್ರತಿ ತಿಂಗಳು ನೀಡಲಾಗುತ್ತದೆ. ಅರ್ಜಿಯನ್ನು ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿ. ನಲ್ಲಿ ಪಡೆಯಬಹುದು ಅಥವಾ www.hal-india.com ವೆಬ್‍ಸೈಟ್‍ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬೇಕು.

ಭರ್ತಿ ಮಾಡಿದ ಅರ್ಜಿಯನ್ನು 29 ನವೆಂಬರ್ 2016ರಿಂದ ಸಲ್ಲಿಸಲು ಆರಂಭಿಸಬಹುದು. ಡಿಸೆಂಬರ್ 16ರೊಳಗೆ ಅರ್ಜಿ ಸಲ್ಲಿಸಿರಬೇಕು.

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ವಿವರಗಳನ್ನು ಈ ಲಿಂಕ್ ಮೂಲಕ ಪಡೆದುಕೊಳ್ಳಿ

(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hindustan Aeronautics Limited (HAL) invites application for the position of 215 Apprentice Training for 1 year apprenticeship training at TTI, HAL (BC), Bengaluru under Apprenticeship Act in Hindustan Aeronautics Limited (HAL). Apply online before 16th December 2016.
Please Wait while comments are loading...