Jobs in Kalaburagi: 'ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ'ಯಲ್ಲಿ ಭರ್ಜರಿ ಉದ್ಯೋಗ, ₹1.40 ಲಕ್ಷ ವೇತನ
ಕಲಬುರಗಿ, ಡಿಸೆಂಬರ್ 25: ಕಲ್ಯಾಣ ಕರ್ನಾಟಕದ ಕಲಬುರಗಿಯ 'ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ'ಯಲ್ಲಿ ವಿವಿಧ ಉದ್ಯೋಗಗಳು ಖಾಲಿ ಇವೆ. ಈ ಸಂಬಂಧ ನಿಮಿತ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 1 ಲಕ್ಷ ರೂಪಾಯಿಗೂ ಅಧಿಕ ಮಾಸಿಕ ವೇತನ ನೀಡುವ ಹುದ್ದೆಗಳು ಇವಾಗಿವೆ. ಅರ್ಜಿ ಸಲ್ಲಿಕೆಗೆ ಜನವರಿ 01 ಕೊನೆಯ ದಿನಾಂಕವಾಗಿದೆ.
'ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ'ಯಲ್ಲಿ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಸಹಾಯಕ ಪ್ರೊಫೆಸರ್ ಹುದ್ದೆಗಳು ಸೇರಿ ಒಟ್ಟು 21 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಖಾಲಿ ಹುದ್ದೆಗಳನ್ನು ಸೇರಬಯಸುವವರು ಕೊನೆಯ ದಿನಾಂಕವರೆಗೆ ಕಾಯದೇ ನೇರ ಸಂದರ್ಶನಕ್ಕೆ ಭೇಟಿ ನೀಡಬೇಕು ಎಂದು ಸಂಸ್ಥೆ ಅಧಿಸೂಚನೆ ತಿಳಿಸಿದೆ.

ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ
ಅಸಿಸ್ಟಂಟ್ ಪ್ರೊಫೆಸರ್: 11
ಅಸೋಸಿಯೇಟ್ ಪ್ರೊಫೆಸರ್: 08
ಪ್ರೊಫೆಸರ್: 02
ಒಟ್ಟು ಹುದ್ದೆಗಳ ಸಂಖ್ಯೆ: 21
ಖಾಲಿ ಇರುವ ಒಟ್ಟು ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ನಡೆಯಲಿದೆ. ಆಯ್ಕೆ ಆದ ಅಭ್ಯರ್ಥಿಗಳು ನ್ಯೂರೊಸರ್ಜರಿ, ಯುರೋಲಜಿ, ಪೀಡಿಯಾಟ್ರಿಕ್ಸ್ ಸರ್ಜರಿ, ಪ್ಲಾಸ್ಟಿಕ್ ಸರ್ಜರಿ, ನೆಫ್ರಾಲಜಿ ಸೇರಿ ಮುಂತಾದ ವಿಷಯಗಳಲ್ಲಿ ಬೋಧನೆ ಮಾಡಲಿದ್ದಾರೆ.
ಶೈಕ್ಷಣಿಕ ಅರ್ಹತೆ
ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಬೋಧಕ ವಿಷಯದಲ್ಲಿ ಪದವಿ ಇಲ್ಲವೇ ಸ್ನಾತಕೋತ್ತರ ಪದವಿ ಅಥವಾ, ಪಿಹೆಚ್ ಡಿ ಮಾಡಿರಬೇಕು. ಬೋಧಕ ವೃತ್ತಿಯಲ್ಲಿ ಅನುಭವ ಹೊಂದಿರುವವರು ನೇರ ಸಂದರ್ಶನಕ್ಕೆ ಹಾಜರಾಗಬೇಕು. ಆಯ್ಕೆ ಆದವರಿಗೆ ಮಾಸಿಕವಾಗಿ ಒಂದು ಲಕ್ಷ ರೂಪಾಯಿಗೆ ಅಧಿಕ ವೇತನ ಸಿಗಲಿದೆ.
ವಯೋಮಿತಿ ವಿವರ
ಪ್ರೊಫೆಸರ್ ಹುದ್ದೆ ಅಭ್ಯರ್ಥಿ: ಗರಿಷ್ಠ 48 ವರ್ಷ
ಅಸೋಸಿಯೇಟ್ ಪ್ರೊಫೆಸರ್ ಹುದ್ದೆ: ಗರಿಷ್ಠ 43 ವರ್ಷ
ಅಸಿಸ್ಟಂಟ್ ಪ್ರೊಫೆಸರ್ ಹುದ್ದೆ: ಗರಿಷ್ಠ 38 ವರ್ಷ
ಮಾಸಿಕ ವೇತನ ವಿವರ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ನೇರ ಸಂದರ್ಶನದಲ್ಲಿ ಪ್ರೊಫೆಸರ್ ಹುದ್ದೆಗೆ ಆಯ್ಕೆಯಾದವರಿಗೆ ಮಾಸಿಕ 1,40,000 ರೂ., ಅಸೋಸಿಯೇಟ್ ಪ್ರೊಫೆಸರ್ ಹುದ್ದೆ ಅಭ್ಯರ್ಥಿಗೆ ತಿಂಗಳಿಗೆ 1,20,000 ರೂ. ಹಾಗೂ ಅಸಿಸ್ಟಂಟ್ ಪ್ರೊಫೆಸರ್ ಹುದ್ದೆಗೆ ಒಟ್ಟು 1,00,000 ರೂ. ವೇತನ ನಿಗದಿಪಡಿಸಲಾಗಿದೆ.
ಅರ್ಜಿ ಶುಲ್ಕ: ನೇರ ಸಂದರ್ಶನ ವಿವರ
ಅರ್ಜಿ ಸಲ್ಲಿಸುವ ಎಲ್ಲ ಜಾತಿ ಸಮುದಾಯದ ಅಭ್ಯರ್ಥಿಗಳಿಗೆ 500ರೂಪಾಯಿಯನ್ನು ಅರ್ಜಿ ಶುಲ್ಕವಾಗಿ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಅದನ್ನು ಡಿಡಿ ಮೂಲಕ ಪಾವತಿಸಬೇಕು.
ಇನ್ನೂ ನೇರ ಸಂದರ್ಶನವು ಜನವರಿ 03ರಂದು ನಡೆಯಲಿದ್ದು, ಜನವರಿ 1 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಸಂಸ್ಥೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಸೂಕ್ತ ದಾಖಲೆಗಳ ಸಹಿತ ಭರ್ತಿ ಮಾಡಬೇಕು. ನಂತರ ಅರ್ಜಿಯನ್ನು 'ನಿರ್ದೇಶಕರು, ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವಿರೇಶ್ ನಗರ, ಸೇಡಂ ರಸ್ತೆ, ಕಲಬುರಗಿ - 585105' ಇಲ್ಲಿಗೆ ಸ್ಪೀಡ್ ಪೋಸ್ಟ್ ಮಾಡುವಂತೆ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿ, ಅಧಿಸೂಚನೆ ಡೌನ್‌ಲೋಡ್‌ಗಾಗಿ ಅಭ್ಯರ್ಥಿಗಳು gimsgulbarga.karnataka.gov.in ಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಬಹುದು.












Click it and Unblock the Notifications