ಕೊಪ್ಪಳ : ಅತಿಥಿ ಉಪನ್ಯಾಸಕ, ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ

ಕೊಪ್ಪಳ, ಜೂನ್ 02 : ಕೊಪ್ಪಳ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ನಿರ್ವಹಣೆಯಾಗುತ್ತಿರುವ ಬಾಲಕಿಯರ ವಸತಿ ಕಾಲೇಜು/ ವಸತಿ ಶಾಲೆ ಹಾಗೂ ಮೌಲಾನ್ ಆಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಭೋದಕ ಹುದ್ದೆಗಳಿಗೆ ಅತಿಥಿ ಶಿಕ್ಷಕ, ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಿಜ್ಞಾನ ಮತ್ತು ವಾಣಿಜ್ಯ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜು ಯಲಬುರ್ಗಾ, ಮೌಲಾನ ಆಜಾದ್ ಮಾದರಿ ಶಾಲೆ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ನಿರ್ವಹಣೆಯಾಗುತ್ತಿದೆ.

ವಸತಿ ಕಾಲೇಜು ಹಾಗೂ ಶಾಲೆಗಳಿಗೆ ಪ್ರಸಕ್ತ ಸಾಲಿಗಾಗಿ ಪಾಠ ಭೋದನೆಗಾಗಿ ಗೌರವಧನದ ಆಧಾರದ ಮೇಲೆ ವಿವಿಧ ವಿಷಯವಾರು ಅತಿಥಿ ಉಪನ್ಯಾಸಕರು/ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

Guest teacher

ಸರ್ಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಿಜ್ಞಾನ ಮತ್ತು ವಾಣಿಜ್ಯ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜಿನಲ್ಲಿ ಎಂ.ಎಸ್.ಸಿ ಬಿ.ಎಡ್ ಪದವೀಧರ ಭೌತಶಾಸ್ತ್ರ, ಗಣಿತ, ಜೀವಶಾಸ್ತ್ರ ಈ ವಿಷಗಳಲ್ಲಿ ತಲಾ 1 ಉಪನ್ಯಾಸಕರ ಅಗತ್ಯವಿದೆ. ಎಂ.ಎ ಬಿ.ಎಡ್ ಪದವೀಧರ ಇತಿಹಾಸ, ವಾಣಿಜ್ಯ ಶಾಸ್ತ್ರ ಹಾಗೂ ಅರ್ಥಶಾಸ್ತ್ರ ಈ ವಿಷಗಳಲ್ಲಿ ತಲಾ 1 ಉಪನ್ಯಾಸಕರ ಹುದ್ದೆ ಖಾಲಿ ಇವೆ.

ಮೌಲಾನಾ ಆಜಾದ್ ಮಾದರಿ ಶಾಲೆ ಕೊಪ್ಪಳ ಜಿಲ್ಲೆಯಲ್ಲಿ ಬಿ.ಎಡ್ (ಟಿಇಟಿ) ಪದವೀಧರ ಕನ್ನಡ 1, ಇಂಗ್ಲಿಷ್ 3, ಉರ್ದು 1, ಗಣಿತ 2, ಸಮಾಜ ವಿಜ್ಞಾನ 5, ವಿಜ್ಞಾನ 6 ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಿರೇಬೆಣಕಲ್-1 ಇಲ್ಲಿ ಎಮ್.ಎಸ್‌ಸಿ. ಕಂಪ್ಯೂಟರ್ ಪದವಿಯ ಗಣಕಯಂತ್ರ ಶಿಕ್ಷಕರ 1 ಹುದ್ದೆ ಖಾಲಿ ಇವೆ.

ಪದವಿ ಪೂರ್ವ ವಸತಿ ಕಾಲೇಜಿನ ಅತಿಥಿ ಉಪನ್ಯಾಸಕರ ಗೌರವಧನ ರೂ.12000, ವಸತಿ
ಶಾಲೆ ಶಿಕ್ಷಕರ ಗೌರವಧನ ರೂ.10000 ಹಾಗೂ ಮೌಲಾನ ಆಜಾದ್ ಶಿಕ್ಷಕರ ಗೌರವಧನ ರೂ. 8000 ಪ್ರತಿ ತಿಂಗಳು.

ಉಪನ್ಯಾಸಕರ/ ಶಿಕ್ಷಕರ ಹಾಜರಾತಿ ಪ್ರತ್ಯೇಕವಾಗಿ ನಿರ್ವಹಿಸುವುದು. ಉಪನ್ಯಾಸಕರ/ ಶಿಕ್ಷಕರ ಸೇವೆಯು ನೇರ ನೇಮಕಾತಿ ಮೂಲಕ ಶಿಕ್ಷಕರ/ ಉಪನ್ಯಾಸಕರನ್ನು ಭರ್ತಿ ಮಾಡಿಕೊಳ್ಳುವವರಗೆ ಅಥವಾ 2019-20ನೇ ಸಾಲಿನ ಶೈಕ್ಷಣಿಕ ವರ್ಷದ ಅಂತ್ಯದ ವರಗೆ ಅಂದರೆ ಮಾರ್ಚ್ 2020 ರವರಗೆ ಮಾತ್ರ ಸೀಮಿತವಾಗಿರುತ್ತದೆ.

ಈ ಸೇವೆ ತಾತ್ಕಾಲಿಕವಾಗಿ ಪಡೆಯಲಾಗಿದ್ದು, ಸೇವೆ ಖಾಯಂ ನೇಮಕಾತಿ ಅಥವಾ ಯಾವುದೇ ತರಹದ ಸೇವಾ ಕೃಪಾಂಕಕ್ಕೆ ಅರ್ಹರಿರುವುದಿಲ್ಲ. ನೇಮಕಾತಿ ಅಧಿಸೂಚಿಸಿದ (ನೇರ ನೇಮಕಾತಿ) ವಸತಿ ಶಾಲೆ/ ಕಾಲೇಜು ಹಾಗೂ ಮಾದರಿ ಶಾಲೆ ಶಿಕ್ಷಕರ/ ಉಪನ್ಯಾಸಕರು ನೇಮಕಗೊಂಡು ಕರ್ತವ್ಯಕ್ಕೆ ಹಾಜರಾದ ತಕ್ಷಣ ಅತಿಥಿ ಉಪನ್ಯಾಸಕರ ಹುದ್ದೆಗಳು ತಂತಾನೆ ರದ್ದಾಗುವುದು.

ಅರ್ಜಿಗಳನ್ನು ಸಲ್ಲಿಸಲು ಜೂನ್ 10 ಕೊನೆಯ ದಿನವಾಗಿದೆ.

ವಿಳಾಸ : ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಆಡಳಿತ ಭವನ ಕೊಪ್ಪಳ. ಹೆಚ್ಚಿನ ಮಾಹಿತಿಗಾಗಿ 08539-225070 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+