ಕಾಲೇಜುಗಳಿಗೆ ಸ್ಥಳೀಯವಾಗಿ ಅತಿಥಿ ಉಪನ್ಯಾಸಕರ ನೇಮಕಕ್ಕೆ ಒಪ್ಪಿಗೆ, ಸೂಚನೆಗಳು

ಬೆಂಗಳೂರು, ನವೆಂಬರ್ 21: ಕರ್ನಾಟಕದ ಕಾಲೇಜು ಶಿಕ್ಷಣ ಇಲಾಖೆ ಸ್ಥಳೀಯವಾಗಿ ಪ್ರಾಂಶುಪಾಲರ ಹಂತದಲ್ಲಿ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಒಪ್ಪಿಗೆ ನೀಡಿದೆ. ಈ ನೇಮಕಾತಿಗೆ ಕೆಲವು ಸೂಚನೆಗಳನ್ನು ಸಹ ನೀಡಿದೆ.

ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿಗಳು ಮಾನ್ಯ ಆಯುಕ್ತರಿಂದ ಅನುಮೋದಿಸ್ಪಟ್ಟ ಈ ಕುರಿತ ಟಿಪ್ಪಣಿಯನ್ನು ಹೊರಡಿಸಿದ್ದಾರೆ. ಅತಿಥಿ ಉಪನ್ಯಾಸಕ ನೇಮಕದ ಕುರಿತು ಇಲಾಖೆಯ ಎಲ್ಲಾ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಅಗತ್ಯ ಕ್ರಮಕ್ಕಾಗಿ ಸೂಚಿಸಲಾಗಿದೆ.

Guest Lecturer Recruitment At Principal Level Directions

ಈ ಸುತ್ತೋಲೆಯು 2023-24 ನೇ ಶೈಕ್ಷಣಿಕ ಸಾಲಿನಲ್ಲಿ ಕೆಲವು ವಿಷಯಗಳ ಹೆಚ್ಚುವರಿ ಕಾರ್ಯಭಾರಕ್ಕೆ ಲಭ್ಯವಾಗದಿರುವ ಅತಿಥಿ ಉಪನ್ಯಾಸಕರನ್ನು ಸ್ಥಳೀಯವಾಗಿ ಪ್ರಾಂಶುಪಾಲರ ಹಂತದಲ್ಲಿ ಆಯ್ಕೆ
ಮಾಡಿಕೊಳ್ಳುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಸರ್ಕಾರದ ಆದೇಶ ದಿನಾಂಕ 27/01/2023 ಉಲ್ಲೇಖ ಮಾಡಲಾಗಿದೆ.

ಸುತ್ತೋಲೆಯಲ್ಲಿ 2023-24ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಕಾಲೇಜುಗಳಲ್ಲಿ ಲಭ್ಯವಾಗುವ ಹೆಚ್ಚುವರಿ ಕಾರ್ಯಭಾರಕ್ಕೆ ಅನುಗುಣವಾಗಿ ಆನ್‌ಲೈನ್ ಮೂಲಕ ಅರ್ಜಿ ಪಡೆದು ಮೆರಿಟ್ ಆಧಾರದ ಮೇಲೆ ಆನ್‌ಲೈನ್ ಕೌನ್ಸಿಲಿಂಗ್‌ ಮೂಲಕ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲು ಕ್ರಮವಹಿಸಲಾಗುತ್ತಿದೆ.

ಪ್ರಸ್ತುತ ಎರಡನೇ ಹಂತದ ಅತಿಥಿ ಉಪನ್ಯಾಸಕರ ಆನ್‌ಲೈನ್‌ ಕೌನ್ಸಿಲಿಂಗ್ ಪೂರ್ಣಗೊಂಡಿದ್ದು, ಕೆಲವು ವಿಷಯಗಳಿಗೆ ಅಭ್ಯರ್ಥಿಗಳ ಕೊರತೆಯಾದ ಸಂದರ್ಭದಲ್ಲಿ E.M..S. ನಲ್ಲಿ ಕಾಲ ಕಾಲಕ್ಕೆ ತಿಳಿಸುವ ವಿಷಯಗಳಿಗೆ ಅಭ್ಯರ್ಥಿಗಳನ್ನು ಸರ್ಕಾರದ ಆದೇಶದಲ್ಲಿ ತಿಳಿಸಿರುವಂತೆ ಪ್ರಾಂಶುಪಾಲರ ಹಂತದಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದೆ.

ಸೂಚನೆಗಳು

* ಕಾಲೇಜಿನ ಹಂತದಲ್ಲಿ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲು ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸುವುದು.

* ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಪಡೆಯಲು ಕ್ರಮವಹಿಸುವುದು.

* ಅಭ್ಯರ್ಥಿಯ ವಿವಿರಗಳನ್ನು E.M.I.S. ನಲ್ಲಿ ಭರ್ತಿಮಾಡುವುದು ಹಾಗೂ E.M...S.ನಲ್ಲಿ Generate ಆಗುವ ಅಂಕಗಳ ಆಧಾರದ ಮೇಲೆ, ಹೆಚ್ಚಿನ ಅಂಕವನ್ನು ಪಡೆಯುವ ಅಭ್ಯರ್ಥಿಗಳನ್ನು ಲಭ್ಯವಿರುವ ಕಾರ್ಯಭಾರಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಂಡು ಅನುಮೋದನಗಾಗಿ E.M.I.S. ಮೂಲಕ ಸಲ್ಲಿಸುವುದು.

* 2023-24 ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆಗೆ ಈಗಾಗಲೇ ಅರ್ಜಿ ಸಲ್ಲಿಸಿ, ಕೌನ್ಸಿಲಿಂಗ್ ಮೂಲಕ ಕಾಲೇಜನ್ನು ಆಯ್ಕೆ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಂದ ಅರ್ಜಿಯನ್ನು ಸ್ವೀಕರಿಸುವಂತಿಲ್ಲ.

* ಅತಿಥಿ ಉಪನ್ಯಾಸಕರ ಆಯ್ಕೆಯು ಕೇಂದ್ರ ಕಛೇರಿಯಿಂದ ಆನ್‌ಲೈನ್ ಮೂಲಕ Approve ಆದ ನಂತರ ಅತಿಥಿ ಉಪನ್ಯಾಸಕರಿಗೆ E.M.L.S. ಮೂಲಕ ಕಾರ್ಯಭಾರ ಹಂಚಿಕೆ ಮಾಡಿ ಸದರಿಯವರ ಸೇವೆಯನ್ನು ಪಡೆಯುವುದು.

* 2023-24ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆಗೆ ಈಗಾಗಲೇ ಅರ್ಜಿ ಸಲ್ಲಿಸಿ, ಕಾರಣಾಂತರಗಳಿಂದ ಕರ್ತವ್ಯ ನಿರ್ವಹಿಸದಿರುವಂತಹ ಅಭ್ಯರ್ಥಿಗಳಿಂದ ಹಾಗೂ 2023-24 ನೇ ಸಾಲಿಗೆ ಅರ್ಜಿ ಸಲ್ಲಿಸದ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಪಡೆಯಬಹುದು.

* ಪ್ರಾಂಶುಪಾಲರ ಹಂತದಲ್ಲಿ ಆಯ್ಕೆಯಾಗುವ ಅತಿಥಿ ಉಪನ್ಯಾಸಕರಿಗೂ ಸಹ ಈ ಕಛೇರಿ ಸಮಸಂಖ್ಯೆ ಸುತ್ತೋಲೆ ದಿನಾಂಕ 06/10/2023 ಮತ್ತು ದಿನಾಂಕ 02/11/2023ರಲ್ಲಿನ ಎಲ್ಲಾ ಅಂಶಗಳು/ ಷರತ್ತುಗಳು ಅನ್ವಯವಾಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+