Infosys Jobs: ಉದ್ಯೋಗಿಗಳ ನೇಮಕಾತಿ ವಿಳಂಬ; ಇನ್ಫೋಸಿಸ್ ವಿರುದ್ಧ ತನಿಖೆಗೆ ಸೂಚನೆ

ಇನ್ಫೋಸಿಸ್‌ ಸಂಸ್ಥೆಗೆ ಹೊಸ ಸಂಕಷ್ಟ ಎದುರಾಗಿದೆ. ಐಟಿ ದಿಗ್ಗಜ ಇನ್ಫೋಸಿಸ್ ಲಿಮಿಟೆಡ್‌ ವಿರುದ್ಧ ತನಿಖೆ ನಡೆಸುವಂತೆ ಕೇಂದ್ರ ಕಾರ್ಮಿಕ ಸಚಿವಾಲಯ ಕರ್ನಾಟಕ ಕಾರ್ಮಿಕ ಇಲಾಖೆಗೆ ಸೂಚನೆ ನೀಡಿದೆ. 2022 ರಲ್ಲಿ ಇನ್ಫೋಸಿಸ್‌ನಿಂದ ಸಿಸ್ಟಮ್ ಇಂಜಿನಿಯರ್ (ಎಸ್‌ಇ) ಮತ್ತು ಡಿಜಿಟಲ್ ಸ್ಪೆಷಲಿಸ್ಟ್ ಇಂಜಿನಿಯರ್ (ಡಿಎಸ್‌ಇ) ಕೆಲಸಕ್ಕೆ ಆಯ್ಕೆ ಮಾಡಿದ್ದರೂ ಇನ್ನೂ ಉದ್ಯೋಗ ಕೊಡದ ಕಾರಣ ಸುಮಾರು 2,500 ಉದ್ಯೋಗಿಗಳಿಗೆ ಸಮಸ್ಯೆ ಎದುರಾಗಿದೆ.

ಆಗಸ್ಟ್ 28, 2024 ರಂದು ಐಟಿ ಒಕ್ಕೂಟದ ನೇಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಸೆನೆಟ್ (NITES) ಅಧ್ಯಕ್ಷ ಹರ್‌ಪ್ರೀತ್ ಸಿಂಗ್ ಸಲೂಜಾ ಅವರು ಇಮೇಲ್ ಮೂಲಕ ನೀಡಿರುವ ದೂರನ್ನು ಆಧರಿಸಿ ಇನ್ಫೋಸಿಸ್ ಮೇಲೆ ತನಿಖೆ ಮಾಡುವಂತೆ ಕೇಳಿದೆ. ಸೆಪ್ಟೆಂಬರ್ 3, 2024 ರಂದು ರಾಜ್ಯಕ್ಕೆ ಪತ್ರ ಬರದಿದ್ದು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕರ್ನಾಟಕ ಸರ್ಕಾರಕ್ಕೆ ಕೇಳಿದೆ.

Government Seeks Karnataka s Aid in Investigating Infosys Hiring Delays

ಇನ್ಫೋಸಿಸ್ ನಡೆಸುತ್ತಿರುವ ನಿರ್ಲಕ್ಷ್ಯದ ಧೋರಣೆಯಿಂದ ಯುವ ಪದವೀಧರರನ್ನು ರಕ್ಷಣೆ ಮಾಡುವ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಸಈ ವಿಷಯದಲ್ಲಿ ಆಯಾ ಕಾರ್ಮಿಕ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವುದು ಸೂಕ್ತ. ಸರ್ಕಾರವು ರಾಜ್ಯ ಸರ್ಕಾರವಾಗಿರುವುದರಿಂದ, ನೀವು ಈ ವಿಷಯವನ್ನು ಪರಿಶೀಲಿಸಿ ಮತ್ತು ಅರ್ಜಿದಾರರಿಗೆ ಮತ್ತು ಈ ಕಚೇರಿಗೆ ಸೂಚನೆಯಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ವಿನಂತಿಸಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಪತ್ರದಲ್ಲಿ ತಿಳಿಸಿದೆ.

ನೇಸೆಂಟ್ ಇನ್ಫರ್ಮೇಷನ್ ಟೆಕ್ನಾಲಜಿ ಸೆನೆಟ್ ಜೂನ್‌ನಲ್ಲಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಮಧ್ಯಪ್ರವೇಶ ಮಾಡಬೇಕು ಎಂದು ಕೇಳಿತ್ತು. ಬಳಿಕ ಇನ್ಫೋಸಿಸ್ ಅಕ್ಟೋಬರ್ 2024 ರಲ್ಲಿ ದೃಢೀಕರಿಸಿದ ಸೇರ್ಪಡೆ ದಿನಾಂಕದೊಂದಿಗೆ ಸುಮಾರು 2,000 ನೇಮಕಾತಿ ಪತ್ರಗಳನ್ನು ವಿತರಿಸಿತ್ತು.

ಆದರೂ ಇನ್ನೂ 500ಕ್ಕೂ ಹೆಚ್ಚು ಅಭ್ಯರ್ಥಿಗಳು ಇನ್ನೂ ಕಂಪನಿಯ ಜಾಯಿನ್ ಲೆಟರ್ ಗಾಗಿ ಕಾಯುತ್ತಿದ್ದಾರೆ. ಈ ವಿಚಾರದ ಬಗ್ಗೆ ಇನ್ಫೋಸಿಸ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ ಎಂದು ಡಿಎಚ್‌ ವರದಿ ಮಾಡಿದೆ. 2022 ರಲ್ಲಿ ಕ್ಯಾಂಪಸ್ ಇಂಟರ್ವರ್ವ್ಯೂನಲ್ಲಿ ಆಯ್ಕೆಯಾಗಿದ್ದರೂ ಇನ್ನೂ ಜಾಯಿನಿಂಗ್ ಲೆಟರ್ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಅವರು ಹೊಸ ಪದವೀಧರರಿಗೆ ವಿಸ್ತರಿಸಿದ ಉದ್ಯೋಗ ಕೊಡುಗೆಗಳನ್ನು ಕಂಪನಿಯು ಗೌರವಿಸುತ್ತದೆ ಮತ್ತು ದಿನಾಂಕಗಳಲ್ಲಿ ಕೆಲವು ಬದಲಾವಣೆಗಳ ಹೊರತಾಗಿಯೂ ಅವರನ್ನು ಕಂಪನಿಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+