Google Layoffs: ಗೂಗಲ್ ಪೈಥಾನ್‌ ಪ್ರೋಗ್ರಾಮಿಂಗ್ ತಂಡದ ಉದ್ಯೋಗಿಗಳ ವಜಾ

ಬೆಂಗಳೂರು, ಏಪ್ರಿಲ್ 28: ಪ್ರತಿಷ್ಠತಿ ಗೂಗಲ್ ಕಂಪನಿಯು ಅತ್ಯಾಧುನಿಕ ಪ್ರೋಗ್ರಾಮಿಂಗ್ ಭಾಷೆಯಾಗಿರುವ ಪೈಥಾನ್ ಉದ್ಯೋಗಿಗಳಿಗೆ ಶಾಕ್ ನೀಡಿದೆ. ಪೈಥಾನ್ ತಂಡದ ಬಹುತೇಕ ಎಲ್ಲ ಉದ್ಯೋಗಿಗಳನ್ನು ತೆಗೆದಿದ್ದಾರೆ ಎನ್ನಲಾಗಿದೆ.

ಹೌದು, ಪ್ರಮುಖ ಬೆಳವಣಿಗೆಯೊಂದರಲ್ಲಿ ಗೂಗಲ್ ತನ್ನ ಸಂಪೂರ್ಣ ಪೈಥಾನ್ ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ಆನ್‌ಲೈನ್ ವರದಿ ಆಗಿದೆ. ಗೂಗಲ್‌ ಕ್ಯಾಲಿಫೋರ್ನಿಯಾ ಮೂಲದ ಕಂಪನಿಯು AI ಆಧಾರಿತ ಕಂಪನಿ ಆಗಿದೆ. ಕೃತಕ ಬುದ್ಧಿಮತ್ತೆಯ ಸಂಕೀರ್ಣ ವ್ಯವಸ್ಥೆಯಲ್ಲಿ ಪೈಥಾನ್ ಪ್ರೋಗ್ರಾಮಿಂಗ್‌ ನಲ್ಲಿ ಕೆಲಸ ಮಾಡುವ ಉದ್ಯೋಗಿಗನ್ನು ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

Google Layoffs Google Has Laid Off The Entire Python Team for Cheap Employees

ವಜಾ ಬಗ್ಗೆ ಮಾಜಿ ಉದ್ಯೋಗಿಗಳು ಏನಂದ್ರು

ಸಾಮಾಜಿಕ ಜಾತಲಾಣ ಟ್ವಿಟ್ಟರ್ (X) ನಲ್ಲಿ, ನೆಟ್ಟಿಗರೊಬ್ಬರು ಗೂಗಲ್ ವಜಾಗೊಳಿಸಿರುವ ಪೈಥಾನ್ ಉದ್ಯೋಗಿಗಳ ಅಂಕಿ ಸಂಖ್ಯೆ ಬಹಿರಗಂಪಡಿಸಬೇಕು ಎಂದು ಪೋಸ್ಟ್ ಮಾಡಿದ್ದಾರೆ. ಇವರು ಗೂಗಲ್ ಸಂಸ್ಥೆಯ ಮಾಜಿ ಉದ್ಯೋಗಿಗಳು ಎಂದು ಹೇಳಲಾಗುತ್ತಿದೆ

ಗೂಗಲ್ ಮಾಜಿ ಉದ್ಯೋಗಿಗಳು ಆನ್‌ಲೈನ್‌ನ ನಲ್ಲಿ ಅಪ್‌ಸ್ಟ್ರೀಮ್ ಪೈಥಾನ್‌ಗೆ ಕೊಡುಗೆ ನೀಡುವುದರ ಜೊತೆಗೆ, ನಾವು ಪೈಥಾನ್‌ನ ಸ್ಥಿರ ಆವೃತ್ತಿ ನಿರ್ವಹಿಸಿದ್ದೇವೆ. ಉತ್ತಮ ಕಾರ್ಯನಿರ್ವಹಿಸುತ್ತದೆ ನಾವು ಖಚಿತಪಡಿಸಿಕೊಂಡಿದ್ದೇವೆ.

ಕಡಿಮೆ ವೇತನದವರಿಗೆ ಹುಡುಕಾಟ?

ಬೇರೆಯವರು ಗೂಗಲ್ ಕಂಪನಿಯು ಯುನೈಟೆಡ್ ಸ್ಟೇಟ್ಸ್‌ನ ಹೊರಗೆ ಅತೀ ಕಡಿಮೆ ವೇತನದ ಆಯ್ಕೆಗಾಗಿ ಹಡುಕಾಟ ನಡೆಸಿದೆ. ಅದಕ್ಕೆ ನೌಕರರು ವಜಾಗೊಳಿಸಿದೆ ಎಂದು ಕೆಲವರು ಊಹಿಸಿದ್ದಾರೆ. ಪೈಥಾನ್ ಸದಸ್ಯರು ಮಾಸಿಕ 2.7 ರಿಂದ 3.6 ಲಕ್ಷದಷ್ಟಿತ್ತು. ವಾಷಿರ್ಕವಾಗಿ ಒಮ್ಮೆ ಏರಿಕೆ ಪರಿಗಣಿಸಲಾಗುತ್ತಿದೆ ಎಂದಿದ್ದಾರೆ.

Google Layoffs Google Has Laid Off The Entire Python Team for Cheap Employees

ಈಗಾಗಲೇ ನೌಕರಿ ಕಳೆದುಕೊಂಡು ಹತಾಶೆಯಾದ ಮಾಜಿ ಉದ್ಯೋಗಿಯೊಬ್ಬರು ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಎರಡು ಡಜನ್ ಉದ್ಯೋಗಿಗಳ ಅಡಿಯಲ್ಲಿನ ಕೆಲಸದ ಅನುಭವ, ಕಾರ್ಯನಿರ್ಬಂಧಿತ ಸ್ವರೂಪವನ್ನು ಹಂಚಿಕೊಂಡಿದ್ದಾರೆ.

ಅತ್ಯುತ್ತಮ ಸೇವೆ ಸಲ್ಲಿಸಿದ್ದೆವು

ಈ ಉದ್ಯೋಗಿಗಳ ಪೈಕಿ ವರ್ಷಗಳ ಕಾಲ ಸುಮಾರು 10 ಜನರೊಂದಿಗೆ ಕೂಡಿ ಕೆಲಸ ಮಾಡಿದ್ದೇವೆ. ನಮ್ಮ ತಂಡ ಸದಸ್ಯರು ಪರಿಸ್ಪರ ಮತ್ತು ಕೆಲಸವನ್ನು ಇಷ್ಟಪಟ್ಟಿದ್ದೇವೆ. ಕಂಪನಿಗಾಗಿ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇವೆ. ಕಡಿಮೆ ಸಿಬ್ಬಂದಿ ನಡುವೆ ಉತ್ತಮ ವ್ಯವಸ್ಥಾಪಕರ ಜತೆ ಕೆಲಸ ಮಾಡಿದ್ದೇವೆ. ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಪಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

ಇಸ್ರೇಲ್ ನ ಗಾಜಾದಲ್ಲಿ ಕಂಪನಿಯ ಕ್ಯಾಂಪಸ್‌ನೊಳಗೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಕಂಪನಿಯು ನ್ಯೂಯಾರ್ಕ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಗೂಗಲ್ ಹತ್ತಾರು ಕಾರ್ಮಿಕರನ್ನು ಕೆಲಸದಿಂತೆ ತೆಗೆದು ಹಾಕಿತ್ತು ಎಂದು ಮತ್ತೊಬ್ಬ ನೆಟ್ಟಿಗರು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+