ಕೆಪಿಎಸ್‌ಸಿ ನೇಮಕಾತಿ; 1 ಸಾವಿರಕ್ಕೂ ಅಧಿಕ ಹುದ್ದೆಗಳ ಭರ್ತಿ
Recommended Video
ಬೆಂಗಳೂರು, ಆಗಸ್ಟ್ 23 : ಕರ್ನಾಟಕ ಲೋಕಸೇವಾ ಆಯೋಗ 1 ಸಾವಿರಕ್ಕೂ ಅಧಿಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಿದೆ. ಸೆಪ್ಟೆಂಬರ್ 30ರೊಳಗೆ ಅಧಿಸೂಚನೆ ಪ್ರಕಟವಾಗಲಿದ್ದು, ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಸಿದ್ಧವಾಗಿ.
ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿನ 789 ಪ್ರಥಮ ದರ್ಜೆ ಸಹಾಯಕರು, 908 ದ್ವಿತೀಯ ದರ್ಜೆ ಸಹಾಯಕರು, 398 ಶೀಘ್ರಲಿಪಿಗಾರರು, 441 ಬೆರಳಚ್ಚುಗಾರರು ಸೇರಿದಂತೆ ಒಂದು ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಕೆಪಿಎಸ್‌ಸಿಯ ಪೂರ್ಣ ಪ್ರಮಾಣದ ಅಧ್ಯಕ್ಷರಾಗಿ ಷಡಕ್ಷರಿ ನೇಮಕಗೊಂಡಿದ್ದಾರೆ. ಆದ್ದರಿಂದ, ವಿಳಂಬವಾಗಿದ್ದ ವಿವಿಧ ಇಲಾಖೆಗಳ ನೇಮಕಾತಿಗಳಿಗೆ ಈಗ ಚಾಲನೆ ಸಿಕ್ಕಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿಗಳನ್ನು ಮಾಡಿಕೊಳ್ಳಲಾಗುತ್ತದೆ.
ಶುಶ್ರೂಷಕರು, ಗ್ರಂಥ ಪಾಲಕರು, ಸಹಾಯಕ ಗ್ರಂಥಪಾಲಕ, ಕಿರಿಯ ಇಂಜಿನಿಯರ್, ಲೆಕ್ಕ ಸಹಾಯಕರು, ಡಾಟಾ ಎಂಟ್ರಿ ಆಪರೇಟರ್, ಮಾರಾಟ ಸಹಾಯಕರು ಸೇರಿದಂತೆ ವಿವಿಧ ಇಲಾಖೆಗಳ ಹುದ್ದೆಗಳ ಭರ್ತಿಗೆ ಅಧಿಸೂಚನೆ ಸೆಪ್ಟೆಂಬರ್‌ನಲ್ಲಿ ಹೊರಬೀಳಲಿದೆ. ಯಾವ-ಯಾವ ಹುದ್ದೆ? ಇಲ್ಲಿದೆ ವಿವರ....

ಯಾವ-ಯಾವ ಹುದ್ದೆಗಳು
ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳ ನಿರ್ದೇಶನಾಲಯದಲ್ಲಿನ ಶುಶ್ರೂಷಕರು 105 +14 (ಹೈಕ), ಫಾರ್ಮಸಿಸ್ಟ್ 68+12 (ಹೈಕ) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿನ ಗ್ರಂಥಪಾಲಕರು 13,ಸಹಾಯಕ ಗ್ರಂಥಪಾಲಕ 13 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಿರಿಯ ಇಂಜಿನಿಯರ್ 19+02 (ಹೈಕ), ಫಾರ್ಮಾಸಿಸ್ಟ್ 4, ಲ್ಯಾಬ್ ಟೆಕ್ನಿಷಿಯನ್ 18+2 (ಹೈಕ), ಸ್ಟಾಫ್ ನರ್ಸ್ 26+2( ಹೈಕ), ಹಿರಿಯ ಮಹಿಳಾ ಆರೋಗ್ಯ ಸಹಾಯಕರು/ಲೇಡಿ ಹೆಲ್ತ್ ವಿಸಿಟರ್ 22+2(ಹೈಕ), ಕಿರಿಯ ಆರೋಗ್ಯ ಪರಿವೀಕ್ಷಕರು 8 ಹುದ್ದೆಗಳಿವೆ.

ಯಾವ-ಯಾವ ಇಲಾಖೆ
ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿನ ಗ್ರಂಥಾಲಯ ಸಹಾಯಕರು 1
ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತದಲ್ಲಿನ ಲೆಕ್ಕ ಸಹಾಯಕರು 32, ಡಾಡಾ ಎಂಟ್ರಿ ಆಪರೇಟರ್ 10
ಕೃಷಿ ಮಾರಾಟ ಇಲಾಖೆಯಲ್ಲಿನ ಮಾರುಕಟ್ಟೆ ಮೇಲ್ವಿಚಾರಕರು 6 (ಹೈಕ), ಮಾರಾಟ ಸಹಾಯಕರು 12 (ಹೈಕ)
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿನ ಗಣತಿದಾರರು 6, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಟೈಡ್ ವಾಚರ್ 1 ಹುದ್ದೆಗಳು.

ಅರ್ಜಿ ಹಾಕಲು ಸಿದ್ಧವಾಗಿ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿನ ನಿಲಯ ಮೇಲ್ವಿಚಾರಕರು (ಪುರುಷ) 4, ನಿಲಯ ಮೇಲ್ವಿಚಾರಕರು (ಮಹಿಳೆ) 8
ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿನ ಲೆಕ್ಕ ಸಹಾಯಕರು 18












Click it and Unblock the Notifications