ಕೊಪ್ಪಳ : ಗಂಗಾವತಿ ಐಟಿಐನಲ್ಲಿ ಕೆಲಸ ಖಾಲಿ ಇದೆ

Posted By:
Subscribe to Oneindia Kannada

ಕೊಪ್ಪಳ, ಆಗಸ್ಟ್ 23 : ಗಂಗಾವತಿಯಲ್ಲಿನ ಸರ್ಕಾರಿ ಕೈಗಾರಿಕಾ ಸಂಸ್ಥೆ (ಐಟಿಐ) ಪ್ರಸಕ್ತ ಸಾಲಿಗಾಗಿ ಅತಿಥಿ ಬೋಧಕರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಮಾಡಲು ಆಗಸ್ಟ್ 30 ಕೊನೆಯ ದಿನವಾಗಿದೆ.

ವಿದ್ಯುನ್ಮಾನ ದುರಸ್ತಿಗಾರ 2 ಹುದ್ದೆ, ಕಾರ್ಯಾಗಾರ ಲೆಕ್ಕ ಮತ್ತು ವಿಜ್ಞಾನ 1 ಹುದ್ದೆ, ಎಂಎಂವಿ 2 ಹುದ್ದೆ, ಮೆಕ್ ಅಗ್ರಿ ಮೆಕ್ 1 ಹುದ್ದೆ. ಈ ವೃತ್ತಿಗಳಿಗೆ ಖಾಯಂ ಸಿಬ್ಬಂದಿ ನೇಮಕಾತಿ ಆಗುವವರೆಗೆ ತಾತ್ಕಾಲಿಕವಾಗಿ ಅತಿಥಿ ಬೋಧಕರಾಗಿ ಸೇವೆ ಸಲ್ಲಿಸಲು ಅರ್ಜಿ ಸಲ್ಲಿಸಬಹುದು.[ಆ.27ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ]

Gangavathi govt ITI guest lecturers recruitment notification

ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಸೇವೆಯಿಂದ ನಿವೃತ್ತಿಯಾಗಿರುವ ನೌಕರರೂ ಸಹ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ ಸಂಭಾವನೆ ನೀಡಲಾಗುತ್ತದೆ.[ಜಯದೇವ ಆಸ್ಪತ್ರೆ ನೇಮಕಾತಿ ವಿವರ, ಹೈ-ಕರ್ನಾಟಕಕ್ಕೆ ಆದ್ಯತೆ]

ಅರ್ಜಿ ಸಲ್ಲಿಸುವವರು ಮೆಕ್ಯಾನಿಕ್, ಎಲೆಕ್ಟ್ರಾನಿಕ್ಸ್ ಮತ್ತು ಆಟೋಮೊಬೈಲ್‍ನಲ್ಲಿ ಪದವಿ ಅಥವಾ ಡಿಪ್ಲೋಮಾ ವಿದ್ಯಾರ್ಹತೆ ಪಡೆದಿರಬೇಕು. ಆಸಕ್ತರು ದಾಖಲೆಗಳ 2 ಸೆಟ್ ಜೆರಾಕ್ಸ್ ಪ್ರತಿಯೊಂದಿಗೆ ಆ.30 ರೊಳಗಾಗಿ ಅರ್ಜಿ ಸಲ್ಲಿಸಬಹುದು ಅಥವಾ ಖುದ್ದಾಗಿ ಪ್ರಾಚಾರ್ಯರನ್ನು ಸಂಪರ್ಕಿಸಬಹುದು.

ಅಭ್ಯರ್ಥಿಗಳ ಆಯ್ಕೆಗೆ ಆಯಾ ವಿಭಾಗದಲ್ಲಿ ಅನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುವುದು. ಆಯ್ಕೆಯಲ್ಲಿ ಪ್ರಾಚಾರ್ಯರ ನಿರ್ಧಾರವೇ ಅಂತಿಮ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Industrial Training Institute (ITI), Gangavathi, Koppal invited applications to recruit on vacant posts of guest lecturers. August 30, 2016 last date for submit application.
Please Wait while comments are loading...