ಫೆಡರಲ್ ಬ್ಯಾಂಕಿನಲ್ಲಿ ಗ್ರೇಡ್-1 ಅಧಿಕಾರಿ, ಕ್ಲರ್ಕ್ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು, ಜೂನ್ 05 : ಫೆಡರಲ್ ಬ್ಯಾಂಕಿನಲ್ಲಿ ಖಾಲಿ ಇರುವ ಗ್ರೇಡ್-1 ಅಧಿಕಾರಿ ಹಾಗೂ ಕ್ಲರ್ಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು ಜೂನ್ 16, 2017 ಅರ್ಜಿ ಸಲ್ಲಿಸಲು ಕೊನೆ ದಿನವಾಗಿದೆ.
ಹುದ್ದೆಗಳು: ಗ್ರೇಡ್-1 ಅಧಿಕಾರಿ ಹಾಗೂ ಕ್ಲರ್ಕ್
ಹುದ್ದೆ ಎಲ್ಲಿ? ಭಾರತದಾದ್ಯಂತ.[2626 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ]

ಗ್ರೇಡ್-1 ಅಧಿಕಾರಿ
* ವಯೋಮಿತಿ: 01/06/2017ಕ್ಕೆ ಅನ್ವಯವಾಗುವಂತೆ 26ದೊಳಗಿರಬೇಕು.
* ವೇತನ ಶ್ರೇಣಿ: 23700 ರಿಂದ 42020 ರು. ತಿಂಗಳಿಗೆ.
* ವಿದ್ಯಾರ್ಹತೆ: ಫೆಡರಲ್ ಬ್ಯಾಂಕ್ ಗ್ರೇಡ್-1 ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯುಜಿಸಿ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಪದವಿಯನ್ನು ಶೇ.60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಕ್ಲರ್ಕ್ ಹುದ್ದೆ:
* ವಯೋಮಿತಿ: 01/06/2017ಕ್ಕೆ ಅನ್ವಯವಾಗುವಂತೆ 24ದೊಳಗಿರಬೇಕು.
* ವೇತನ ಶ್ರೇಣಿ: 11765 ರಿಂದ 31540 ರು. ತಿಂಗಳಿಗೆ.
* ವಿದ್ಯಾರ್ಹತೆ: ಫೆಡರಲ್ ಬ್ಯಾಂಕ್ ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯುಜಿಸಿ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಪದವಿಯನ್ನು ಶೇ.55 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ಆಯ್ಕೆ ವಿಧಾನ: ಮೇಲಿನ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್ ಲೈನ್ ಪರೀಕ್ಷೆ ಇರಲಿದೆ. ನಂತರ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications