ESIC ನೇಮಕಾತಿ; ಅಕ್ಟೋಬರ್ 11ರಂದು ನೇರ ಸಂದರ್ಶನ

ಬೆಂಗಳೂರು, ಅಕ್ಟೋಬರ್ 04; ಕಾರ್ಮಿಕರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತರು ಅಕ್ಟೋಬರ್ 11ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಳ್ಗೊಳ್ಳಬಹುದಾಗಿದೆ.

9 ಸೀನಿಯರ್ ರೆಸಿಡೆಂಟ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ನೇರ ಸಂದರ್ಶನದ ಮೂಲಕ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಲು ಗರಿಷ್ಠ ವಯೋಮಿತಿ 45 ವರ್ಷಗಳು.

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 67,700 ರೂ. ವೇತನ ನಿಗದಿ ಮಾಡಲಾಗಿದೆ.

ESIC Recruitment Walk In Interview In October 11th

ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವ ವಿಶ್ವವಿದ್ಯಾಲಯಗಳಿಂದ ಎಮರ್ಜೆನ್ಸಿ ಮೆಡಿಸಿನ್/ ಅನಸ್ತೇಶಿಯಾ/ ರೆಸ್ಪಿರೇಟರಿ ಮೆಡಿಸಿನ್, ಆರ್ಥೋಪೆಡಿಕ್ಸ್‌, ಜನರಲ್ ಸರ್ಜರಿಯಲ್ಲಿ ಎಂಎಸ್, ಡಿಎನ್‌ಬಿಯಲ್ಲಿ ಎಂಡಿಯನ್ನು ಪೂರ್ಣಗೊಳಿಸಿರಬೇಕು.

ಅಕ್ಟೋಬರ್ 11ರಂದು ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ 2 ಪಾಸ್‌ಪೋರ್ಟ್‌ ಸೈಜ್‌ ಫೋಟೋ, ವಯಸ್ಸಿನ ದೃಢೀಕರಣ, ಶೈಕ್ಷಣಿಕ ದಾಖಲೆಗಳು, ಜಾತಿ, ಮೀಸಲಾತಿ ಪ್ರಮಾಣ ಪತ್ರಗಳ ಜೊತೆ ಹಾಜರಾಗಬೇಕಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಲು ವಿಳಾಸ ESIC Hospital, 3rd Block, Rajaji Nagar, Bengaluru 560010.

ಅಕ್ಟೋಬರ್ 7ರಂದು ಸಂದರ್ಶನ; ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಬೆಂಗಳೂರು ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಕಲಬುರಗಿ ಜಂಟಿಯಾಗಿ ಸ್ವಯಂ ಉದ್ಯಮಗಳನ್ನು ಪ್ರಾರಂಭಿಸಲು ಆಸಕ್ತರಿರುವ ಕಲಬುರಗಿ ಜಿಲ್ಲೆಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿಗಳಿಗೆ 10 ದಿನಗಳ ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮವವನ್ನು ಅಕ್ಟೋಬರ್ ಮಾಹೆಯ ಎರಡನೇ ವಾರದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.

ಆಸಕ್ತರಿಗೆ ವಯೋಮಿತಿ 20 ರಿಂದ 40 ವರ್ಷಗಳು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿಗಳು ಸದರಿ ತರಬೇತಿಗಾಗಿ ಆಯ್ಕೆ ಮಾಡಿಕೊಳ್ಳಲು 2022ರ ಅಕ್ಟೋಬರ್ 7 ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಜಂಟಿ ನಿರ್ದೇಶಕರು, ಸಿಡಾಕ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ (ವಿಭಾಗೀಯ ಕಚೇರಿ) ಸಿಓಇ ಕಟ್ಟಡ, ಸರ್ಕಾರಿ ಬಾಲಕರ ಐಟಿಐ ಆವರಣ, ಎಂ. ಎಸ್. ಕೆ. ಮಿಲ್ ರಸ್ತೆ, ಕಲಬುರಗಿ 585102 ವಿಳಾಸದಲ್ಲಿ ನೇರ ಸಂದರ್ಶನ ನಡೆಯಲಿದೆ.

ಅರ್ಹ ಅಭ್ಯರ್ಥಿಗಳು ಆಧಾರ್ ಕಾರ್ಡ್ ಪ್ರತಿ, ರೇಷನ್ ಕಾರ್ಡ್‌ ಪ್ರತಿ, ಜಾತಿ ಪ್ರಮಾಣ ಪತ್ರ ಪ್ರತಿ, ಇತ್ತಚಿನ 2 ಭಾವಚಿತ್ರ, ವಿದ್ಯಾಭ್ಯಾಸದ ಅಂಕಪಟ್ಟಿ ಪ್ರತಿ ಮತ್ತು ಇತರೆ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಿಡಾಕ್ ಜಂಟಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 9108972833.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+