ನೌಕರರ ವಿಮಾ ನಿಗಮದಲ್ಲಿ 1938 ಹುದ್ದೆಗಳಿವೆ, ಅರ್ಜಿ ಹಾಕಿ
ನವದೆಹಲಿ, ಮಾರ್ಚ್ 26: ರಾಜ್ಯ ನೌಕರರ ವಿಮಾ ನಿಗಮ(ESIC)ದಲ್ಲಿ 1938 ಹುದ್ದೆಗಳ ನೇಮಕಾತಿಗಾಗಿ 2019-20ರ ಇಎಸ್ಐಎಸಿ ನೇಮಕಾತಿಯಡಿ ಅಧಿಸೂಚನೆ ಹೊರಡಿಸಲಾಗಿದೆ. ಸ್ಟೆನೊಗ್ರಾಫರ್, ಕ್ಲರ್ಕ್ ಹುದ್ದೆಗೆ ಆಯ್ಕೆಯಾಗ ಬಯಸುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್‌ಲೈನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, 2019ರ ಏಪ್ರಿಲ್ 15ರೊಳಗೆ ಅರ್ಜಿ ಸಲ್ಲಿಸಬೇಕು.
ಉದ್ಯೋಗ ವಿವರ
ಸಂಸ್ಥೆ ಹೆಸರು: Employee s State Insurance Corporation (ESIC)
ಒಟ್ಟು ಹುದ್ದೆಗಳು: 1938
ಹುದ್ದೆಯ ಹೆಸರು: Stenographer, Under Division Clerk
ಕೆಲಸದ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆಯ ದಿನ: 15 ಏಪ್ರಿಲ್ 2019
ಅರ್ಜಿ ಶುಲ್ಕ :
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ/ಇಲಾಖಾ ಅಭ್ಯರ್ಥಿಗಳು, ಮಹಿಳಾ ಅಭ್ಯರ್ಥಿಗಳು ಮತ್ತು ಮಾಜಿ ಸೈನಿಕರಿಗೆ: 250 ರೂ.
ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ: 500 ರು

ಶೈಕ್ಷಣಿಕ ಅರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 12ನೇ ತರಗತಿ, ಪದವಿ ಅಥವಾ ತತ್ಸಮಾನ ಅರ್ಹತೆ
ವಯೋಮಿತಿ :
ಕನಿಷ್ಟ ವಯಸ್ಸು : 18 ವರ್ಷ
ಗರಿಷ್ಠ ವಯಸ್ಸು: 27 ವರ್ಷ
ಸಂಬಳ ನಿರೀಕ್ಷೆ: 5,200 ರಿಂದ 20,200 ರು ಪ್ರತಿ ತಿಂಗಳು
ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಕಂಪ್ಯೂಟರ್ ಟೆಸ್ಟ್ ಅಧಾರದ ಮೇಲೆ.
ಪ್ರಮುಖ ದಿನಾಂಕಗಳು:
ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : ಏಪ್ರಿಲ್ 15, 2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications