ಸಿಆರ್‌ಪಿ, ಬಿಆರ್‌ಪಿ, ಇಸಿಓ, ತಾಂತ್ರಿಕ ಸಹಾಯಕ ನೇಮಕಾತಿ; ತಿದ್ದುಪಡಿ

ಬೆಂಗಳೂರು, ಜನವರಿ 03: ಆಯುಕ್ತರ ಕಛೇರಿ ಶಾಲಾ ಶಿಕ್ಷಣ ಇಲಾಖೆ ನೇಮಕಾತಿಯವೊಂದರಲ್ಲಿ ಬದಲಾವಣೆಯನ್ನು ಮಾಡಿದೆ. ಸಿಆರ್‌ಪಿ, ಬಿಆರ್‌ಪಿ, ಇಸಿಓ ಮತ್ತು ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಸಂಬಂಧಿಸಿದಂತೆ ನೇಮಕಾತಿ ಅಧಿಸೂಚನೆಯಲ್ಲಿ ತಿದ್ದುಪಡಿ ಮಾಡಲಾಗಿದೆ. ಸೇರ್ಪಡೆ, ಮಾರ್ಪಾಡುಗಳ ಕುರಿತು ಹೊಸ ಪ್ರಕಟಣೆ ಹೊರಡಿಸಲಾಗಿದೆ.

ಈ ತಿದ್ದುಪಡಿ ಅಧಿಸೂಚನೆ 2023-24ನೇ ಸಾಲಿಗೆ ರಾಜ್ಯದ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ (Specified Post), ಲಿಖಿತ ಪರೀಕ್ಷೆ ನಡೆಸುವ ಮೂಲಕ ಭರ್ತಿ ಮಾಡುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

Education Department Recruitment Modification In Notification

2023-24ನೇ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ/ ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ಶಿಕ್ಷಕರು/ ಮುಖ್ಯ ಶಿಕ್ಷಕರನ್ನು ಅಧಿಕಾರಿಗಳನ್ನು ನಿರ್ದಿಷ್ಟಪಡಿಸಿದ (Specified Post) ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮುಖಾಂತರ ಆಯ್ಕೆ ಮಾಡಿಕೊಳ್ಳಲು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಪ್ರಸ್ತುತ ಆಡಳಿತಾತ್ಮಕ ಹಿತದೃಷ್ಟಿಯಿಂದ ಕೆಲವು ಅಂಶಗಳನ್ನು ಮಾರ್ಪಡಿಸಿ/ ಸೇರ್ಪಡೆ ಮಾಡಿ ತಿದ್ದುಪಡಿ ಮಾಡಿ ಆದೇಶಿಸಿದೆ ಎಂದು ಹೇಳಿದೆ.

ತಿದ್ದುಪಡಿ ಅಂಶಗಳು : ಹುದ್ದೆವಾರು ಆಯ್ಕೆಯಾಗಲು ಇರಬೇಕಾದ ಅರ್ಹತೆಗಳು ಕ್ರಮ ಸಂಖ್ಯೆ 4 ತಾಂತ್ರಿಕ ಸಹಾಯಕರು (ಪ್ರಾಥಮಿಕ) ಹುದ್ದೆಗಳು ಲಭ್ಯವಿಲ್ಲದ ಪ್ರಯುಕ್ತ ಅರ್ಜಿ ಸಲ್ಲಿಸಲು ಅವಕಾಶ ಅವಕಾಶವಿರುವುದಿಲ್ಲ. ಅನುಬಂಧ-3ರ ನಿರ್ದಿಷ್ಟಪಡಿಸಿದ ಹುದ್ದೆಯ ಲಿಖಿತ ಲಿಖಿತ ಪರೀಕ್ಷೆಗೆ ಪಠ್ಯಕ್ರಮ ಪ್ರಾಥಮಿಕ ಶಿಕ್ಷಕರ ತತ್ಸಮಾನ ಶ್ರೇಣಿ (CRP, B.R.P ಮತ್ತು E.C.O).

ಪ್ರೌಢ ಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ಗ್ರೂಪ್-ಬಿ ವೃಂದದ ಬಿ.ಆರ್.ಸಿ, ಎ.ಪಿ.ಸಿ.ಒ (ಸಮಗ್ರ ಶಿಕ್ಷಣ ಕರ್ನಾಟಕ), ವಿಷಯ ಪರಿವೀಕ್ಷಕರು ಹಾಗೂ ಸಹಾಯಕ ನಿರ್ದೇಶಕರು (ಮಧ್ಯಾಹ್ನ ಉಪಹಾರ ಯೋಜನೆ) ಈ ಹುದ್ದೆಗಳಿಗೆ ಆಯ್ಕೆಯಾಗಲು ಇರಬೇಕಾದ ಅರ್ಹತೆಗಳು.

ಪ್ರೌಢ ಶಾಲಾ ಮುಖ್ಯ ಶಿಕ್ಷಕರು ತತ್ಸಮಾನ ಗ್ರೂಪ್ -ಬಿ ವೃಂದದ ಬಿ.ಆರ್.ಸಿ, ಎ.ಪಿ.ಸಿ.ಓ (ಸಮಗ್ರ ಶಿಕ್ಷಣ ಕರ್ನಾಟಕ), ವಿಷಯ ಪರಿವೀಕ್ಷಕರು ಹಾಗೂ ಸಹಾಯಕ ನಿರ್ದೇಶಕರು (ಮಧ್ಯಾಹ್ನ ಉಪಹಾರ ಯೋಜನೆ) ಆಯ್ಕೆ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಅಂತಿಮ ದಿನಾಂಕಕ್ಕೆ 55 ವರ್ಷಗಳ ವಯೋಮಿತಿ ಒಳಗಿರಬೇಕು. ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಆಯಾ ಕರ್ತವ್ಯ ನಿರತ ವಿಭಾಗದಲ್ಲಿ ಲಭ್ಯವಿರುವ ನಿರ್ದಿಷ್ಟಪಡಿಸಿದ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು. ಆಯಾ ವಿಭಾಗದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಆದ್ಯತೆ/ ಮೆರಿಟ್ ಆಧಾರದ ಮೇಲೆ ಸ್ಥಳ ಹಂಚಿಕೆ ಮಾಡಲಾಗುತ್ತದೆ.

ಪ್ರಸ್ತುತ ಸರ್ಕಾರದ ಆದೇಶದಂತೆ ತಾಂತ್ರಿಕ ಸಹಾಯಕರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಈ ಬಾರಿಗೆ ಮಾತ್ರ ಅಧಿಸೂಚನೆಯಲ್ಲಿರುವ ನಿಯಮಗಳನ್ವಯ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸದರಿಯವರು ಆಯ್ಕೆಯಾದಲ್ಲಿ ಮಾತ್ರ ಕೌನ್ಸಿಲಿಂಗ್ ಮೂಲಕ ಸ್ಥಳ ಆಯ್ಕೆ ಮಾಡಲು ಅವಕಾಶವಿರುತ್ತದೆ. ಒಂದು ವೇಳೆ ತಾಂತ್ರಿಕ ಸಹಾಯಕರುಗಳು ಆಯ್ಕೆಯಾಗದಿದ್ದಲ್ಲಿ ಅಂತಹವರುಗಳನ್ನು ಕೌನ್ಸಿಲಿಂಗ್ ಮೂಲಕ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಶಾಲೆಗೆ ಸ್ಥಳ ನಿಯುಕ್ತಿಗೊಳಿಸಲಾಗುವುದು. ಅಂತಹ ಶಿಕ್ಷಕರು ಜೇಷ್ಠತೆ ನಿಯಮಾನುಸಾರ ಆ ಜಿಲ್ಲೆ/ ವಿಭಾಗದಲ್ಲಿ ಜೇಷ್ಠತೆಯಲ್ಲಿ ಕೊನೆಯ ಸ್ಥಾನವನ್ನು ಪಡೆಯುತ್ತಾರೆ.

ಅದೇ ರೀತಿ ಡಯಟ್‌ಗಳಲ್ಲಿ ಕರ್ತವ್ಯ ನಿರತ ಪ್ರೌಢ ಶಾಲಾ ವಿಭಾಗದ ತಂತ್ರಜ್ಞರು ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಡಯಟ್‌ಗಳಲ್ಲಿ ಕರ್ತವ್ಯ ನಿರತ ಪ್ರಾಥಮಿಕ ವಿಭಾಗದ ತಂತ್ರಜ್ಞರು C.R.P, B.R.P ಮತ್ತು E.CO ಹುದ್ದೆಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ.

ಹೊಸ ಸೇರ್ಪಡೆಗಳು: ನಿರ್ದಿಷ್ಟಪಡಿಸಿದ ಹುದ್ದೆಗೆ ಪರೀಕ್ಷೆ ಬರೆದು ಆಯ್ಕೆಯಾದವರಿಗೆ ಕೌನ್ಸಿಲಿಂಗ್‌ನಲ್ಲಿ ಮೊದಲ ಆಧ್ಯತೆಯನ್ನು ನೀಡಿ ನಿರ್ದಿಷ್ಟಪಡಿಸಿದ ಖಾಲಿ ಹುದ್ದೆಗೆ ಸ್ಥಳನಿಯುಕ್ತಿಗೊಳಿಸಲಾಗುವುದು. ತದನಂತರ ನಿರ್ದಿಷ್ಟಪಡಿಸಿದ ಹುದ್ದೆಯಲ್ಲಿ ಗರಿಷ್ಟ 5 ವರ್ಷ ಪೂರೈಸಿದವರು ಹಿಮ್ಮುಖ ವರ್ಗಾವಣೆಯಲ್ಲಿ ಹೊರಗೆ ಹೋಗುವವರಿಗೆ ಶಾಲೆಯಲ್ಲಿನ ಖಾಲಿ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಲು ಆದ್ಯತೆಯನ್ನು ನೀಡಲಾಗುವುದು.

ಪ್ರಾಥಮಿಕ ವಿಭಾಗ : - ಪತ್ರಿಕೆ-2 ಸಿ.ಆರ್.ಪಿ/ ಬಿಆರ್.ಪಿ/ ಶಿಕ್ಷಣ ಸಂಯೋಜಕರ ಹುದ್ದೆಗೆ ಪ್ರತ್ಯೇಕ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. ಹುದ್ದೆಯ ಕಾರ್ಯ ವ್ಯಾಪ್ತಿಗೆ ಸಂಬಂದಪಟ್ಟ ವಿಷಯಗಳು ಮತ್ತು 1 ರಿಂದ 10ನೇ ತರಗತಿಯವರೆಗಿನ ಪಠ್ಯವಸ್ತು.

ಪ್ರೌಢಶಾಲಾ ವಿಭಾಗ : - ಪತ್ರಿಕೆ-2 ಶಿಕ್ಷಣ ಸಂಯೋಜಕರು ಮತ್ತು ಬಿ.ಆರ್.ಪಿ (ಪ್ರೌಢ) ಹಾಗೂ ತಾಂತ್ರಿಕ ಸಹಾಯಕರ ಪ್ರತ್ಯೇಕ ಪ್ರಶ್ನೆ ಪರೀಕ್ಷೆಗಳಿರುತ್ತದೆ. ಶಿಕ್ಷಣ ಸಂಯೋಜಕರು ಹುದ್ದೆಗಾಗಿ ಈ ಹುದ್ದೆಯ ವ್ಯಾಪ್ತಿಗೆ ಸಂಬಂಧಿಸಿದಂತೆ ವಿಶೇಷವಾಗಿ ಪ್ರೋತ್ಸಾಹದಾಯಕ ಯೋಜನೆಗಳಿಗೆ ಸಂಬಂಧಿಸಿದ ವಿಷಯಗಳು ಹಾಗೂ ಗುಣಾತ್ಮಕ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು, 10ನೇ ತರಗತಿಯವರೆಗಿನ ಪಠ್ಯವಸ್ತು ಆಧಾರಿತ ಎಲ್ಲಾ ವಿಷಯಗಳು, ತಾಂತ್ರಿಕ ಸಹಾಯಕರ ಹುದ್ದೆಗೂ ಮೇಲಿನಂತೆ ಪಠ್ಯಕ್ರಮ ಇರುತ್ತದೆ.

ಬಿ.ಆರ್.ಪಿ ಹುದ್ದೆಗಾಗಿ ಕಲಾ ಮತ್ತು ವಿಜ್ಞಾನ ವಿಷಯಗಳಿಗೆ ಪ್ರತ್ಯೇಕ ಪ್ರಶ್ನೆ ಪತ್ರಿಕೆಗಳಿರುತ್ತವೆ. ಬಿ.ಆರ್.ಪಿ ವಿಜ್ಞಾನ ಕಾರ್ಯವ್ಯಾಪ್ತಿಗೆ ಸಂಬಂಧಪಟ್ಟ ವಿಷಯಗಳು, ವಿಶೇಷವಾಗಿ ಸರ್ವಶಿಕ್ಷಣಾಭಿಯಾನ ಕಾರ್ಯಕ್ರಮಗಳು, ಸ್ಯಾಟ್ಸ್ ಸೇವಾನಿರತ ತರಬೇತಿ ಹಾಗೂ ಅನುಪಾಲನೆ, ಗುಣಮಟ್ಟ ಸಾಧಿಸಲು ಉಪಕ್ರಮ. ಮೌಲ್ಯಾಂಕನ, ಇತ್ಯಾದಿ. ಗಣಿತ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ 10ನೇ ತರಗತಿಯವರೆಗಿನ ಪಠ್ಯವಸ್ತು ಆಧಾರಿತ ವಿಷಯಗಳು.

ಬಿಆರ್‌ಪಿ ಕಲಾವಿಭಾಗ ಕಾರ್ಯವ್ಯಾಪ್ತಿಗೆ ಸಂಬಂಧಪಟ್ಟ ವಿಷಯಗಳು, ವಿಶೇಷವಾಗಿ ಸರ್ವ ಶಿಕ್ಷಣಾಭಿಯಾನ ಕಾರ್ಯಕ್ರಮಗಳು ಸ್ಯಾಟ್ಸ್ ಸೇವಾನಿರತ ತರಬೇತಿಗಳು ಹಾಗೂ ಅನುಪಾಲನೆ, ಗುಣಮಟ್ಟ ಸಾಧಿಸಲು ಉಪಕ್ರಮ, ಮೌಲ್ಯಾಂಕನ. ಇತ್ಯಾದಿ. ಭಾಷೆ (ಕನ್ನಡ ಮತ್ತು ಇಂಗ್ಲೀಷ್) ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ 10ನೇ ತರಗತಿವರೆಗಿನ ಪಠ್ಯವಸ್ತು. ಉಳಿದಂತೆ ದಿನಾಂಕ: 16/12/2023 ರಲ್ಲಿನ ಅಧಿಸೂಚನೆಯಲ್ಲಿನ ಎಲ್ಲಾ ಷರತ್ತುಗಳು, ಸೂಚನೆಗಳು, ಯಥಾವತ್ತಾಗಿ ಮುಂದುವರೆಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+