30 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಇಸಿಐಎಲ್
ಬೆಂಗಳೂರು, ಅಕ್ಟೋಬರ್ 03 : ಇಸಿಐಎಲ್ 30 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಅಕ್ಟೋಬರ್ 15, 2018 ಕೊನೆಯ ದಿನವಾಗಿದೆ.
ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಇಸಿಐಎಲ್) ಪರ್ಸನಲ್ ಆಫೀಸರ್ ಮತ್ತು ಅಕೌಂಟ್ಸ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ದರಿರಬೇಕು.
ಪರ್ಸನಲ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಚ್ ಆರ್/ಐಆರ್/ಪಿಎಂನಲ್ಲಿ ಸ್ನಾತಕೋತ್ತರ ಪದವಿಯನ್ನು ಮೊದಲ ದರ್ಜೆಯಲ್ಲಿ ಪಾಸಾಗಿರಬೇಕು ಅಥವ ಎರಡು ವರ್ಷದ ಡಿಪ್ಲೊಮಾವನ್ನು ಮೊದಲ ದರ್ಜೆಯಲ್ಲಿ ಪಾಸಾಗಿರಬೇಕು. ಎಂಬಿಎ ಮುಗಿಸಿದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅಕೌಂಟ್ಸ್ ಆಫೀಸರ್ ಹುದ್ದೆಗೆ ಸಿಎ/ಐಸಿಡಬ್ಯುಎ ಪೂರ್ಣಗೊಳಿಸಿರಬೇಕು. ಫೈನಾನ್ಸ್, ಕಾಸ್ಟಿಂಗ್, ಆಡಿಟ್ ಎಂಡ್ ಪ್ರಾಜೆಕ್ಟ್ ಇವ್ಯಾಲ್ಯುಯೇಷನ್ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ವಯೋಮಿತಿ
* ಪರ್ಸನಲ್ ಆಫೀಸರ್ ಹುದ್ದೆಗೆ 30 ವರ್ಷ
* ಅಕೌಂಟ್ಸ್ ಆಫೀಸರ್ ಹುದ್ದೆಗೆ 28 ವರ್ಷಗಳು (1 ಆಗಸ್ಟ್ 2018ಕ್ಕೆ ಅನ್ವಯವಾಗುವಂತೆ)
ವೇತನ ಶ್ರೇಣಿ : 40000-140000 ಪ್ರತಿ ತಿಂಗಳು.
ಅರ್ಜಿ ಶುಲ್ಕಗಳು : ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 500 ರೂ.ಗಳು. ಎಸ್‌ಸಿ/ಎಸ್‌ಟಿ/ಅಂಗವಿಕಲ/ನಿವೃತ್ತ ಯೋಧರಿಗೆ ಯಾವುದೇ ಶುಲ್ಕವಿಲ್ಲ.
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ











Click it and Unblock the Notifications