DULT Karnataka Jobs: ಬೆಂಗಳೂರಿನಲ್ಲಿ ಉದ್ಯೋಗ ಖಾಲಿ ಇದೆ: ಕೂಡಲೇ ಅರ್ಜಿ ಹಾಕಿ

ಬೆಂಗಳೂರು, ಫೆಬ್ರವರಿ 19: ಕರ್ನಾಟಕದ ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ತನ್ನಲ್ಲಿ ಖಾಲಿ ಇರುವ ಕೆಲವು ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಬೆಂಗಳೂರಿನಲ್ಲಿ ಅತ್ಯುತ್ತಮ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸದವಕಾಶವಾಗಿದೆ.

ಕರ್ನಾಟಕದ ನಗರ ಭೂ ಸಾರಿಗೆ ನಿರ್ದೇಶನಾಲಯ (DULT)ದಲ್ಲಿ ಒಟ್ಟು ಎರಡು ಎಂಜಿನಿಯರ್, ಅರ್ಬನ್ ಟ್ರಾನ್ಸ್​ಪೋರ್ಟ್​ ಸ್ಪೆಷಲಿಸ್ಟ್​​ ಹುದ್ದೆಗಳು ಖಾಲಿ ಇವೆ. ಅರ್ಹ ಸಕ್ತರು ಅಭ್ಯರ್ಥಿಗಳು ಈ ಕೂಡಲೇ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಮೊದಲು ಒಮ್ಮೆ ಅಧಿಸೂಚನೆ ಓದಿಕೊಂಡು ಮಾಹಿತಿ ತಿಳಿದು ಅರ್ಜಿಸಲ್ಲಿಸಿದರೆ ಒಳಿತು. ಅರ್ಜಿ ಸಲ್ಲಿಕೆಗು ಮೊದಲು ನೇಮಕಾತಿಯ ಪೂರ್ಣ ಮಾಹಿತಿ ಇಲ್ಲಿದೆ.

 DULT Karnataka Recruitment 2024: DULT Invites Application For two Vacant Post, Check dated

ನೇಮಕಾತಿ ಪೂರ್ಣ ಮಾಹಿತಿ

ಸಂಸ್ಥೆ ಹೆಸರು: ನಗರ ಭೂ ಸಾರಿಗೆ ನಿರ್ದೇಶನಾಲಯ (DULT)

ಹುದ್ದೆ ಹೆಸರು: ಸಿವಿಲ್ ಎಂಜಿನಿಯರ್ & ಅರ್ಬನ್ ಟ್ರಾನ್ಸ್​ಪೋರ್ಟ್​ ಸ್ಪೆಷಲಿಸ್ಟ್

ಒಟ್ಟು ಖಾಲಿ ಹುದ್ದೆ: ಎರಡು

ಅರ್ಬನ್ ಟ್ರಾನ್ಸ್​ಪೋರ್ಟ್​ ಸ್ಪೆಷಲಿಸ್ಟ್: 1

ಎಂಜಿನಿಯರ್- ಸಿವಿಲ್: 1

ಅರ್ಜಿ ಸಲ್ಲಿಕೆ ಕೊನೆ ದಿನ: ಫೆಬ್ರವರಿ 20

ಶೈಕ್ಷಣಿಕ ಅರ್ಹತೆ

ಕರ್ನಾಟಕದ ನಗರ ಭೂ ಸಾರಿಗೆ ನಿರ್ದೇಶನಾಲಯ (DULT) ಅಧಿಸೂಚನೆ ಪ್ರಕಾರ, ಅರ್ಬನ್ ಟ್ರಾನ್ಸ್​ಪೋರ್ಟ್​ ಸ್ಪೆಷಲಿಸ್ಟ್​​- ಟ್ರಾನ್ಸ್​ಪೋರ್ಟೇಶನ್ ಎಂಜಿನಿಯರಿಂಗ್​/ ಟ್ರಾನ್ಸ್​ಪೋರ್ಟೇಶನ್ ಪ್ಲ್ಯಾನಿಂಗ್ ಹುದ್ದೆ ಪಡೆಯುವವರು ಸ್ನಾತಕೋತ್ತರ ಪದವಿ ಪಡೆದಿರಬೇಕು. ಮತ್ತು ಸಿವಿಲ್ ಎಂಜಿನಿಯರ್ ಹುದ್ದೆ ಪಡೆಯುವವರು ಎಂಜಿನಿಯರಿಂಗ್​​ನಲ್ಲಿ ಪದವಿ ಉತ್ತೀರ್ಣ ಆಗಿರುವುದು ಕಡ್ಡಾಯ ಎಂದು ತಿಳಿಸಲಾಗಿದೆ.

ವಯಸ್ಸು

ಈ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕು ಎಂದು ತಿಳಿಸಲಾಗಿದೆ. ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮೀಸಲಾತಿ ಅನುಸಾರ ವಯೋಮಿತಿ ಸಡಿಲಿಕೆ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.

 DULT Karnataka Recruitment 2024: DULT Invites Application For two Vacant Post, Check dated

ಅಭ್ಯರ್ಥಿಗಳ ಆಯ್ಕೆ ಹೇಗೆ?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುವುದು. ತದನಂತರ ಅವರು ಸಂದರ್ಶನ ಪಾಸಾಗಬೇಕು. ಬಳಿಕವೇ ಅವರಿಗೆ ಬೆಂಗಳೂರಿನಲ್ಲಿ ಪೋಸ್ಟಿಂಗ್ ನೀಡಲಾಗುವುದು. ಮಾಸಿಕ ವೇತನ ಸದ್ಯಕ್ಕೆ ನಿಗದಿಪಡಿಸಲಾಗಿಲ್ಲ. ಯಾವ ವರ್ಗದ ಜಾರಿಯವರಿಗೆ ಅಜಿ ಶುಲ್ಕವಿಲ್ಲ ಎಂದು ಡಲ್ಟ್‌ ತಿಳಿಸಿದೆ.

ಅರ್ಜಿ ಸಲ್ಲಿಕೆ ವಿಧಾನ

ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲಾತಿಗಳ ಸಮೇತವಾಗಿ ಆನ್​ಲೈನ್ ಮೂಲಕ ಕೂಡಲೇ ಅರ್ಜಿ ಸಲ್ಲಿಸಬೇಕು. ಅದಕ್ಕಾಗಿ ನೀವು ಮೊದಲು ಈ ಲಿಂಕ್ https://dult.karnataka.gov.in/en ಗೆ ಭೇಟಿ ನೀಡಬೇಕು. ಹೆಚ್ಚಿನ ಮಾಹಿತಿ ಈ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ಕೊಡಿ.

ನೆನಪಿಡಬೇಕಾದ ದಿನಗಳು

ಅರ್ಜಿ ಸಲ್ಲಿಕೆ ಆರಂಭವಾದ ದಿನ: ಫೆಬ್ರವರಿ 06

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ಫೆಬ್ರವರಿ 20 (ನಾಳೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+