DRDO ನೇಮಕಾತಿ 2019: 351 ಟೆಕ್ನಿಷಿಯನ್ ಹುದ್ದೆಗಳಿವೆ
ಬೆಂಗಳೂರು, ಮೇ 27: ಡಿಆರ್ ಡಿಒ (Defence Research and Development Organization) ಸಂಸ್ಥೆ ತನ್ನ 2019ನೇ ಸಾಲಿನ ನೇಮಕಾತಿ ಮುಂದುವರೆಸಿದೆ. 351ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ, ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಜೂನ್ 26ರೊಳಗೆ ಅರ್ಹ, ಅಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ: Defence Research and Development Organization (ಡಿಆರ್ ಡಿಒ)
ಹುದ್ದೆ ಹೆಸರು: ಟೆಕ್ನಿಷಿಯನ್ ಎ
ಒಟ್ಟು ಹುದ್ದೆ : 351
ಹುದ್ದೆ ಎಲ್ಲಿ?: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 26.06.2019

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಿಕ್ಷಣ ಸಂಸ್ಥೆಯಿಂದ ಹತ್ತನೇ ತರಗತಿ, ಐಟಿಐ ಪ್ರಮಾಣ ಪತ್ರ ಪಡೆದಿರಬೇಕು.
ವಯೋಮಿತಿ: 18 ರಿಂದ 28 ವರ್ಷ
ನೇಮಕಾತಿ : ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ಟ್ರೇಡ್ ಟೆಸ್ಟ್.
ಅರ್ಜಿ ಸಲ್ಲಿಕೆ ಹೇಗೆ?: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಕಚೇರಿಯ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ / ಮಹಿಳಾ : ಯಾವುದೇ ಶುಲ್ಕವಿಲ್ಲ.
ಇತರೆ : 100
ಪ್ರಮುಖ ದಿನಾಂಕ
ಆನ್ ಲೈನಲ್ಲಿ ಅರ್ಜಿ ಸಲ್ಲಿಕೆ ಆರಂಭ: 03.06.2019
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 26.06.2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications