ಡಿಆರ್ ಡಿಒನಲ್ಲಿ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಆಹ್ವಾನ
ಬೆಂಗಳೂರು, ಆಗಸ್ಟ್ 23 : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ)ಯಲ್ಲಿ ಖಾಲಿ ಇರುವ 120 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
90 ಪದವಿ ಅಪ್ರೆಂಟಿಸ್ ಟ್ರೈನಿ ಹಾಗೂ 30 ಡಿಪ್ಲಮೋ ಅಪ್ರೆಂಟಿಸ್ ಟ್ರೈನಿ ಒಟ್ಟು 120 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ ಸೆಪ್ಟೆಂಬರ್ 05, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

1. 90 ಪದವಿ ಅಪ್ರೆಂಟಿಸ್ ಟ್ರೈನಿ ಹುದ್ದೆ
* ವಿದ್ಯಾರ್ಹತೆ: ಡಿಗ್ರಿಯಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.
* ವಯೋಮಿತಿ: 01/09/2017ಕ್ಕೆ ಅನ್ವಯವಾಗುವಂತೆ 18ರಿಂದ 27 ವರ್ಷ.
2. 30 ಡಿಪ್ಲಮೋ ಅಪ್ರೆಂಟಿಸ್ ಟ್ರೈನಿ ಹುದ್ದೆ
* ವಿದ್ಯಾರ್ಹತೆ: ಡಿಪ್ಲಮೋನಲ್ಲಿ ಇಂಜಿನಿಯರಿಂಗ್ ತೇರ್ಗಡೆಯಾಗರಬೇಕು.
* ವಯೋಮಿತಿ: 01/09/2017ಕ್ಕೆ ಅನ್ವಯವಾಗುವಂತೆ 18ರಿಂದ 27 ವರ್ಷ.
ಆಯ್ಕೆ ವಿಧಾನ: ಪದವಿಯಲ್ಲಿ ಪಡೆದ ಅಂಕಗಳ ಮೆರಿಟ್ ಹಾಗೂ ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ.
ಈ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿಯಬೇಕಿದ್ದಲ್ಲಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications