ಪೊಲೀಸ್ ನೇಮಕಾತಿ; ಹಾಲ್ ಟಿಕೆಟ್ ಪಡೆಯುವುದು ಹೇಗೆ?
ಬೆಂಗಳೂರು, ನವೆಂಬರ್ 26 : ಕರ್ನಾಟಕ ಪೊಲೀಸ್ ಇಲಾಖೆಯ ಸಶಸ್ತ್ರ ಕಾನ್ಸ್‌ಟೇಬಲ್ ಹುದ್ದೆಯ ಲಿಖಿತ ಪರೀಕ್ಷೆ ಹಾಲ್ ಟಿಕೆಟ್ ಇಂದು ಬಿಡುಗಡೆಯಾಗುತ್ತಿದೆ. ಡಿಸೆಂಬರ್ 1ರ ಭಾನುವಾರ ನಿಗದಿತ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ.
1 ಸಾವಿರಕ್ಕೂ ಅಧಿಕ ಸಶಸ್ತ್ರ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ವೆಬ್‌ಸೈಟ್‌ನಲ್ಲಿ ಇಂದು ಹಾಲ್ ಟಿಕೆಟ್ ಬಿಡುಗಡೆ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಡೌನ್ ಲೋಡ್ ಮಾಡಿಕೊಳ್ಳಬಹುದು.
ಅರ್ಜಿಗಳನ್ನು ಸಲ್ಲಿಸಿದ ಅಭ್ಯರ್ಥಿಗಳು ಹಾಲ್ ಟಿಕೆಟ್ ಡೌನ್ ಲೋಡ್ ಮಾಡಿಕೊಂಡು ನಿಗದಿತ ಪರೀಕ್ಷಾ ಕೇಂದ್ರ ಯಾವುದು? ಎಂದು ತಿಳಿದುಕೊಳ್ಳಬೇಕು. ಪರೀಕ್ಷಾ ಸಮಯ ಹಾಲ್ ಟಿಕೆಟ್‌ನಲ್ಲಿ ನಮೂದಾಗಿರುತ್ತದೆ.

ಕರ್ನಾಟಕ ಪೊಲಿಸ್ ಇಲಾಖೆ ವೆಬ್‌ಸೈಟ್‌ಗೆ ಅಭ್ಯರ್ಥಿಗಳು ಭೇಟಿ ನೀಡಿ ಒಟ್ಟು 6 ಹಂತದಲ್ಲಿ ಹಾಲ್ ಟಿಕೆಟ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿ ಸಂಖ್ಯೆ, ಹುಟ್ಟಿದ ದಿನಾಂಕವನ್ನು ನಮೂದಿಸುವ ಮೂಲಕ ವೆಬ್ ಸೈಟ್‌ಗೆ ಲಾಗಿನ್ ಆಗಬಹುದಾಗಿದೆ.
ಡೌನ್ ಲೋಡ್ ಮಾಡುವುದು ಹೇಗೆ?
* ಕರ್ನಾಟಕ ಪೊಲೀಸ್ ವೆಬ್‌ಸೈಟ್‌ಗೆ ಭೇಟಿ ಕೊಡಿ
* ಪ್ರಸ್ತುತ ನೇಮಕಾತಿಯನ್ನು ಕ್ಲಿಕ್ ಮಾಡಿ
* Police Recruitment 2019 ಲಿಂಕ್ ಕ್ಲಿಕ್ ಮಾಡಿ
* ಸಿಎಆರ್/ಡಿಎಆರ್ ನೇಮಕಾತಿ ಲಿಂಕ್ ಕ್ಲಿಕ್ಕಿಸಿ
* ಮೈ ಅಪ್ಲಿಕೇಶನ್ ಪೇಜ್ ಕ್ಲಿಕ್ ಮಾಡಿ
* ನಿಮ್ಮ ಅರ್ಜಿ ಸಂಖ್ಯೆ ಹಾಕಿ ಲಾಗಿನ್ ಆಗಿ
* ಹಾಲ್ ಟಿಕೆಟ್ ಡೌನ್ ಲೋಡ್ ಮಾಡಿಕೊಳ್ಳಿ












Click it and Unblock the Notifications