ವೈದ್ಯರ ಕೆಲಸ ಖಾಲಿ ಇದೆ; ಕಲಬುರಗಿಯಲ್ಲಿ ನೇರ ಸಂದರ್ಶನ
ಕಲಬುರಗಿ, ಜನವರಿ 06; ಕುವೈತ್ ದೇಶದಲ್ಲಿ ವೈದ್ಯರಿಗೆ ಭಾರೀ ಬೇಡಿಕೆ ಇದೆ. 468 ಜನ ವೈದ್ಯರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ.
ಅಂತರರಾಷ್ಟ್ರೀಯ ವಲಸೆ ಕೇಂದ್ರದಿಂದ 468 ಜನ ವೈದ್ಯರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಜನವರಿ ತಿಂಗಳ ಕೊನೆಯ ವಾರದಲ್ಲಿ ನೇರ ನೇಮಕಾತಿ ಸಂದರ್ಶನವನ್ನು ಏರ್ಪಡಿಸಲಾಗಿದೆ.
ಕಲಬುರಗಿ ಜಿಲ್ಲಾ ಕೌಶಲ್ಯ ಮಿಷನ್ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮುರಳೀಧರ ರತ್ನಗಿರಿ ಈ ಕುರಿತು ಮಾಹಿತಿ ನೀಡಿದ್ದಾರೆ. ಆಸಕ್ತರು ಈ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.

ಆರು ವರ್ಷಕ್ಕೂ ಮೇಲ್ಪಟ್ಟು ಅನುಭವ ಹೊಂದಿರುವ ಅರವಳಿಕೆ ತಜ್ಞರು, ಸಾಮಾನ್ಯ ಶಸ್ತ್ರ ಚಿಕಿತ್ಸಕರು, ಅಂತರಿಕ ಔಷಧಿ ತಜ್ಞರು, ಪ್ರಸೂತಿ ಶಾಸ್ತ್ರಜ್ಞರು, ಸ್ತ್ರೀರೋಗ ತಜ್ಞರು, ಹೃದ್ರೋಗ ತಜ್ಞರು, ಮೂಳೆ ಚಿಕಿತ್ಸಕರು, ಮಕ್ಕಳ ತಜ್ಞರು, ತುರ್ತು ವಿಭಾಗ ತಜ್ಞರು, ಕುಟುಂಬ ವೈದ್ಯರು, ತೀವ್ರ ನಿಗಾ ಘಟಕ ತಜ್ಞರು, ವಿಕಿರಣ ಶಾಸ್ತ್ರಜ್ಞರು ಮತ್ತು ಇ.ಎನ್.ಟಿ. ತಜ್ಞರ ನೇಮಕಾತಿ ನಡೆಯಲಿದೆ.
ಆಸಕ್ತರು ಜನವರಿ 15ರೊಳಗಾಗಿ ಜಿಲ್ಲಾ ಕೌಶಲ್ಯಾಭಿವೃಧ್ಧಿ ಅಧಿಕಾರಿ ಕಛೇರಿ, 'ಡಿ' ಬ್ಲಾಕ್, ಮೂರನೇ ಮಹಡಿ, ಐಟಿ ಪಾರ್ಕ್, ಕಿಯೋನಿಕ್ಸ್ ಬಿಲ್ಡಿಂಗ್, ಹೈಕೋರ್ಟ್ ಎದುರು, ಕೆಎಚ್‍ಬಿ ಕಾಲೋನಿ, ಕಲಬುರಗಿ ವಿಳಾಸಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಸಮಾಲೋಚಕರಾದ ಕೃಷ್ಣ ಕಟ್ಟಿಮನಿ ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 8197614505 ಹಾಗೂ ಅರುಣಕುಮಾರ ಟಿ. ಸಜ್ಜನ್ ಮೊಬೈಲ್ ಸಂಖ್ಯೆ 9632214436.
https://www.kaushalkar.com/doctor-registration-kuwait/
ವೆಬ್‌ಸೈಟ್‌ಗೂ ಭೇಟಿ ನೀಡಬಹುದಾಗಿದೆ.
ಉದ್ಯೋಗಿನಿ ಯೋಜನೆಯಡಿ ಅರ್ಜಿ ಹಾಕಿ; ಶಿವಮೊಗ್ಗ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2022-23ನೇ ಸಾಲಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆಯ ಉದ್ಯೋಗಿನಿ ಯೋಜನೆಯಡಿ ಅರ್ಜಿ ಆಹ್ವಾನಿಸಿದೆ.
ಪ.ಪಂ.ಕ್ಕೆ 3 ಗುರಿಗಳನ್ನು ನಿಗದಿಪಡಿಸಿದ್ದು, ವ್ಯಾಪಾರ, ಹೈನುಗಾರಿಕೆ ಹಾಗೂ ಗುಡಿಕೈಗಾರಿಕೆ ಇತ್ಯಾದಿ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ಪಡೆಯಲು ಆರ್ಥಿಕವಾಗಿ ಹಿಂದುಳಿದ ಅರ್ಹ ಪರಿಶಿಷ್ಟ ಪಂಗಡ 18-55 ವರ್ಷದೊಳಗಿನ ಮಹಿಳೆಯರಿಂದ ಅರ್ಜಿ ಕರೆಯಲಾಗಿದೆ.
ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದು, ಕುಟುಂಬದ ವಾರ್ಷಿಕ ಆದಾಯ 2 ಲಕ್ಷ ಮೀರಿರಬಾರದು. ಸಾಲ ಮಂಜೂರಾದ ನಂತರ ಬಿಡುಗಡೆಯ ಮುನ್ನ ಫಲಾನುಭವಿಗಳಿಗೆ ಉದ್ಯಮಶೀಲತಾ ತರಬೇತಿ ಕಡ್ಡಾಯವಾಗಿ ನೀಡಲಾಗುವುದು.
ಆಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 100 ಅಡಿರಸ್ತೆ, ಆಲ್ಕೊಳ, ಶಿವಮೊಗ್ಗ ಇವರಿಂದ ಪಡೆದು, ಭರ್ತಿ ಮಾಡಿ ಸಲ್ಲಿಸಬೇಕು.
ಅರ್ಜಿಯೊಂದಿಗೆ ಆದಾಯ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ/ ಆಧಾರ್ ಕಾರ್ಡ್, ಯೋಜನಾ ವರದಿ, ತರಬೇತಿ ಅಥವಾ ಅನುಭವ ಪತ್ರ, ವಯಸ್ಸಿನ ದೃಢೀಕರಣ ಪತ್ರ ಹಾಗೂ 3 ಇತ್ತೀಚಿನ ಭಾವಚಿತ್ರಗಳನ್ನು ಲಗತ್ತಿಸಿ ಜನವರಿ 17ರೊಳಗಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲಾಖಾ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬಹುದು. ಕರೆ ಮಾಡಲು ದೂರವಾಣಿ ಸಂಖ್ಯೆ 9482031284 / 9901755700.












Click it and Unblock the Notifications