Digital India Jobs: ಕೇಂದ್ರದಿಂದ ಭರ್ಜರಿ ನೇಮಕಾತಿ, ಒಬ್ಬರಿಗೆ ₹37 ಲಕ್ಷ ವೇತನ
ಬೆಂಗಳೂರು, ಅಕ್ಟೋಬರ್ 15: ಕೇಂದ್ರ ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಸುವರ್ಣ ಅವಕಾಶವಿದೆ. ರಾಷ್ಟ್ರೀಯ ಇ-ಆಡಳಿತ ವಿಭಾಗವು (NEGD) ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಸರ್ಕಾರಿ ನೌಕರಿ ಆಸಕ್ತ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬೇಕು. ವಿಶೇಷವೆಂದರೆ ನೇರವಾಗಿ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ನೇಮಕಾರಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ (DIC) ನಲ್ಲಿ ಹಿರಿಯ ಸಲಹೆಗಾರ ಮತ್ತು ಸಲಹೆಗಾರರ ಹುದ್ದೆ ಸೇರಿದಂತೆ ಒಟ್ಟು 48 ವಿವಿಧ ಉದ್ಯೋಗಗಳು ಖಾಲಿ ಇವೆ. ಅರ್ಹ ಆಸಕ್ತರು ಅರ್ಜಿ ಸಲ್ಲಿಕೆಯ ಕೊನೆಯ ದಿನ ನವೆಂಬರ್ 06 ರೊಳಗೆ ಅರ್ಜಿ ಸಲ್ಲಿಸಬೇಕು. ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ, ನೇರವಾಗಿ ಸಂದರ್ಶನದಲ್ಲಿ ಪಾಲ್ಗೊಳ್ಳುವ ಮೂಲಕ ಕೇಂದ್ರ ಸರ್ಕಾರಿ ವ್ಯಾಪ್ತಿಯ ಹುದ್ದೆ ಪಡೆಯಲು ಇದೊಂದು ಸದವಕಾಶವಾಗಿದೆ.

ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೇ ಸೂಕ್ತ ದಾಖಲೆಗಳ ಮೂಲಕ ಡಿಐಸಿ ಅಧಿಕೃತ ಜಾಲತಾಣ ಮೂಲಕ ಆನ್‌ಲೈನ್ ನಲ್ಲಿ ಅರ್ಜಿ ಹಾಕಬೇಕು. ಹೆಚ್ಚಿನ ಮಾಹಿತಿಗೆ, ವೇತನ, ವಿದ್ಯಾರ್ಹತೆ ಇನ್ನಿತರ ಮಾಹಿತಿ ಇಲ್ಲಿದೆ.
ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಡಿಜಿಟಲ್ ಇಂಡಿಯಾ ಕಾರ್ಪೊರೇಷನ್
ಹುದ್ದೆ ಹೆಸರು: ಸಲಹೆಗಾರರ
ಒಟ್ಟು ಹುದ್ದೆ: 48 ಹುದ್ದೆಗಳು
ವೇತನ: ವಾರ್ಷಿಕ 37
ಅರ್ಜಿ ಸಲ್ಲಿಕೆ ಕೊನೆ ದಿನ: ನವೆಂಬರ್ 6
ವಿದ್ಯಾರ್ಹತೆ ಏನಿರಬೇಕು?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದೆ ಬರುವ ಅಭ್ಯರ್ಥಿಗಳು ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾದ ವಿದ್ಯಾರ್ಹತೆ ಹೊಂದಿರಬೇಕು. ಯಾವುದಕ್ಕೆ ಒಂದು ಭಾರಿ ನೇಮಕಾತಿ ಪರಿಶೀಲಿಸಿ ನೀವು ಅರ್ಜಿ ಸಲ್ಲಿಸಬೇಕು. ಅದರಲ್ಲಿ ಶೈಕ್ಷಣಿಕ ಅರ್ಹತೆ ಪೂರೈಸಿರಬೇಕು.
ವಯೋಮಿತಿ ವಿವರ
ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಗರಿಷ್ಠ ವಯೋಮಿತಿ 55 ಮೀರಿರಬಾರದು. ಇನ್ನು ಅರ್ಜಿ ಸಲ್ಲಿಕೆ ಕೊನೆ ದಿನಾಂಕ ನವೆಂಬರ್ 6ರಂದು ಪರಿಗಣನೆಗೆ ತೆಗೆದುಕೊಂಡು ಅಭ್ಯರ್ಥಿಯ ಗರಿಷ್ಠ ವಯಸ್ಸು ಲೆಕ್ಕ ಹಾಕಲಾಗುತ್ತದೆ.
ಅಭ್ಯರ್ಥಿಗಳ ಆಯ್ಕೆ ಹೇಗೆ?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅವರಿಗೆ ನೇರವಾಗಿ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ ಎಂದು ನೇಮಕಾತಿ ಮಾಹಿತಿ ನೀಡಿದೆ. ಅಲ್ಲದೇ, ಅವರಿಗೆ ಈ ಹಿಂದಿನ ವರ್ಷಗಳಲ್ಲಿ ವೃತ್ತಿಯಲ್ಲಿ ಆದ ಅನುಭವವು ಪರಿಗಣಿಸಲಾಗುತ್ತದೆ ಎಂದು ನೇಮಕಾತಿ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.
ಮಾಸಿಕ ವೇತನ ವಿವರ
ಹಿರಿಯ ಸಲಹೆಗಾರ ಹುದ್ದೆಗೆ ಆಯ್ಕೆ ಆಗುವವರು ವಾರ್ಷಿಕ 30 ಲಕ್ಷ ರೂಪಾಯಿ ವೇತನ, ಸಲಹೆಗಾರ ಹುದ್ದೆಗೆ ವಾರ್ಷಿಕ 20 ಲಕ್ಷ ರೂ. ಹಾಗೂ ಮುಖ್ಯ ಎಸ್‌ಇಎಂಟಿ ಹುದ್ದೆಗೆ ವಾರ್ಷಿಕ 37 ಲಕ್ಷ ರೂಪಾಯಿ ವರೆಗೆ ವೇತನ ಪಡೆಯಲಿದ್ದಾರೆ.
ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೇ ಈ ಕೂಡಲೇ ಸೂಕ್ತ ದಾಖಲಾತಿಗಳ ಮೂಲಕ ಆನ್‌ಲೈನ್ ಮೂಲಕ ಈ ಕೂಡಲೇ ಅರ್ಜಿ ಸಲ್ಲಿಸಬೇಕಿದೆ.












Click it and Unblock the Notifications