ಧಾರವಾಡದಲ್ಲಿ ಹೊರಗುತ್ತಿಗೆ ನೇಮಕಾತಿ: ಮಾ.22 ರಂದು ವಾಕ್ ಇನ್

ಧಾರವಾಡ, ಮಾ.10: ಧಾರವಾಡ ಜಿಲ್ಲಾ ನಗರಾಭಿವೃದ್ಧಿ ಕೋಶದ ಸರ್ವರಿಗೂ ಸೂರು (ಹೌಸಿಂಗ್ ಫಾರ್ ಆಲ್) ಯೋಜನೆಯಲ್ಲಿ 2021ನೇ ಸಾಲಿನ ನೇಮಕಾತಿ ಆರಂಭವಾಗಿದೆ. ಎರಡು ಹುದ್ದೆಗಳಿಗೆ ವಾಕ್ ಇನ್ ಸಂದರ್ಶನವನ್ನು ಮಾರ್ಚ್ 22ರಂದು ನಡೆಸಲಾಗುತ್ತಿದೆ.

ಖಾಲಿ ಇರುವ ಅಕೌಂಟೆಂಟ್ ಫೈನಾನ್ಸ್ ಸ್ಪೆಷಲಿಸ್ಟ್/ಹೌಸಿಂಗ್ ಫೈನಾನ್ಸ್ ಸ್ಪೆಷಲಿಸ್ಟ್ ಒಟ್ಟು ಎರಡು ಹುದ್ದೆಗಳನ್ನು ಮಾನವ ಸಂಪನ್ಮೂಲ ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

ವಿದ್ಯಾರ್ಹತೆ: ಫೈನಾನ್ಸ್ ಮತ್ತು ತತ್ಸಮಾನ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ, ಕಂಪ್ಯೂಟರ್ ಅಥವಾ ಇಲೆಕ್ಟ್ರಾನಿಕ್ಸ್‍ನಲ್ಲಿ ಡಿಪ್ಲೋಮಾ, ಪದವಿ, ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ 3 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು.

Dharwad: Walk-in Interview for outsourcing Jobs

ವಯೋಮಿತಿ: ಗರಿಷ್ಠ 45 ವರ್ಷದೊಳಗಿನವರು ಸಂದರ್ಶನಕ್ಕೆ ಹಾಜರಾಗಬಹುದು.

ಸಂದರ್ಶನ ದಿನಾಂಕ: ಮಾರ್ಚ್ 22, 2021.
ಸಮಯ: ಬೆಳಗ್ಗೆ 11 ಗಂಟೆ
ಸ್ಥಳ: ಜಿಲ್ಲಾಧಿಕಾರಿಗಳ ಕಚೇರಿಯ ನಗರಾಭಿವೃದ್ಧಿ ಕೋಶ

ಆಸಕ್ತ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಮೇಲ್ಕಂಡ ದಿನಾಂಕ ಹಾಗೂ ಸಮಯಕ್ಕೆ ಸರಿಯಾಗಿ ನಡೆಯುವ ನೇರ ಸಂದರ್ಶನ (Walk in Interview) ಕ್ಕೆ ಹಾಜರಾಗಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+