ಧಾರವಾಡ ಕೃಷಿ ವಿವಿ ನೇಮಕಾತಿ; ಅ. 11, 20ಕ್ಕೆ ನೇರ ಸಂದರ್ಶನ
ಧಾರವಾಡ, ಅಕ್ಟೋಬರ್ 09; ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಕ್ಟೋಬರ್ 20ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಸಮುದಾಯ ವಿಜ್ಞಾನ ಮಹಾವಿದ್ಯಾಲಯ, ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಂದು ಹುದ್ದೆಯನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಆಸಕ್ತರು ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ಅಕ್ಟೋಬರ್ 20ರಂದು ಬೆಳಗ್ಗೆ 10.30ಕ್ಕೆ ಸಮುದಾಯ ವಿಜ್ಞಾನ ಮಹಾವಿದ್ಯಾಲಯ, ಡೀನ್ ಕಛೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ಮಾಹಿತಿಗಾಗಿ 9449062812 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು ಅಥವ ಕೃಷಿ ವಿಶ್ವವಿದ್ಯಾಲಯದ ಜಾಲತಾಣ www.uasd.edu ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ತಾತ್ಕಾಲಿಕವಾಗಿ ಹುದ್ದೆಗಳ ಭರ್ತಿ; ಕೃಷಿ ವಿಸ್ತರಣಾ ಶಿಕ್ಷಣ ವಿಭಾಗ, ಕೃಮವಿ, ಧಾರವಾಡದಲ್ಲಿ Senior Research Fellow, young Professional-1 ತಾತ್ಕಾಲಿಕ ಹುದ್ದೆಗೆ ನೇಮಕಾತಿ ಮಾಡುವ ಕುರಿತು ಪ್ರಕಟಣೆ ಹೊರಡಿಸಲಾಗಿದೆ.
ಕೃಷಿ ವಿಸ್ತರಣಾ ಶಿಕ್ಷಣ ವಿಭಾಗ, ಕೃಷಿ ಮಹಾವಿದ್ಯಾಲಯ, Development and Demonstration of Al- enabled Farm Weather and Market information based Decision support System(FARWM-DS) for sustainable farm productivity and profitability and evolve profitable cropping pattern) ಯೋಜನೆಯಡಿ Senior Research Fellow 1 ಹುದ್ದೆ, young professional-1 ಒಂದು ಹುದ್ದೆಯನ್ನು ತಾತ್ಕಾಲಿಕವಾಗಿ ಒಂದು ವರ್ಷದ ವರೆಗೆ ಅಥವಾ ಯೋಜನೆ ಮುಕ್ತಾಯಗೊಳ್ಳುವ ವರೆಗೆ ಯಾವುದು ಮೊದಲು ಸಂಭವಿಸುತ್ತದೆ ಅಲ್ಲಿಯವರೆಗೆ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಅರ್ಜಿಯನ್ನು ಎರಡು ಪ್ರತಿಗಳೊಂದಿಗೆ ದಿನಾಂಕ 11/10/2023ರಂದು 11 ಗಂಟೆಗೆ ಸಂದರ್ಶನಕ್ಕೆ, ಡೀನ್ (ಕೃಷಿ) ರವರ ಕಛೇರಿ, ಕೃಷಿ ಮಹಾವಿದ್ಯಾಲಯ, ಧಾರವಾಡದಲ್ಲಿ ಹಾಜರಾಗಲು ತಿಳಿಸಲಾಗಿದೆ.
ಸಂದರ್ಶನಕ್ಕೆ ಬರುವಾಗ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳನ್ನು ಹಾಗೂ ಎರಡು ಪ್ರತಿಗಳನ್ನು ತರಲು ತಿಳಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಅರ್ಜಿಯನ್ನು ಮುಂಗಡವಾಗಿ ಕಳುಹಿಸಬಾರದು.
ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಬಂದು ಹಾಜರಾಗಬೇಕು. ಸದರಿ ನೇಮಕಾತಿಯು ತಾತ್ಕಾಲಿಕವಾಗಿರುವುದರಿಂದ ಯಾವುದೇ ಸಮಯದಲ್ಲಿ ಕಾರಣ ತಿಳಿಸದೇ ಕೆಲಸದಿಂದ ತೆಗೆಯಬಹುದು. ಇದು ಕೃಷಿ ವಿಶ್ವವಿದ್ಯಾಲಯದ ಯಾವುದೇ ಖಾಯಂ ನೇಮಕಾತಿ ಹಕ್ಕಿಗೆ ಒಳಪಟ್ಟಿರುವುದಿಲ್ಲ.












Click it and Unblock the Notifications