Job Recruitment: 10 ಮತ್ತು 12th ಪಾಸಾದವರಿಗೆ 113 ಸರ್ಕಾರಿ ಹುದ್ದೆಗಳು, ನೇಮಕಾತಿ ವಿವರ

ಬೆಂಗಳೂರು, ಫೆಬ್ರವರಿ 02: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಪಾಸಾಗಿ, ಸರ್ಕಾರಿ ನೌಕರಿ ಹುಡುಕುತ್ತಿದ್ದರೆ ಅಂತವರೆಗೆ ಇಲ್ಲೊಂದು ಸುವರ್ಣ ಅವಕಾಶ ಇದೆ. ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶನಾಲಯ (DGAFMS) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೂಡಲೇ ಅರ್ಹರು ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶನಾಲಯದಲ್ಲಿ (DGAFMS) ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಥೆಯಲ್ಲಿ ಅಕೌಂಟೆಂಟ್, ಸ್ಟೆನೋಗ್ರಾಫರ್, ಎಲ್‌ಡಿಸಿ ಕ್ಲರ್ಕ್, ಸ್ಟೋರ್ ಕೀಪರ್, ಫೈರ್‌ಮ್ಯಾನ್, ಕುಕ್, ಎಂಟಿಎಸ್ ಮುಂತಾದ ಒಟ್ಟು 113 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಕೇವಲ 10 ಮತ್ತು 12ನೇ ತರಗತಿ ಉತ್ತೀರ್ಣವಾದವರು ಅರ್ಜಿ ಸಲ್ಲಿಸಬಹುದಾಗಿದೆ.

DGAFMS Recrutiment SSLC and 2nd PUC Passed Candidate Can Apply these 113 Posts

ಅರ್ಜಿ ಸಲ್ಲಿಕೆಗೆ ಮೊದಲು ಅಭ್ಯರ್ಥಿಗಳು ಇಲ್ಲಿ ನೀಡಲಾಗಿರುವ ವಯಸ್ಸಿನ ಅರ್ಹತೆ, ಶೈಕ್ಷಣಿಕ ಅರ್ಹತೆ ಇನ್ನಿತರ ವಿವರಗಳನ್ನು ಪರಿಶೀಲಿಸಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ನೇಮಕಾತಿ ಪೂರ್ಣ ಮಾಹಿತಿ

ನೇಮಕಾತಿ ಸಂಸ್ಥೆ: ಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ ಮಹಾನಿರ್ದೇಶನಾಲಯ (DGAFMS)

ಹುದ್ದೆಗಳು ಸಂಖ್ಯೆ: 113

ವಿದ್ಯಾರ್ಹತೆ: 10 ಮತ್ತು 12ನೇ ತರಗತಿ ಪಾಸ್

ಗರಿಷ್ಠ ವಯಸ್ಸು: 30

ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಫೆ.06

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್

ಮಾಸಿಕ ವೇತನ: ನಿಯಮಾನುಸಾರ

ಈ ಅರ್ಹರು ಕೂಡಲೇ ಅರ್ಜಿ ಸಲ್ಲಿಸಿ

ಈ ಮೇಲಿನ ಹುದ್ದೆಗಳಿಗೆ ಯಾರೆಲ್ಲ ಅರ್ಜಿ ಸಲ್ಲಿಸಬೇಕೆನ್ನುವವರು ಮಾನ್ಯತೆ ಪಡೆದ ವಿಶ್ವವಿದ್ಯಾಯಲ ಇಲ್ಲವೇ ಶೈಕ್ಷಣಿಕ ಮಂಡಳಿಯಲ್ಲಿ 10 ಅಥವಾ 12 ನೇ ತರಗತಿಯಲ್ಲಿ ಉತ್ತೀರ್ಣ ಆಗಿರಬೇಕು. ಇನ್ನೂ ಖಾಲಿ ಇರುವ ಅಕೌಂಟೆಂಟ್ ಹುದ್ದೆಗೆ ಬಿಕಾಂ ಪದವಿ ಪಡೆದಿರುವುದು ಕಡ್ಡಾಯ ಎಂದು ತಿಳಿಸಲಾಗಿದೆ. ಉಳಿದಂತೆ 12 ನೇ ಉತ್ತೀರ್ಣ ಅಭ್ಯರ್ಥಿಗಳು ಎರಡು ವರ್ಷದ ಕಾರ್ಯಾನುಭವ ಹೊಂದಿರಬೇಕು ಎಂದ ತಿಳಿಸಲಾಗಿದೆ.

ಇನ್ನೂ ಅಭ್ಯರ್ಥಿಗಳಿಗೆ ಶೀಘಲಿಪಿಕಾರ, ಡಿಕ್ಟೇಶನ್, ಮ್ಯಾನ್ಯುವಲ್ ಟೈಪ್ ರೈಟರ್ ಮತ್ತು ಕಂಪ್ಯೂಟರ್‌ನಲ್ಲಿ ಟೈಪಿಂಗ್ ವೇಗದ ಮಿತಿ ಷರತ್ತು ಇದೆ. ಅಭ್ಯರ್ಥಿಗಳು ಇಂಗ್ಲೀಷ ಹಾಗೂ ಹಿಂದಿ ಭಾಷೆಯಲ್ಲಿ ನಿಮಿಷಕ್ಕೆ 25 ಪದಗಳನ್ನು ಟೈಪ್ ಮಾಡುವ ಸಾಮರ್ಥ್ಯ ಹೊಂದಿರಬೇಕು ಎಂದು ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.

ವಯೋಮಿತಿ ವಿವರ

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ ವಯಸ್ಸು 18 ವರ್ಷ ಆಗಿರಬೇಕು. ಗರಿಷ್ಠ ವಯಸ್ಸು 25 ರಿಂದ 30 ವರ್ಷ ಎಂದು ನಿಗದಿ ಮಾಡಲಾಗಿದೆ. ಇನ್ನೂ ಹುದ್ದೆಗೆ ಅನುಗುಣವಾಗಿ ಹಾಗೂ ಜಾತಿ ಮೀಸಲಾತಿ ಆಧಾರದಲ್ಲಿ ಆಯಾ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ ಮತ್ತು ವಿಧಾನಗಳು

* ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಇದೇ ಫೆಬ್ರವರಿ 06ರೊಳಗೆ ಅರ್ಜಿ ಸಲ್ಲಿಸಬೇಕು.

* ಮೊದಲು ನೀವು ಇಲ್ಲಿನ dgafms24.onlineapplicationform.org/DGAFMS/ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

* ನಂತರ ಮುಖಪುಟದಲ್ಲಿ ಕಾಣುವ ಆನ್‌ಲೈನ್ ಲಿಂಕ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು.

* ವೈಯಕ್ತಿಕ ವಿವರ ನೀಡಿ ನೋಂದಣಿ ಮಾಡಿಕೊಳ್ಳಬೇಕು.

* ಬಳೀಕ ಲಾಗಿನ್ ಆದ ಕೂಡಲೇ ಅಗತ್ಯ ಮಾಹಿತಿ ನೀಡಿ ಅರ್ಜಿ ಭರ್ತಿ ಮಾಡಬೇಕು. ಅಲ್ಲಿ ಕೇಳುವ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.

* ಎಲ್ಲ ಮಾಹಿತಿ ಹಾಕಿದ ಬಳಿಕ ಅರ್ಜಿ ಪರಿಶೀಲಿಸಿಕೊಳ್ಳಿ.

* ನಂತರ ಸಬ್ನಿಟ್ ಮಾಡಿ ಭವಿಷ್ಯ ಉಪಯೋಗಕ್ಕಾಗಿ ಒಂದು ಅರ್ಜಿಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+