Dell Layoffs: ವಿಶ್ವದಾದ್ಯಂತ ಬರೋಬ್ಬರಿ ಶೇ.10ರಷ್ಟು ನೌಕರರ ಉದ್ಯೋಗ ಕಡಿತ, ಕಾರಣ?
ಬೆಂಗಳೂರು, ಆಗಸ್ಟ್ 07: ತಂತ್ರಜ್ಞಾನ, ಕಂಪ್ಯೂಟರ್ ಉತ್ಪನ್ನ ಮಾರಾಟ ಮತ್ತು ಸೇವೆಯ ದಿಗ್ಗಜ ಕಂಪನಿಯಾಗಿರುವ 'ಡೆಲ್' (Dell Layoffs) ತನ್ನ ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಲು ನಿರ್ಧರಿಸಿದೆ. ಈ ಮೂಲಕ ಡೆಲ್ ಕಂಪನಿಯು ಆರ್ಟಿಫಿಷಿಯಲ್ ತಂತ್ರಜ್ಞಾನ (AI) ಆಧಾರಿತವಾಗಿ ಬೆಳವಣಿಗೆ ಸಾಧಿಸುವತ್ತ ಗಮನಹರಿಸಿದೆ ಎಂದು ಸಿಲಿಕಾಂಗಲ್ (SiliconANGLE) ವರದಿ ಮಾಡಿದೆ.
ತಾಂತ್ರಿಕ ಮತ್ತು ಕಂಪ್ಯೂಟರ್‌ಗಳು ಸಂಬಂಧಿತ ಉತ್ಪನ್ನಗಳ ಮಾರಾಟ ವಿಭಾಗದಲ್ಲಿ ಕೆಲಸ ಮಾಡುವ ಹಾಗೂ ಉತ್ಪನ್ನ ಅಭಿವೃದ್ಧಿಪಡಿಸುವ ಅಮೆರಿಕಾ (ಯುಎಸ್) ಆಧಾರಿತ ಕಂಪನಿಯು ಹೀಗೆ ವಿಶ್ವದಾದ್ಯಂತ 12,500 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿದೆ ಎಂಬ ಮಾಹಿತಿ ಸೋಮವಾರ ಲಭ್ಯವಾಗಿದೆ.

ವಿಶ್ವದಾದ್ಯಂತ ಶೇ. 10ರಷ್ಟು ನೌಕರರ ವಜಾ
ಡೆಲ್ ವಿಶ್ವದಾದ್ಯಂತ ಸರಿಸುಮಾರು 1,20,000 ಉದ್ಯೋಗಿಗಳನ್ನು ಹೊಂದಿರುವ ಬೃಹತ್ ಕಂಪನಿಗಳಲ್ಲಿ ಒಂದಾಗಿದೆ. ಸದ್ಯ ವಜಗೊಂಡ ಉದ್ಯೋಗಿಗಳ ಪ್ರಮಾಣ ಒಟ್ಟು ಉದ್ಯೋಗಿಗಳ ಶೇಕಡಾ 10 ಎನ್ನಲಾಗಿದೆ. ಏಕಾಎಕಿ ಡೆಲ್ ಮುಖ್ಯಸ್ಥರು 12,500 ಮಂದಿಯನ್ನು ಕೆಲಸದಿಂದ ಕಿತ್ತು ಹಾಕಿರುವುದು ನೌಕರರ ಆತಂಕಕ್ಕೆ ಕಾರಣವಾಗಿದೆ. ಕೆಲವರು ಕಂಪನಿ ನಡೆ, ನಿರ್ಧಾರಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ನೌಕರರ ವಜಾಗೆ ಸಂಬಂಧಿಸಿಂತೆ ಡೆಲ್ ಕಂಪನಿಯಿಂದ ನಿಖರವಾದ ವಜಾಗೊಂಡವರ ಸಂಖ್ಯೆ ಹಾಗೂ ಕಾರಣವೇನೆಂದು ತಿಳಿಸಿಲ್ಲ. ಡೆಲ್ ಇತ್ತೀಚಿನ ಹೇಳಿಕೆ ಗಮನಿಸಿದರೆ, ನಮ್ಮ ಗೋ-ಟು-ಮಾರ್ಕೆಟ್ ತಂಡಗಳ ಮರು ಸಂಘಟನೆಗೆ ನಿರ್ಧರಿಸಿದ್ದೇವೆ. ಅದಕ್ಕಾಗಿ ಒಂದಷ್ಟು ಅಗತ್ಯ ಕ್ರಮ, ಸುಧಾರಣೆ ಮಾಡುತ್ತಿದ್ದೇವೆ ಎಂದು ತಿಳಿಸಿತ್ತು.

ಡೆಲ್‌ನಿಂದ ಎಐ ತಂಡ ರಚನೆ
ಮುಂದಿನ ದಿನಗಳಲ್ಲಿ ಡೆಲ್ ತನ್ನ ಗ್ರಾಹಕರಿಗೆ ಮೌಲ್ಯ ಮತ್ತು ಸೇವೆಯನ್ನು ಮೀರಿದ ಎಐ ತಂತ್ರಜ್ಞಾನದಡಿ ಅತ್ಯುತ್ತಮ ಸೇವೆ ನೀಡಲು ತಂಡ ರಚಿಸುತ್ತಿದೆ ಎಂದು ಕಂಪನಿಯ ವಿಶ್ವ ಮಾರಾಟ ಮತ್ತು ಕಾರ್ಯಾಚರಣೆಗಳ ಅಧ್ಯಕ್ಷ ಬಿಲ್ ಸ್ಕ್ಯಾನೆಲ್ ಮತ್ತು ಗ್ಲೋಬಲ್ ಥಿಯೇಟರ್‌ಗಳು ಮತ್ತು ಡೆಲ್ ಟೆಕ್ನಾಲಜೀಸ್ ಡೈರೆಕ್ಟ್‌ನ ಮಾರಾಟದ ಅಧ್ಯಕ್ಷ ಜಾನ್ ಬೈರ್ನ್ ತಿಳಿಸಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಕಾರಣದ ಬಳಿಕ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಡೆಲ್ ಕಂಪನಿಯಿಂದ ನೌಕರರು ಹೊರ ಬರುತ್ತಿದ್ದಾರೆ. ಇದೇ ಡೆಲ್ ಕಂಪನಿಯು ಕಳೆದ ವರ್ಷ 2023 ರಲ್ಲಿ ಪ್ರಪಂಚದಾದ್ಯಂತ ಬರೊಬ್ಬರಿ 13,000 ಉದ್ಯೋಗಿಗಳ ವಜಾಗೊಳಿಸಿ ಆದೇಶಿಸಿತ್ತು.
ಇದೇ ವರ್ಷ ಫೆಬ್ರವರಿ ತಿಂಗಳಲ್ಲಿ 6,000 ನೌಕರರನ್ನು ಸೇವೆ ಬಿಡಿಸಿತ್ತು. ಎರಡು ತಿಂಗಳ ಹಿಂದಷ್ಟೇ ಡೆಲ್ ಕಂಪನಿ ಷೇರುಗಳು ಶೇಕಡಾ 18ಕುಸಿದಿವೆ ಎಮದು ವರದಿ ಆಗಿದೆ. ಇದೆಲ್ಲ ಕಾರಣ ಹಾಗೂ ಭವಿಷ್ಯದ ಒಂದಷ್ಟು ಸುಧಾರಣೆಗಾಗಿ ಮತ್ತೆ ನೌಕರರ ವಜಾಗೊಳಿಸಿದೆ ಎಂದು ತಿಳಿದು ಬಂದಿದೆ.












Click it and Unblock the Notifications