CRPF Recruitment 2024: ಪದವೀಧರರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯಲ್ಲಿ ಅಧಿಕಾರಿಗಳಾಗಲು ಸುವರ್ಣ ಅವಕಾಶ
ನವದೆಹಲಿ, ಏಪ್ರಿಲ್. 30: ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ನಲ್ಲಿ ಉದ್ಯೋಗಕ್ಕಾಗಿ (ಸರ್ಕಾರಿ ಉದ್ಯೋಗ) ಹುಡುಕುತ್ತಿರುವ ಯುವಜನತೆಗೆ ಇದು ಉತ್ತಮ ಅವಕಾಶವಾಗಿದೆ. ಸಿಆರ್‌ಪಿಎಫ್‌ನಲ್ಲಿ ಕೆಲಸ ಇರುವ ಬಗ್ಗೆ ಅಧಿಸೂಚನೆ ಹೊರಬಂದಿದ್ದು, ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ನಲ್ಲಿ ಸಹಾಯಕ ಕಮಾಂಡೆಂಟ್ ಆಗಲು ಬಯಸುವ ಯುವಕರಿಗೆ ಇದು ಉತ್ತಮ ಅವಕಾಶವಾಗಿದೆ. ಉದ್ಯೋಗಾಕಾಂಕ್ಷಿಗಳು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಅಧಿಕೃತ ವೆಬ್‌ಸೈಟ್ upsc.gov.in ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಅಭ್ಯರ್ಥಿಗಳು ಯಾವುದೇ ವಿಳಂಬವಿಲ್ಲದೆ ತಕ್ಷಣ ಅರ್ಜಿ ಸಲ್ಲಿಸಬಹುದು.

ಈ ಸಿಆರ್‌ಪಿಎಫ್ ನೇಮಕಾತಿ ಮೂಲಕ ಒಟ್ಟು 120 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಸಿಆರ್‌ಪಿಎಫ್ ನಲ್ಲಿ ಕೆಲಸ ಮಾಡಲು ಇಚ್ಛಿಸುವ ಯಾವುದೇ ಅಭ್ಯರ್ಥಿಯು ಮೇ 14 ರಂದು ಅಥವಾ ಅದಕ್ಕೂ ಮೊದಲು ಅರ್ಜಿ ಸಲ್ಲಿಸಬಹುದು. ನೀವು ಸಹ ಸಿಆರ್‌ಪಿಎಫ್ ನಲ್ಲಿ ಉದ್ಯೋಗವನ್ನು ಪಡೆಯುವ ಕನಸು ಹೊಂದಿದ್ದರೆ, ಈ ಕೆಳಗಿನ ವಿಷಯಗಳನ್ನು ಎಚ್ಚರಿಕೆಯಿಂದ ಗಮನಿಸಿ.
ಸಿಆರ್‌ಪಿಎಫ್‌ನಲ್ಲಿ ಯಾವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ
ಸಿಆರ್‌ಪಿಎಫ್‌ನಲ್ಲಿ ಸಹಾಯಕ ಕಮಾಂಡೆಂಟ್‌ಗಳ ಒಟ್ಟು 120 ಹುದ್ದೆಗಳನ್ನು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಭರ್ತಿ ಮಾಡಲಿದೆ.
ಸಿಆರ್‌ಪಿಎಫ್‌ನಲ್ಲಿ ಅರ್ಜಿ ಸಲ್ಲಿಸಲು ಅರ್ಹತೆ
ಈ ಸಿಆರ್‌ಪಿಎಫ್‌ನಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಯೋಚಿಸುತ್ತಿರುವ ಯಾವುದೇ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಹೊಂದಿರಬೇಕು.

ಸಿಆರ್‌ಪಿಎಫ್‌ನಲ್ಲಿ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸಿನ ಮಿತಿಯು ಆಗಸ್ಟ್ 1, 2024 ರವರೆಗೆ 20 ವರ್ಷದಿಂದ 25 ವರ್ಷಗಳ ನಡುವೆ ಇರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡ (SC/ST)ದ ಅಭ್ಯರ್ಥಿಗಳಿಗೆ 5 ವರ್ಷಗಳ ಗರಿಷ್ಠ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.
ಸಿಆರ್‌ಪಿಎಫ್ ಅರ್ಜಿ ಶುಲ್ಕ
ಸಿಆರ್‌ಪಿಎಫ್‌ನಲ್ಲಿ ನೇಮಕಾತಿ 2024ಕ್ಕೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ 200 ಪಾವತಿಸಬೇಕಾಗುತ್ತದೆ. ಆದರೆ, ಎಲ್ಲಾ ವರ್ಗಗಳ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡ (SC/ST)ದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವನ್ನು ಪಾವತಿಸಬೇಕಿಲ್ಲ. ಅವರಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಸಿಆರ್‌ಪಿಎಫ್‌ನಲ್ಲಿ ಆಯ್ಕೆ ಪ್ರಕ್ರಿಯೆ
ಅಧಿಕೃತ ಅಧಿಸೂಚನೆಯ ಪ್ರಕಾರ, ಈ ಸಿಆರ್‌ಪಿಎಫ್ ನೇಮಕಾತಿಯ ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳನ್ನು ಒಳಗೊಂಡಿದೆ: ಲಿಖಿತ ಪರೀಕ್ಷೆ, PST/PET ಮತ್ತು ಸಂದರ್ಶನ/ವೈಯಕ್ತಿಕ ಪರೀಕ್ಷೆ. ಅಪ್ಲಿಕೇಶನ್ ಲಿಂಕ್ ಮತ್ತು ಪೂರ್ಣ ಅಧಿಸೂಚನೆಯನ್ನು https://upsc.gov.in/ ಇಲ್ಲಿ ನೋಡಬಹುದು.












Click it and Unblock the Notifications