ಮಾಸಿಕ ₹69,100 ಹುದ್ದೆಗಳಿಗೆ ಅರ್ಜಿ ಆಹ್ವಾನ
ಹಲವು ಪ್ರತಿಷ್ಠಿತ ಕಂಪನಿಗಳು ಉದ್ಯೋಗಾವಕಾಶಗಳನ್ನು ಕಲ್ಪಿಸುತ್ತಲಿವೆ. ಹಾಗೆಯೇ ಇದೀಗ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಖಾಲಿ ಇರುವ 1124 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಹಾಗಾದರೆ ಅರ್ಜಿ ಸಲ್ಲಿಸಬಯಸುವವರು ಗಮನಿಸಬೇಕಾದ ಅಂಶಗಳು ಹಾಗೂ ಮಾಸಿಕ ವೇತನ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ಆಗಿದ್ದು, 30 ದಿನಗಳವರೆಗೆ ಅವಕಾಶ ನೀಡಲಾಗಿದೆ. ಆಸಕ್ತರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

2025ರ CISF ಕಾನ್ಸ್‌ಟೇಬಲ್ ಹುದ್ದೆಗಳ ಅಧಿಸೂಚನೆಯನ್ನ 21 ಜನವರಿಯಂದೇ ಪ್ರಕಟಿಸಲಾಗಿದ್ದು, ಖಾಲಿ ಹುದ್ದೆಗಳ ಸಂಪೂರ್ಣ ಮಾಹಿತಿ ಇದರಲ್ಲಿ ಕೊಡಲಾಗಿದೆ. ಅರ್ಹತೆ, ಆಯ್ಕೆ ಪ್ರಕ್ರಿಯೆ, ಪರೀಕ್ಷೆಯ ನಮೂನೆ ಇತ್ಯಾದಿ ವಿವರ ಇಲ್ಲಿ ನೀಡಲಾಗಿದೆ. ಹುದ್ದೆಗಳನ್ನು ವರ್ಗಿಕರಿಸಲಾಗಿದ್ದು, ಜನರಲ್-460, ಎಸ್ಸಿ-167, ಎಸ್ಟಿ-83, ಒಬಿಸಿ-303, ಇಡಬ್ಲುಎಸ್-111 ಹುದ್ದೆಗಳು ಖಾಲಿಯಿವೆ.
ಸಿಐಎಸ್ಎಫ್ ಕಾನ್ಸ್‌ಟೇಬಲ್ ಸೇರಿ ವಿವಿಧ ಉದ್ಯೋಗಗಳನ್ನು ಭರ್ತಿ ಮಾಡುತ್ತಿದೆ. ವರ್ಗ-3ರಲ್ಲಿ ಈ ಕೆಲಸಗಳು ಬರುತ್ತವೆ. ಈ ಉದ್ಯೋಗಗಳಿಗೆ ಲಿಖಿತ ಪರೀಕ್ಷೆ ಸಹ ಇರುತ್ತದೆ. ಇದರಲ್ಲಿ 100 ಪ್ರಶ್ನೆಗಳಿಗೆ 100 ಅಂಕಗಳನ್ನು ನಿಗದಿಪಡಿಸಲಾಗಿದೆ. 120 ನಿಮಿಷಗಳಲ್ಲಿ ಎಲ್ಲಾ ಪ್ರಶ್ನೆಗಳಿಗೆ ಅಭ್ಯರ್ಥಿಗಳು ಉತ್ತರಿಸಬೇಕಾಗಿರುತ್ತದೆ.
ಕಾನ್ಸ್ಟೇಬಲ್, ಡ್ರೈವರ್ ಮತ್ತು ಕಾನ್ಸ್ಟೇಬಲ್ - 845 ಹುದ್ದೆಗಳು, ಡ್ರೈವರ್ ಕಮ್ ಪಂಪ್ ಆಪರೇಟರ್ (ಅಗ್ನಿಶಾಮಕ ಸೇವೆಗಳ ಚಾಲಕ) - 279 ಹುದ್ದೆಗಳು ಖಾಲಿಯಿದ್ದು, ಒಟ್ಟು 1,124 ಹುದ್ದೆಗಳಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿನ ವೇತನ 21,700ದಿಂದ 69,100 ರೂಪಾಯಿ ಇರಲಿದೆ.
42 ಹುದ್ದೆಗಳಿಗೆ ಅರ್ಜಿ ಆಹ್ವಾನ: ಕರ್ನಾಟಕ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರೂಪ್ ಎ ಹುದ್ದೆಗಳಿಗೆ ಕೆಪಿಎಸ್‌ಸಿ ಮತ್ತೆ ಅರ್ಜಿ ಆಹ್ವಾನ ಮಾಡಿದ್ದು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ನಾಳೆ ಅಂದರೆ ಫೆಬ್ರವರಿ 3, 2025ರಂದೇ ಕೊನೇ ದಿನ. ಹಾಗಾದರೆ ಅರ್ಜಿ ಸಲ್ಲಿಸುವವರು ಗಮನಿಸಬೇಕಾದ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
2024ರ ಸೆಪ್ಟೆಂಬರ್ 18ರಂದು ಅಧಿಸೂಚನೆ ಹೊರಡಿಸಿ ಅರ್ಜಿ ಸ್ವೀಕಾರ ಮಾಡಿತ್ತು. ಮತ್ತೆ ಇದೇ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಅರ್ಜಿ ಆಹ್ವಾನ ಮಾಡಿತ್ತು. ಗ್ರೂಪ್- ಎ 30 ಹುದ್ದೆಗಳಿದ್ದು, ಇದರಲ್ಲಿ 29 ಹುದ್ದೆಗಳು ಮುಕ್ತ ಸ್ಪರ್ಧೆ ಅಭ್ಯರ್ಥಿಗಳನ್ನು ಹಾಗೂ 01 ಕೆಲಸಕ್ಕೆ ಸೇವಾನಿರತ ಸ್ಪರ್ಧೆ ಅಭ್ಯರ್ಥಿಯನ್ನು ಭರ್ತಿ ಮಾಡಲಾಗುತ್ತಿದೆ.
ಈ ಹುದ್ದೆಗಳ ಜೊತೆ ಹೈದ್ರಾಬಾದ್-ಕರ್ನಾಟಕ ವೃಂದದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಗ್ರೂಪ್- ಎ ವೃಂದದ 12 ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. 11 ಉದ್ಯೋಗಗಳಿಗೆ ಮುಕ್ತ ಸ್ಪರ್ಧೆ ಅಭ್ಯರ್ಥಿಗಳು ಹಾಗೂ 1 ಹುದ್ದೆಗೆ ಸೇವಾನಿರತ ಅಭ್ಯರ್ಥಿಯನ್ನು ಭರ್ತಿ ಮಾಡಲಾಗುತ್ತದೆ. ಹೈದ್ರಾಬಾದ್-ಕರ್ನಾಟಕಕ್ಕೆ ಹುದ್ದೆಗಳನ್ನು ವರ್ಗೀಕರಣಗೊಳಿಸಲಾಗಿದೆ.
ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 83,700-1,55,200 ರೂಪಾಯಿ ನೀಡಲಾಗುತ್ತದೆ. ಸಾಮಾನ್ಯ ವರ್ಗ- 13, ಪರಿಶಿಷ್ಟ ಜಾತಿ- 05, ಪರಿಶಿಷ್ಟ ಪಂಗಡ - 02, ಪ್ರವರ್ಗ1 - 01, ಪ್ರವರ್ಗ-2ಎ - 05, ಪ್ರವರ್ಗ-2ಬಿ - 01, ಪ್ರವರ್ಗ-3ಎ - 01, ಪ್ರವರ್ಗ-3ಬಿ - 01, ಸೇವಾನಿರತ (ಎಸ್ಸಿ) - 01, ಹೈದರಾಬಾದ್-ಕರ್ನಾಟಕದವರಿಗೆ - 12 ಹುದ್ದೆಗಳು ಸೇರಿದಂತೆ ಒಟ್ಟು 42 ಹುದ್ದೆಗಳು ಖಾಲಿಯಿವೆ.
ಅರ್ಜಿ ಸಲ್ಲಿಸಬಯಸುವವರು ಇಂಜಿನಿಯರಿಂಗ್ ಪದವಿ- ಸಿವಿಲ್ ಇಂಜಿನಿಯರ್, ಕನ್ಸ್ಟ್ರಕ್ಷನ್ ಟೆಕ್ನಲಾಜಿ, ಬಿಲ್ಡಿಂಗ್ ಅಂಡ್ ಕಂಸ್ಟ್ರಕ್ಷನ್ ಟೆಕ್ನಾಲಜಿ, ಸಿವಿಲ್ ಟೆಕ್ನಾಲಜಿ ಕಂಸ್ಟ್ರಕ್ಷನ್ ಟೆಕ್ನಾಲಜಿ, ಕಂಸ್ಟ್ರಕ್ಷನ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್, ಜಿಯೋ ಮೆಕಾನಿಕ್ಸ್ ಮತ್ತು ಸ್ಟ್ರಕ್ಚರ್ಸ್, ಸ್ಟ್ರಕ್ಚರಲ್ ಅಂಡ್ ಫೌಂಡೇಷನ್ ಇಂಜಿನಿಯರಿಂಗ್, ಸ್ಟ್ರಕ್ಚರಲ್ ಇಂಜಿನಿಯರಿಂಗ್ ಮತ್ತು ಕಂಸ್ಟ್ರಕ್ಷನ್ ಇವುಗಳಲ್ಲಿ ಯಾವುದಾದರು ಒಂದು ಪದವಿ ಪೂರ್ಣಗೊಳಿಸಿರಬೇಕಾಗುತ್ತದೆ.












Click it and Unblock the Notifications