CFTRI Recruitment: ಈ ಜಿಲ್ಲೆಯಲ್ಲಿ ಮಾಸಿಕ ₹50,000 ವೇತನದ ಉದ್ಯೋಗ ಖಾಲಿ ಇದೆ
ಬೆಂಗಳೂರು, ಆಗಸ್ಟ್ 19: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯು (CFTRI) ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸುವ ಮೂಲಕ ಸೂಕ್ತ ಹುದ್ದೆ ಪಡೆಯಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ಸೆಪ್ಟಂಬರ್ 1 ಕೊಡಲಾಗಿದೆ. ಅರ್ಜಿ ಸಲ್ಲಿಸಲು ಏನೇನು ಬೇಕು, ವಿದ್ಯಾರ್ಹತೆ, ವೇತನ ಎಂಬ ಮಾಹಿತಿ ಇಲ್ಲಿದೆ.
ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ (CFTRI) ಒಟ್ಟು ಒಂದು ರಿಸರ್ಚ್ ಅಸೋಸಿಯೇಟ್ I ಖಾಲಿ ಇದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಈ ಕೂಡಲೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಈ ಸಂಬಂಧ ಆಸಕ್ತರು ಅಧಿಕೃತ ವೆಬ್ಸೈಟ್ cftri.res.in ಭೇಟಿ ನೀಡುವಂತೆ ಮನವಿ ಮಾಡಲಾಗಿದೆ..

ಆಸಕ್ತರು ಅರ್ಜಿ ಸಲ್ಲಿಸುವ ಮೊದಲು ಇಲ್ಲಿ ನೀಡಲಾಗಿರುವ ನೇಮಕಾತಿ ಪೂರ್ಣ ಮಾಹಿತಿ ತಿಳಿದು ಅರ್ಜಿ ಹಾಕಬೇಕಿದೆ.
ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ (CFTRI)
ಹುದ್ದೆ ಹೆಸರು: ರಿಸರ್ಚ್ ಅಸೋಸಿಯೇಟ್ I
ಒಟ್ಟು ಹುದ್ದೆಗಳು: ಒಂದು
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಸೆಪ್ಟಂಬರ್ 01
ನೇಮಕಾತಿ ಸ್ಥಳ: ಮೈಸೂರು
ಮಾಸಿಕ ವೇತನ: ರೂ.50,000
ಅರ್ಜಿ ಸಲ್ಲಿಸಲು ಯಾರು ಅರ್ಹರು?
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ರಾಜ್ಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಎಂ.ಎಸ್, ಎಂಡಿಎಸ್, ಪಿಎಚ್.ಡಿ, ಎಂ.ಡಿ, ಎಂವಿಎಸ್ಸಿ, ಎಂ.ಫಾರ್ಮಾ, ಎಂಇ/ಎಂ.ಟೆಕ್ ಪದವಿ ಪಡೆದಿರಬೇಕು. ಅಂತವರು ಮಾತ್ರವೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ ಅಧಿಸೂಚನೆ ತಿಳಿಸಿದೆ.

ವಯಸ್ಸಿನಮಿತಿ
CFTRI ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವಂತೆ, ಅಭ್ಯರ್ಥಿಗಳ ವಯಸ್ಸು ಅರ್ಜಿ ಸಲ್ಲಿಯಕೆ ಕೊನೆಯ ದಿನವಾದ ಸೆಪ್ಟೆಂಬರ್ 1ಕ್ಕೆ ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು ಎಂದು ಹೇಳಲಾಗಿದೆ..
ಇನ್ನೂ ಅಭ್ಯರ್ಥಿಗಳು ತಾವು ಮಾಡಿರುವ ಪದವಿ ಆಧಾರದಲ್ಲಿ ತಮ್ಮ ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅವಧಿಯಲ್ಲಿ ಕೆಲಸ ಅನುಭವ ಹೊಂದಿರಬೇಕು. ಅಂತವರಿಗೆ ಮೊದಲ ಆಧ್ಯತೆ ನೀಡಲಾಗುತ್ತದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಅರ್ಭ್ಯರ್ಥಿಗಳ ಆಯ್ಕೆ ಹೇಗೆ?
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ನಡೆಸಿ ಅದರ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಯ್ಕೆ ಆದವರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ಪೋಸ್ಟಿಂಗ್ ಕೊಟ್ಟು, ಮಾಸಿಕವಾಗಿ ರೂಪಾಯಿ 50,000 ನೀಡಲಾಗುತ್ತದೆ ಎಂದು ಸಂಸ್ಥೆಯ ತಿಳಿಸಿದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ, ಅರ್ಜಿ ಶುಲ್ಕ?
ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಆಪ್‌ಲೈನ್ ಮೂಲಕ ಅವಕಾಶ ಇರುವುದಿಲ್ಲ. ಯಾವ ಜಾತಿ ಸಮುದಾಯದ ಅಭ್ಯರ್ಥಿಗಳು ಶುಲ್ಕ ಇರುವುದಿಲ್ಲ. ಸಂಪೂರ್ಣ ಉಚಿತವಾಗಿರಲಿದೆ. ಅರ್ಜಿ ಸಲ್ಲಿಸುವವರು ಈ ಕೆಳಗಿನ ಲಿಂಕ್ https://patcell.cftri.res.in/rec/applicant_register.php ಮೂಲಕ ಅರ್ಜಿ ಸಲ್ಲಿಸಬಹುದು...












Click it and Unblock the Notifications