Bank Jobs: ಲಿಖಿತ ಪರೀಕ್ಷೆ ಇಲ್ಲದೇ ಅಭ್ಯರ್ಥಿಗಳ ಆಯ್ಕೆ, ಆಸಕ್ತರು ಕೂಡಲೇ ಅರ್ಜಿ ಹಾಕಿ

ಬೆಂಗಳೂರು, ಡಿಸೆಂಬರ್ 30: ಬ್ಯಾಂಕಿಂಗ್ ಹುದ್ದೆಗಳಲ್ಲಿ ಉದ್ಯೋಗ ಹುಡುಕುತ್ತಿರುವ ಅನೇಕ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ (Central Bank Of India) ತನ್ನಲ್ಲಿ ಖಾಲಿ ಇರುವ ಹತ್ತಾರು ಹುದ್ದೆಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಜನವರಿ 12ರವರೆಗೂ ಅವಕಾಶ ಇದೆ ಎಂದು ಬ್ಯಾಂಕ್ ತಿಳಿಸಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದಲ್ಲಿ ಸ್ಪೆಷಲಿಸ್ಟ್ ಆಫೀಸರ್ ಸೇರಿದಂತೆ ಒಟ್ಟು 62 ಹುದ್ದೆಗಳು ಖಾಲಿ ಇವೆ. ಈ ಆಯಾ ಅರ್ಹ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬೇಕಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಧಿಸೂಚನೆ, ಅರ್ಜಿ ಸಲ್ಲಿಕೆ ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್ ಆಗಿರುವ centralbankofindia.co.in ಗೆ ಭೇಟಿ ನೀಡಬೇಕು.

Central Bank Of India Recruitment Application call For 62 Verious Vacancies

ಅಲ್ಲದೇ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕದವರೆಗೂ ಕಾಯದೇ ಈ ಕೂಡಲೇ ಸೂಕ್ತ ದಾಖೆಗಳ ಸಹಿತ ಅರ್ಜಿ ಸಲ್ಲಿಸುವಂತೆ ನೇಮಕಾತಿ ಅಧಿಸೂಚನೆಯಲ್ಲಿ ಮಾಹಿತಿ ನೀಡಲಾಗಿದೆ. ವಿದ್ಯಾರ್ಹತೆ, ಅರ್ಜಿ ಶುಲ್ಕ, ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಪೂರ್ಣ ವಿವರ ಹೀಗಿದೆ

ನೇಮಕಾತಿ ಸಂಸ್ಥೆ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

ಹುದ್ದೆಗಳ ಹೆಸರು: ಸ್ಪೆಷಲಿಸ್ಟ್ ಆಫೀಸರ್

ಒಟ್ಟು ಹುದ್ದೆಗಳು: 62

ಅರ್ಜಿ ಸಲ್ಲಿಕೆ ಕೊನೆ ದಿನ: ಜನವರಿ 12

ಮಾಸಿಕ ವೇತನ: ನಿಯಮಾನುಸಾರ

ಖಾಲಿ ಹುದ್ದೆಗಳ ಇತರ ವಿವರ

ಪ್ರಾಡಕ್ಟ್ ಅಸಿಸ್ಟೆಂಟ್/ಟೆಕ್ನಿಕಲ್ ಅಸಿಸ್ಟೆಂಟ್ ಎಂಜಿನಿಯರ್: 10

ಎಂಜಿನಿಯರ್: 10

ಡೆವಲಪರ್/ಡೇಟಾ ಅಸಿಸ್ಟೆಂಟ್ ಎಂಜಿನಿಯರ್:10

ಡೇಟಾ ಎಂಜಿನಿಯರ್/ ಸ್ಪೆಷಲಿಸ್ಟ್: 3 ಹುದ್ದೆಗಳು

ನಿಯೋ ಸಪೋರ್ಟ್ ಅವಶ್ಯಕತೆ (ಎಲ್ 1): 10

ನಿಯೋ ಸಪೋರ್ಟ್ ಅವಶ್ಯಕತೆ (ಎಲ್ 2): 6

ಡಿಸೈನರ್/ಮಾಡೆಲರ್/ಡೇಟಾ ಆರ್ಕಿಟೆಕ್ಟ್/ಕ್ಲೌಡ್ ಆರ್ಕಿಟೆಕ್ಟ್: 2 ಹುದ್ದೆಗಳು

ಕಂಟೆಂಟ್ ರೈಟರ್ (ಡಿಜಿಟಲ್ ಮಾರ್ಕೆಟಿಂಗ್): 1 ಪೋಸ್ಟ್ ಮಾರ್ಟೆಕ್ ಸ್ಪೆಷಲಿಸ್ಟ್: 1

ಡೇಟಾ ಸೈಂಟಿಸ್ಟ್: 2

ಎಂಎಲ್ ಆಪ್ಸ್ ಎಂಜಿನಿಯರ್: 2

ಎಐ ಸ್ಪೆಷಲಿಸ್ಟ್: 2

ಕ್ಯಾಂಪೇನ್ ಮ್ಯಾನೇಜರ್ :1

ಎಸ್ಇಒ ಸ್ಪೆಷಲಿಸ್ಟ್: 1

ಗ್ರಾಫಿಕ್ ಡಿಸೈನರ್ ಮತ್ತು ವಿಡಿಯೋ ಎಡಿಟರ್: 1 ಹುದ್ದೆಗಳು ಖಾಲಿ ಇವೆ ಎಂದು ಮಾಹಿತಿ ನೀಡಿದೆ.

ವಿದ್ಯಾರ್ಹತೆ: ಅರ್ಜಿ ಶುಲ್ಕ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ತಿಳಿಸಿದ ಸೂಕ್ತ ಅರ್ಹತೆ ಹೊಂದಿರಬೇಕು. ಸಾಮಾನ್ಯ ವರ್ಗ/ EWS/ OBC ವರ್ಗದವರಿಗೆ ಅರ್ಜಿ ಶುಲ್ಕ 750 ರೂಪಾಯಿ ನಿಗದಿಪಡಿಸಲಾಗಿದೆ.

ಲಿಖಿತ ಪರೀಕ್ಷೆ ಇಲ್ಲದೇ ಆಯ್ಕೆ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ ನಡೆಸುವುದಿಲ್ಲ. ನೇರವಾಗಿ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಳಾಗುತ್ತದೆ. ಈ ಸಂದರ್ಶನದಲ್ಲಿ ಆಯ್ಕೆ ಆಗುವ ಅಭ್ಯರ್ಥಿಗಳು 100ಕ್ಕೆ ಕನಿಷ್ಠ 50 ಅಂಕಗಳನ್ನು ಪಡೆಯಬೇಕು. ಅದರಲ್ಲೂ ಜಾತಿ ಆಧಾರದಲ್ಲಿ ಅಂಕಗಳಲ್ಲಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮೊದಲು ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಬಾಕ್ಸ್‌ನಲ್ಲಿ ವಾಟ್ಸ್ ನ್ಯೂಸ್ ನಲ್ಲಿ ಕಾಣುವ ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಂಡು ಬಳಿಕ ಕಾಣುವ ಅಧಿಸೂಚನೆ, ನೇಮಕಾತಿ ಇತರ ಮಾಹಿತಿ ಗಮನಿಸಿ ಅರ್ಜಿ ಸಲ್ಲಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+