CeNS Recruitment 2023: ಬೆಂಗಳೂರಿನಲ್ಲಿ ಉದ್ಯೋಗ ಖಾಲಿ ಇದೆ, ಅರ್ಜಿ ಸಲ್ಲಿಕೆ ನಾಳೇ ಲಾಸ್ಟ್ ಡೇಟ್, ವಿವರ
ಬೆಂಗಳೂರು, ನವೆಂಬರ್ 24: ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ (CeNS) ಕೇಂದ್ರವು ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆ ಆಗುವವರಿಗೆ ಬೆಂಗಳೂರಿನಲ್ಲಿ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದೆ.
ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ (CeNS) ಕೇಂದ್ರದಲ್ಲಿ ಒಟ್ಟು 1 ಸೈಂಟಿಸ್ಟ್- ಬಿ ಹುದ್ದೆಗಳು ಖಾಲಿ ಇವೆ. ನಾಳೆ ನವೆಂಬರ್ 25 ಶನಿವಾರವೇ ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ ಸೇರಿ ನೇಮಕಾತಿಯ ಪೂರ್ಣ ಮಾಹಿತಿ ತಿಳಿಯಿರಿ.
ವಿದ್ಯಾರ್ಹತೆ ವಿವರ
ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಜಿನಿಯರಿಂಗ್/ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ, ಫಿಜಿಕಲ್/ ಕೆಮಿಕಲ್ ಸೈನ್ಸಸ್ನಲ್ಲಿ ಡಾಕ್ಟರೇಟರ್ ಪದವಿ ಪಡೆದಿರುವುದು ಕಡ್ಡಾಯವಾಗಿದೆ ಎಂದು ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರ ನೇಮಕಾತಿ ಅಧಿಸೂಚನೆ ತಿಳಿಸಿದೆ.
ವಯಸ್ಸಿನ ಮಿತಿ
ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳ ವಯಸ್ಸು ಇದೇ ನವೆಂಬರ್ 25ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು ಎಂದು ನಿಯಮ ಹೇರಿದೆ. ಮೀಸಲಾತಿಗೆ ಅನುಗುಣವಾಗಿ ಆಯಾ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು ಎಂದು ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರ ನೇಮಕಾತಿ ಹೇಳಿದೆ.

ಅರ್ಜಿ ಶುಲ್ಕ
ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ/PWD/ಮಾಜಿ ಸೈನಿಕರು/EWS ಅಭ್ಯರ್ಥಿಗಳಿಗೆ ಯಾವುದವೇ ಶುಲ್ಕ ಇಲ್ಲ.
ಇತರ ಎಲ್ಲ ಅಭ್ಯರ್ಥಿಗಳಿಗೆ 1500 ರೂಪಾಯಿ ನಿಗದಿ ಮಾಡಲಾಗಿದೆ. ಈ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು ಎಂದು ತಿಳಿಸಿದರು.
ಅಭ್ಯರ್ಥಿಗಳಿಗೆ ಸಂಸ್ಥೆ ಮೊದಲು ಲಿಖಿತ ಪರೀಕ್ಷೆ ಆಯೋಜಿಸಲಾಗುವುದು. ಅಲ್ಲಿ ಆಯ್ಕೆ ಆಗವವರಿಗೆ ನಂತರ ನೇರ ಸಂದರ್ಶನ
ಇರಲಿದೆ. ಆಯ್ಕೆ ಆಗುವವರಿಗೆ ಬೆಂಗಳೂರಿನಲ್ಲಿ ಮಾಸಿಕ ₹15,600 ನಿಂದ 39,100 ವರೆಗೆ ವೇತನ ನೀಡಲಾಗುವುದು ಎಂದು ಹೇಳಿದೆ.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ (https://www.cens.res.in/forms/index.php/faculty-position/application-form) ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.












Click it and Unblock the Notifications