CeNS Recruitment 2023: ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗವಕಾಶ, ಜೂ.25ರೊಳಗೆ ಅರ್ಜಿ ಸಲ್ಲಿಸಿ
ಬೆಂಗಳೂರು, ಜೂನ್ 18: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿಯೇ ಭರ್ಜರಿ ಉದ್ಯೋಗವಾಶ ಲಭ್ಯವಿದೆ. ಸರ್ಕಾರಿ ನೌಕರಿ ಸೇರಬಯಸುವವರಿಗೆ ಇದೊಂದು ಉತ್ತಮ ಸದವಕಾಶವಾಗಿದೆ. ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರ ನೇಮಕಾತಿಗೆ (CeNS Recruitment 2023) ಪ್ರಕ್ರಿಯೆ ಆರಂಭಿಸಿದ್ದು, ಅರ್ಹ ಅರ್ಜಿ ಆಹ್ವಾನಿಸಿದೆ.
ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರ ನೇಮಕಾತಿಗೆ (CeNS Recruitment) ತನ್ನಲ್ಲಿ ಖಾಲಿ ಇರುವ 2 ರಿಸರ್ಚ್ ಅಸೋಸಿಯೇಟ್, 1 ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಇದೇ ತಿಂಗಳು ಅಂದರೆ ಜೂನ್ 25 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆ ತಿಳಿಸಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಗಳ ಮಾಹಿತಿ, ಅರ್ಜಿ ವಿವರ ಸೇರಿದಂತೆ ಪೂರ್ಣ ಮಾಹಿತಿ ಇಲ್ಲಿ ತಿಳಿಯಬಹುದು. ಆಸಕ್ತರು ಅಧಿಸೂಚನೆ ಪೂರ್ತಿ ಓದಿ ಅರ್ಜಿಸಲ್ಲಿಸಿದರೆ ಒಳಿತು.
ಹುದ್ದೆ ಪೂರ್ತಿ ವಿವರ
ಸಂಸ್ಥೆ ಹೆಸರು- ಸಂಸ್ಥೆ ನ್ಯಾನೋ ಮತ್ತು ಸಾಫ್ಟ್ ಮ್ಯಾಟರ್ ಸೈನ್ಸಸ್ ಕೇಂದ್ರ
ಒಟ್ಟು ಹುದ್ದೆ - 03
ಹುದ್ದೆ ಹೆಸರು- ರಿಸರ್ಚ್ ಅಸೋಸಿಯೇಟ್, ಪ್ರಾಜೆಕ್ಟ್ ಅಸೋಸಿಯೇಟ್
ಉದ್ಯೋಗ ಸ್ಥಳ - ಬೆಂಗಳೂರು
ಅರ್ಜಿ ಸಲ್ಲಿಕೆಗೆ ಕಡೆ ದಿನ - 25 ಜೂನ್ 2023
ಶೈಕ್ಷಣಿಕ ಅರ್ಹತೆ- ಶುಲ್ಕದ ವಿವರ
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ, ಪಿಎಚ್‌ಡಿ ಪೂರ್ಣಗೊಳಿಸಿರಬೇಕು. ಇದು ಕಡ್ಡಾಯ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇನ್ನೂ ಈ ಮೂರು ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರಿಗೆ ಯಾವುದೇ ಶುಲ್ಕ ಇರುವುದಿಲ್ಲ ನಿಗದಿ ಮಾಡಲಾಗಿಲ್ಲ. ಬದಲಾಗಿ ಉಚಿತವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿ ಆಯ್ಕೆ- ಪ್ರಮುಖ ದಿನಾಂಕ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಯಲಿದೆ. ಅಲ್ಲಿ ಆಯ್ಕೆಯಾದವರಿಗೆ ನಂತರ ನೇರ ಸಂದರ್ಶನ ನಡೆಯಲಿದೆ. ಅಲ್ಲಿ ಆಯ್ಕೆಯಾದವರಿಗೆ ಬೆಂಗಳೂರಿನಲ್ಲಿ ಉದ್ಯೋಗ ಸಿಗಲಿದೆ. ವೇತನ ಮಾಹಿತಿ ಅಧಿಸೂಚನೆಯಲ್ಲಿಯೇ ತಿಳಿದುಕೊಳ್ಳಿ. ಜೂನ್ 16 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ, ಜೂನ್ 25 ರವರೆಗೂ ಅಜಿ ಸಲ್ಲಿಕೆಗೆ ಅವಕಾಶ ಇದೆ.












Click it and Unblock the Notifications