ತುಮಕೂರು; ಮಾರ್ಚ್ 30ರಂದು ಕ್ಯಾಂಪಸ್ ಸಂದರ್ಶನ

ತುಮಕೂರು, ಮಾರ್ಚ್ 26; ತುಮಕೂರಿನಲ್ಲಿರುವ ಶ್ರೀ ಸಿದ್ದಗಂಗಾ ಐ. ಟಿ. ಐ. ಕಾಲೇಜ್‌ನಲ್ಲಿ ಕ್ಯಾಂಪಸ್ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ. ಮಾರ್ಚ್ 30ರಂದು ಕ್ಯಾಂಪಸ್ ಸಂದರ್ಶನ ನಡೆಯಲಿದೆ.

ರಾಮನಗರದ ಬಿಡದಿಯಲ್ಲಿರುವ ಬಹುರಾಷ್ಟ್ರೀಯ ಕಂಪನಿ ಕ್ಯಾಂಪಸ್ ಸಂದರ್ಶನವನ್ನು ಆಯೋಜನೆ ಮಾಡಿದೆ. ಮಾರ್ಚ್ 30ರಂದು ಬೆಳಗ್ಗೆ 9 ಗಂಟೆಗೆ ಬಟವಾಡಿಯ ಶ್ರೀ ಸಿದ್ದಗಂಗಾ ಐ. ಟಿ. ಐ. ಕಾಲೇಜಿನಲ್ಲಿ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದೆ.

ಐ. ಟಿ. ಐ. ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಭ್ಯರ್ಥಿಗಳಿಗೆ 18 ರಿಂದ 25 ವರ್ಷದ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.

Campus Interview On March 30th At Tumakuru

ಫಿಟ್ಟರ್, ಟರ್ನರ್, ಎಂಎಂಟಿಎಂ, ಎಂಎಂವಿ, ಮೆಕಾನಿಕ್ ಡೀಸೆಲ್, ಎಂಎಆರ್‌ಸಿ, ವೆಲ್ಡರ್ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ಎಸ್. ಎಸ್. ಎಲ್‌. ಸಿ. ಮತ್ತು ಐ. ಟಿ. ಐ. ಅಂಕಪಟ್ಟಿಯನ್ನು ತರಬೇಕು. 2020ರ ಐ. ಟಿ. ಐ. ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಸಹ ಸಂದರ್ಶನಕ್ಕೆ ಹಾಜರಾಗಬಹುದು.

ಹೆಚ್ಚಿನ ಮಾಹಿತಿಗಾಗಿಎನ್. ಸುನಿಲ್ ಪ್ರಾಂಶುಪಾಲರು, ಶ್ರೀ ಸಿದ್ದಗಂಗಾ ಕೈಗಾರಿಕಾ ತರಬೇತಿ ಸಂಸ್ಥೆ, ಬಟವಾಡಿ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+