ಕಲಬುರಗಿ; ಮಾ. 26ರಂದು ಕ್ಯಾಂಪಸ್ ಸಂದರ್ಶನ
ಮಂಡ್ಯ, ಮಾರ್ಚ್ 25: ಕಲಬುರಗಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ)ಯಲ್ಲಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ. 18 ರಿಂದ 23 ವರ್ಷದೊಳಗಿನ ವಯೋಮಿತಿಯ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.
ಬಳ್ಳಾರಿಯ ತೋರಣಗಲ್ಲು ಎಂ.ಎಸ್. ಜೆ.ಎಸ್.ಡಬ್ಲ್ಯೂ. ಸ್ಟೀಲ್ ಲಿಮಿಟೆಡ್ ಕಾರ್ಖಾನೆಯಲ್ಲಿ ಒಂದು ವರ್ಷದ ಅವಧಿಗೆ ಐಟಿಐ ಟ್ರೇಡ್‍ಗಳಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿಗೆ ಆಯ್ಕೆ ಮಾಡಲಾಗುತ್ತಿದೆ.
ಇದಕ್ಕಾಗಿ ಮಾರ್ಚ್ 26ರಂದು ಬೆಳಗ್ಗೆ 10.30ಕ್ಕೆ ಕಲಬುರಗಿ ಸರ್ಕಾರಿ (ಮಹಿಳಾ) ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನ ಆಯೋಜಿಸಲಾಗಿದೆ ಎಂದು ಕಲಬುರಗಿ ವಿಭಾಗೀಯ ಕಚೇರಿಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಂಟಿ ನಿರ್ದೇಶಕರು ಹೇಳಿದ್ದಾರೆ.

ಐಟಿಐ ವೃತ್ತಿಯ ಫಿಟ್ಟರ್, ಎಲೆಕ್ಟ್ರಿಶಿಯನ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ (ಇ.ಎಂ.), ವೆಲ್ಡರ್, ಟರ್ನರ್, ವೈರ್‍ಮೆನ್, ಮಶಿನಿಸ್ಟ್, ಡಿಸೈಲ್ ಮೆಕ್ಯಾನಿಕ್ (ಡಿ.ಎಂ.), ಪಿ.ಎಲ್.ಸಿ. ಆಟೋಮೇಶನ್ ಟ್ರೇಡ್‍ಗಳಲ್ಲಿ ಪಾಸಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಈ ಕಾರ್ಖಾನೆಯಲ್ಲಿ ಮೇಲ್ಕಂಡ ಐಟಿಐ ಟ್ರೇಡ್‍ಗಳಲ್ಲಿ ಒಟ್ಟು 300 ಅಭ್ಯರ್ಥಿಗಳು ಬೇಕಾಗಿದ್ದಾರೆ. ಅಭ್ಯರ್ಥಿಗಳಿಗೆ ತಿಂಗಳಿಗೆ 9,900 ರೂ.ಗಳ ಶಿಷ್ಯವೇತನ, ವಸತಿ ಮತ್ತು ಕ್ಯಾಂಟೀನ್ ವ್ಯವಸ್ಥೆ ಇರುತ್ತದೆ.
ಅರ್ಹ ಅಭ್ಯರ್ಥಿಗಳು ತಮ್ಮ ಎಸ್.ಎಸ್.ಎಲ್.ಸಿ., ಐಟಿಐ ಅಂಕಪಟ್ಟಿ, ಭಾವಚಿತ್ರ ಹಾಗೂ ಇತರೆ ದಾಖಲಾತಿಗಳೊಂದಿಗೆ ಕ್ಯಾಂಪಸ್ ಸಂದರ್ಶನಕ್ಕೆ ಹಾಜರಾಗಬಹುದು.












Click it and Unblock the Notifications