ಬಳ್ಳಾರಿ; ಟೊಯೋಟದಿಂದ ಮೇ 16ಕ್ಕೆ ಕ್ಯಾಂಪಸ್ ಸಂದರ್ಶನ

ಬಳ್ಳಾರಿ, ಮೇ 07; ಬೆಂಗಳೂರಿನ ಟೊಯೋಟ ಕಿರ್ಲೋಸ್ಕರ್ ಕಂಪನಿಯಲ್ಲಿ ಅಪ್ರೆಂಟಿಸ್ (Apprenticeship) ತರಬೇತಿಗಾಗಿ ಕ್ಯಾಂಪಸ್ ಸಂದರ್ಶನವನ್ನು ಬಳ್ಳಾರಿಯಲ್ಲಿ ಆಯೋಜನೆ ಮಾಡಲಾಗಿದೆ. ಮೇ 16ರಂದು ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಯಲಿದ್ದು, ಮೇ 17 ರಂದು ವೈದ್ಯಕೀಯ ಪರೀಕ್ಷೆ ಇರುತ್ತದೆ.

ಮೇ 16ರಂದು ಬೆಳಗ್ಗೆ 9ಕ್ಕೆ ಬಳ್ಳಾರಿ ನಗರದ ರೇಡಿಯೋ ಪಾರ್ಕ್ ಪ್ರದೇಶದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಿಲಾಗಿದೆ. ಎರಡು ವರ್ಷಗಳ ಐಟಿಐ ತರಬೇತಿಯಲ್ಲಿ ಫಿಟ್ಟರ್, ಟರ್ನರ್, ಎಲೆಕ್ಟ್ರಿಷಿಯನ್, ವೆಲ್ಡರ್, ಇ.ಎಂ, ಎಂ.ಎಂ.ವಿ, ಮೆಕ್ಯಾನಿಕ್ ಡೀಸಲ್ ವೃತ್ತಿಗಳ ಅಂತಿಮ ವರ್ಷದ ತರಬೇತಿದಾರರು ಹಾಗೂ ಐ.ಟಿ.ಐ ಪಾಸಾದವರು ಸಂದರ್ಶನಕ್ಕೆ ಹಾಜರಾಗಬಹುದು.

jobs

ಸಂದರ್ಶನಕ್ಕೆ ಬರುವಾಗ ಅಭ್ಯರ್ಥಿಗಳು ಎಸ್. ಎಸ್. ಎಲ್. ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಎರಡು ಭಾವಚಿತ್ರಗಳು, ಆಧಾರ್ ಕಾರ್ಡ್‍ನ ಪ್ರತಿ ಹಾಗೂ ಸ್ವ-ವಿವರವುಳ್ಳ ಬಯೋಡೇಟಾ ತರಬೇಕು. ಮೇ 16ರಂದು ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಯಲಿದ್ದು, ಮೇ 17 ರಂದು ವೈದ್ಯಕೀಯ ಪರೀಕ್ಷೆ ಇದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕ್ಯಾಂಪಸ್ ನಿಯೋಜನೆ ಅಧಿಕಾರಿಯನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 9741183501.

ಅತಿಥಿ ಉಪನ್ಯಾಸಕರ ಹುದ್ದೆ; ಹುಬ್ಬಳ್ಳಿಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಅಲ್ಪಸಂಖ್ಯಾತರ ನಿರ್ದೇಶನಾಲಯದಿಂದ ಧಾರವಾಡ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹುಬ್ಬಳ್ಳಿ ತಾಲೂಕಿನ ಅಂಚಟಗೇರಿಯಲ್ಲಿರುವ ಡಾ. ಎ. ಪಿ. ಜೆ ಅಬ್ದುಲ್ ಕಲಾಂ ವಸತಿ ಕಾಲೇಜಿನಲ್ಲಿ ಕೆಲಸ ಖಾಲಿ ಇದೆ.

ಸಿ. ಬಿ. ಎಸ್. ಇ ವಿಜ್ಞಾನ ವಿಭಾಗಕ್ಕೆ ಬೋಧನೆ ಮಾಡಲು 2023-24ನೇ ಸಾಲಿಗಾಗಿ ಅತಿಥಿ ಉಪನ್ಯಾಸಕರ 6 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಸಕ್ತರು ಹಾಗೂ ಸೂಕ್ತ ವಿದ್ಯಾರ್ಹತೆ ಇರುವ ಶಿಕ್ಷಕರು ಮೇ15 ರೊಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ಹೇಳಿದೆ.

ಆಸಕ್ತರು ಹೆಚ್ಚಿನ ವಿವರಗಳಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯ, ಮೌಲಾನಾ ಆಝಾದ್ ಭವನ, ಸಾಧನಕೇರಿ ರಸ್ತೆ, ಸರ್ಕಾರಿ ಮುದ್ರಣಾಲಯ ಹತ್ತಿರ, ಧಾರವಾಡ ಇವರ ಕಾರ್ಯಾಲಯ ದೂರವಾಣಿ ಸಂಖ್ಯೆ 0836-2971590, 7337768683ಗೆ ಕರೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+