1763 ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಬಿಎಸ್‌ಎಫ್
ಬೆಂಗಳೂರು, ಜನವರಿ 28 : ಗಡಿ ಭದ್ರತಾ ಪಡೆ 1763 ಕಾನ್ಸ್‌ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ನೇಮಕಾತಿ ಆದೇಶ ಹೊರಬಿದ್ದ 30 ದಿನಗಳಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.
ಬಿಎಸ್‌ಎಫ್ 1763 ಕಾನ್ಸ್‌ಟೇಬಲ್ (ಟ್ರೇಡ್ಸ್‌ಮೆನ್) ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೆಟ್ರಿಕ್ಯುಲೇಷನ್ ಅಥವ ತತ್ಸವಮಾನ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಯಾವುದೇ ಬೋರ್ಡ್/ವಿಶ್ವವಿದ್ಯಾಲಯದಿಂದ ಪಡೆದಿರಬೇಕು. ಎರಡು ವರ್ಷಗಳ ಕಾಲ ನಿದಿಪಡಿಸಿದ ಟ್ರೇಡ್‌ನಲ್ಲಿ ಕೆಲಸ ಮಾಡಿರಬೇಕು.

ಐಟಿಐನಲ್ಲಿ ಒಂದು ವರ್ಷದ ಕೋರ್ಸ್ ಪೂರ್ಣಗೊಳಿಸಿರಬೇಕು ನಿಗದಿ ಪಡಿಸಿದ ಟ್ರೇಡ್‌ನಲ್ಲಿ ಒಂದು ವರ್ಷದ ಅನುಭವ ಹೊಂದಿರಬೇಕು. ನಿಗದಿಪಡಿಸಿದ ಟ್ರೇಡ್‌ನಲ್ಲಿ 2 ವರ್ಷದ ಡಿಪ್ಲೊಮಾ ಮಾಡಿರುವವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 23 ವರ್ಷದ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. (1 ಆಗಸ್ಟ್ 2019ಕ್ಕೆ ಅನ್ವಯವಾಗುವಂತೆ). ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ ಶ್ರೇಣಿ : 21700-69100 ಪ್ರತಿ ತಿಂಗಳು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications