ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಭಾರತದಾದ್ಯಂತ ಆಫೀಸರ್ ಮತ್ತು ಮ್ಯಾನೇಜರ್ ಹುದ್ದೆಗಾಗಿ ಒಟ್ಟು 670 ಸ್ಥಾನಗಳು ಖಾಲಿಯಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಮೇ 5, 2017 ರ ಒಳಗೆ ಅರ್ಜಿ ಸಲ್ಲಿಸಬಹುದು.
ನವದೆಹಲಿ, ಏಪ್ರಿಲ್ 21: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಭಾರತದಾದ್ಯಂತ ಆಫೀಸರ್ ಮತ್ತು ಮ್ಯಾನೇಜರ್ ಹುದ್ದೆಗಾಗಿ ಒಟ್ಟು 670 ಸ್ಥಾನಗಳು ಖಾಲಿಯಿದ್ದು, ಆಸಕ್ತ, ಅರ್ಹ ಅಭ್ಯರ್ಥಿಗಳು ಮೇ 5, 2017 ರ ಒಳಗೆ ಅರ್ಜಿ ಸಲ್ಲಿಸಬಹುದು.
ಹುದ್ದೆಗಳು: ಆಫೀಸರ್ (270 ಹುದ್ದೆಗಳು), ಮ್ಯಾನೇಜರ್ (400 ಹುದ್ದೆಗಳು)
ಎಲ್ಲಿ: ಭಾರತದಾದ್ಯಂತ
ಒಟ್ಟು ಹುದ್ದೆ: 670
ವಿದ್ಯಾರ್ಹತೆ: ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಶೇ.60 ಅಂಕದೊಂದಿಗೆ ಸ್ನಾತಕ ಪದವಿ ಪಡೆದಿರಬೇಕು ಅದರೊಂದಿಗೆ ಎಂಬಿಎ/ ಪಿಜಿಡಿಬಿಎಂ/ ಪಿಜಿಬಿಎಂ/ ಪಿಜಿಡಿಬಿಎ /ಕಾಮರ್ಸ್ ನಲ್ಲಿ ಅಥವಾ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ/ ಅರ್ಥಶಾಸ್ತ್ರ ಅಥವಾ ಚಾರ್ಟರ್ಡ್ ಅಕೌಂಟಂಟ್ / ಐಸಿಡಬ್ಲ್ಯುಎ/ಕಂಪನಿ ಸೆಕ್ರೆಟರಿ/ ಕಂಪ್ಯೂಟರ್ ತರಬೇತಿಯ ಸರ್ಟಿಫಿಕೇಟ್ (ಕನಿಷ್ಠ ಮೂರು ತಿಂಗಳ ತರಬೇತಿ) ಅಥವಾ ಪದವಿ ಹಂತದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಒಂದು ವಿಷಯವನ್ನಾಗಿ ಓದಿದವರು ಅರ್ಜಿ ಸಲ್ಲಿಸಬಹುದು.[ದೇನಾ ಬ್ಯಾಂಕ್ ನಲ್ಲಿ 300 ಪ್ರೊಬೆಶನರಿ ಹುದ್ದೆಗಳಿಗೆ ಅರ್ಜಿ ಆಹ್ವಾನ]

ವೇತನ ಶ್ರೇಣಿ : 23700 ರೂ. ಯಿಂದ 42020 ರೂ. ಪ್ರತಿ ತಿಂಗಳು
ವಯೋಮಿತಿ: ಆಫೀಸರ್ ಗಳಿಗಾದರೆ 21 ರಿಂದ 30 ವರ್ಷ, ಮ್ಯಾನೇಜರ್ ಗಳಿಗಾದರೆ 23 ರಿಂದ 35 ವರ್ಷ. (10-04-2017 ದಿನಾಂಕಕ್ಕೆ ಅನ್ವಯವಾಗುವಂತೆ)
ಆಯ್ಕೆ ಪ್ರಕ್ರಿಯೆ: ಮೊದಲು ಆನ್ ಲೈನ್ ಮೂಲಕ ಪರೀಕ್ಷೆ ನೀಡಲಾಗುತ್ತದೆ. ಅದರಲ್ಲಿ ಆಯ್ಕೆಯಾದವರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಕೊನೆಯದಾಗಿ ದಾಖಲಾತಿಗಳ ಪರಿಶೀಲನೆಯ ನಂತರ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಲಾಗುತ್ತದೆ.[ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉದ್ಯೋಗಾವಕಾಶ]
ಅರ್ಜಿ ಶುಲ್ಕ:ಅರ್ಜಿದಾರರು ತಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಇಂಟರ್ ನೆಟ್ ಬ್ಯಾಂಕಿಂಗ್ ಮೂಲಕ ಶುಲ್ಕ ಪಾವತಿಸಬಹುದು.
ಶುಲ್ಕದ ವಿವರ: ಸಾಮಾನ್ಯ/ಇತರೆ ವರ್ಗಕ್ಕೆ: 600 ರೂ.
ಎಸ್ ಸಿ/ ಎಸ್ಟಿ: 100 ರೂ.
ಪ್ರಮುಖ ದಿನಾಂಕ : ಮೇ 05, 2017 ರೊಳಗೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದೆ.
ಶುಲ್ಕ ಪಾವತಿಗೂ ಮೇ 05, 2017 ಕೊನೆಯ ದಿನಾಂಕ
ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ:












Click it and Unblock the Notifications