Layoffs: ಬೆಂಗಳೂರಿನ ಬೋಯಿಂಗ್ ಘಟಕದಿಂದ 180 ಉದ್ಯೋಗಿಗಳು ವಜಾ

ಬೆಂಗಳೂರು, ಮಾರ್ಚ್‌ 22: ಉದ್ಯಾನ ನಗರಿ ಬೆಂಗಳೂರಿನಲ್ಲಿ ವಿವಿಧ ಕಂಪನಿಗಳ ಉದ್ಯೋಗ ಕಡಿತ ಮುಂದುವರೆದಿದೆ. ದೇವನಹಳ್ಳಿಯಲ್ಲಿರುವ ಬೋಯಿಂಗ್‌ ಇಂಡಿಯಾ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಸೆಂಟರ್‌ (ಬಿಐಇಟಿಸಿ)ಯ 180 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಈ ಬೆಳವಣಿಗೆ ಕುರಿತು ಡಾ. ಬ್ರೆಂಡನ್ ನೆಲ್ಸನ್ ಹಿರಿಯ ಉಪಾಧ್ಯಕ್ಷ ಅಧ್ಯಕ್ಷರು, ಬೋಯಿಂಗ್ ಗ್ಲೋಬಲ್ ಖಚಿತಪಡಿಸಿದ್ದಾರೆ.

ಜಾಗತಿಕವಾಗಿ ಬೋಯಿಂಗ್ ಉದ್ಯೋಗ ಕಡಿತವನ್ನು ಮಾಡುತ್ತಿದೆ. ಇದರ ಭಾಗವಾಗಿಯೇ ಬೆಂಗಳೂರು ಘಟಕದಲ್ಲಿ 180 ಇಂಜಿನಿಯರಿಂಗ್ ಘಟಕದ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. 2024ರ ಆಗಸ್ಟ್‌ನಲ್ಲಿ ದೇವನಹಳ್ಳಿಯಲ್ಲಿ ಬಿಐಇಟಿಸಿಯ 2ನೇ ಕಟ್ಟಡವನ್ನು ಉದ್ಘಾಟಿಸಲಾಗಿತ್ತು. ಅಮೆರಿಕ ಹೊರತಾಗಿ ಬೋಯಿಂಗ್‌ನ ಅತಿದೊಡ್ಡ ಹೂಡಿಕೆಗಳಲ್ಲಿ ಬೆಂಗಳೂರು ಸಹ ಒಂದಾಗಿದೆ. ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಕ್ಯಾಂಪಸ್ ಅನ್ನು ಬೋಯಿಂಗ್ ಇಲ್ಲಿ ಹೊಂದಿದೆ.

Boeing Bengaluru Unit Layoff Up To 180 Employees Engineering Unit

ಡಾ. ಬ್ರೆಂಡನ್ ನೆಲ್ಸನ್, "ನಾವು ಕಂಪನಿಯನ್ನು ಸರಿಯಾದ ಗಾತ್ರಕ್ಕೆ ತರುತ್ತಿದ್ದೇವೆ. ಅದರ ಭಾಗವಾಗಿ ಭಾರತದಲ್ಲಿ 150-180 ಬೋಯಿಂಗ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ" ಎಂದು ಹೇಳಿದ್ದಾರೆ. ಭಾರತದಲ್ಲಿ ಬೋಯಿಂಗ್‌ನ 7,000 ಉದ್ಯೋಗಿಗಳಲ್ಲಿ, ಸುಮಾರು 6,500 ಮಂದಿ ಬೆಂಗಳೂರು ಮತ್ತು ಚೆನ್ನೈನ ಬಿಐಇಟಿಸಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

ಬೋಯಿಂಗ್ ಉದ್ಯೋಗ ಕಡಿತ: ಡಾ. ಬ್ರೆಂಡನ್ ನೆಲ್ಸನ್, "ನಾವು ಜಾಗತಿಕವಾಗಿ ಕಂಪನಿಯ ಉದ್ಯೋಗಿಗಳನ್ನು ಕಡಿತಗೊಳಿಸುತ್ತಿದ್ದೇವೆ. ನಮ್ಮ ಒಟ್ಟು ಉದ್ಯೋಗಿಗಳ ಸಂಖ್ಯೆ ಜಾಗತಿಕವಾಗಿ 47 ರಾಷ್ಟ್ರಗಳನ್ನು ಒಳಗೊಂಡು 1,62,000ಕ್ಕೆ ಹೋಗುತ್ತಿದೆ. ಉದ್ಯೋಗಿಗಳಲ್ಲಿ ಸುಮಾರು ಶೇ 15ರಷ್ಟು ಜನರು ಅಮೆರಿಕದ ಹೊರಗಡೆಯವರು" ಎಂದು ಹೇಳಿದ್ದಾರೆ.

"ಹೊರಗೆ ಹೆಚ್ಚು ಸಂಖ್ಯೆಯ ಉದ್ಯೋಗಿಗಳು ಇದ್ದಾರೆ. ಸುಮಾರು 24,000 ಹೊರಗಿನ ಉದ್ಯೋಗಿಗಳಲ್ಲಿ ನಾಲ್ಕನೇ ಭಾಗಕ್ಕಿಂತ ಹೆಚ್ಚು ಜನರು ಭಾರತದಲ್ಲಿದ್ದಾರೆ. ಭಾರತದಲ್ಲಿ ನಾವು 7,000 ಉದ್ಯೋಗಿಗಳನ್ನು ಹೊಂದಿದ್ದೇವೆ. 320 ಪೂರೈಕೆದಾರರ ಜೊತೆ ನಮ್ಮ 7000 ಉದ್ಯೋಗಿಗಳನ್ನು ಸೇರಿಸಿದಾಗ ಅದು ಸುಮಾರು 14,000 ಆಗುತ್ತದೆ. ಇದು ಅಮೆರಿಕದ ಹೊರಗೆ ನಮ್ಮ ದೊಡ್ಡ ಹಾದಿಯಾಗಿದೆ. ಶೇ 10ರಷ್ಟು ಉದ್ಯೋಗಿಗಳನ್ನು ಕಡಿತಗೊಳಿಸಲು ನಾವು ಮುಂದಾಗಿದ್ದೇವೆ. ನಾವು ಎದುರಿಸುತ್ತಿರುವ ಆರ್ಥಿಕ ಸವಾಲುಗಳಿಗೆ ಅನುಗುಣವಾಗಿ ಭಾರತದಲ್ಲಿ ಉದ್ಯೋಗಿಗಳ ಕಡಿತವಾಗಿದೆ" ಎಂದು ಹೇಳಿದ್ದಾರೆ.

ಬೋಯಿಂಗ್‌ನ ಪುನಶ್ಚೇತನ ಯೋಜನೆಗಳಿಗೆ ಭಾರತ ಮುಖ್ಯವಾಗಿದೆ ಎಂದು ಕಂಪನಿ ಹೇಳಿದೆ. ವಿಮಾನ ಉತ್ಪಾದನೆ ಹೆಚ್ಚಿದಂತೆ ಇಲ್ಲಿ ಮೂಲ ವಸ್ತುಗಳ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತದೆ. ಏರ್ ಇಂಡಿಯಾ ಗ್ರೂಪ್ ಮತ್ತು ಅಕಾಸಾ ಮುಂತಾದ ವಿಮಾನಯಾನ ಸಂಸ್ಥೆ ಗ್ರಾಹಕರು ಭರವಸೆ ನೀಡಿದ ವೇಗದಲ್ಲಿ ವಿಮಾನಗಳನ್ನು ಖರೀದಿ ಮಾಡುತ್ತಿಲ್ಲ.

ಉತ್ಪಾದನೆ ವೇಗ ಪಡೆಯುತ್ತಿದ್ದಂತೆ ಉದ್ಯೋಗಿಗಳ ಸಂಖ್ಯೆ ಮತ್ತೆ ಹೆಚ್ಚಬಹುದು ಎಂಬ ನಿರೀಕ್ಷೆ ಇದೆ ಎಂದು ಬೋಯಿಂಗ್‌ ಹೇಳಿದ್ದು, ಸದ್ಯಕ್ಕೆ ಇಂಜಿನಿಯರಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 180 ಜನರನ್ನು ಕೆಲಸದಿಂದ ವಜಾಗೊಳಿಸಿದೆ.

ದೇವನಹಳ್ಳಿಯಲ್ಲಿರುವ ಬೋಯಿಂಗ್‌ ಇಂಡಿಯಾ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ ಸೆಂಟರ್‌ (ಬಿಐಇಟಿಸಿ) ಬಿ2 ವಿಭಾಗದಲ್ಲಿ ಬೋಯಿಂಗ್ ಸಂಶೋಧನೆ ಮತ್ತು ತಂತ್ರಜ್ಞಾನ, ಬೋಯಿಂಗ್ ಪರೀಕ್ಷೆ ಮತ್ತು ವಿಶ್ಲೇಷಣಾ ಪ್ರಯೋಗಾಲಯ ಸೇರಿದಂತೆ ವಿವಿಧ ಘಟಕಗಳನ್ನು ಹೊಂದಿದೆ.

ಸುಮಾರು 1,600 ಕೋಟಿ ರೂ. ಹೂಡಿಕೆಯಲ್ಲಿ ಈ ಘಟಕ ಆರಂಭಿಸಲಾಗಿದೆ. ಅಮೆರಿಕದಿಂದ ಆಚೆಗೆ ಬೋಯಿಂಗ್‌ನ ಅತಿ ದೊಡ್ಡ ಘಟಕ ಇದಾಗಿದೆ. ಬೋಯಿಂಗ್ ಇಂಡಿಯಾದ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+