ಬ್ಯಾಂಕ್ ಆಫ್ ಬರೋಡ ವ್ಯಾಪ್ತಿಯಲ್ಲಿ ಉದ್ಯೋಗ ಖಾಲಿ ಇವೆ, ಸೆ.14ರೊಳಗೆ ಅರ್ಜಿ ಸಲ್ಲಿಸಿ, ವಿವರ ತಿಳಿಯಿರಿ

ಬೆಂಗಳೂರು, ಸೆಪ್ಟಂಬರ್ 05: ಬ್ಯಾಂಕ್ ಆಫ್ ಬರೋಡಾ ಫೈನಾನ್ಶಿಯಲ್ ಸೊಲ್ಯೂಷನ್ಸ್ ಲಿಮಿಟೆಡ್ (BOB) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿರುವ ಆಸಕ್ತರು ಸೆಪ್ಟಂಬರ್ 14 ರೊಳಗೆ ಅರ್ಜಿ ಸಲ್ಲಸಿಬೇಕಿದೆ.

ಬ್ಯಾಂಕ್ ಆಫ್ ಬರೋಡಾ ಫೈನಾನ್ಶಿಯಲ್ ಸೊಲ್ಯೂಷನ್ಸ್ ಲಿಮಿಟೆಡ್ ನಲ್ಲಿ ಒಟ್ಟು 20 ರೀಜನಲ್ ರಿಲೇಶನ್​ಶಿಪ್ ಆಫೀಸರ್/ ಡೆಪ್ಯುಟಿ ರೀಜನಲ್ ರಿಲೇಶನ್​ಶಿಪ್​ ಆಫೀಸರ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಆಸಕ್ತರು ಕೂಡಲೇ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಇದಕ್ಕು ಮೊದಲು ವೇತನ, ಉದ್ಯೋಗದ ಪೂರ್ಣ ಮಾಹಿತಿ ತಿಳಿದು ಅರ್ಜಿ ಸಲ್ಲಿಸುವಂತೆ ಸಂಸ್ಥೆ ತಿಳಿಸಿದೆ.

bob-financial-solutions-recruitment-2023

ನೇಮಕಾತಿ ಪೂರ್ಣ ವಿವರ

ಸಂಸ್ಥೆ: ಬ್ಯಾಂಕ್ ಆಫ್ ಬರೋಡಾ ಫೈನಾನ್ಶಿಯಲ್ ಸೊಲ್ಯೂಷನ್ಸ್ ಲಿ.

ಹುದ್ದೆ ಹೆಸರು: ರೀಜನಲ್ ರಿಲೇಶನ್​ಶಿಪ್ ಆಫೀಸರ್

ಖಾಲಿ ಹುದ್ದೆ ಸಂಖ್ಯೆ: 20

ಪೋಸ್ಟಿಂಗ್: ಭಾರತ

ಶೈಕ್ಷಣಿಕ ಅರ್ಹತೆ ವಿವರ

ಅರ್ಜಿ ಸಲ್ಲಿಸಲು ಬಯಸವು ಆಸಕ್ತು ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಲಿ ಇಲ್ಲವೇ ವಿಶ್ವವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವುದು ಕಡ್ಡಾಯ ಎಂದು ಬ್ಯಾಂಕ್ ಆಫ್ ಬರೋಡಾ ಫೈನಾನ್ಶಿಯಲ್ ಸೊಲ್ಯೂಷನ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.

bob-financial-solutions-recruitment-2023

ವಯಸ್ಸಿನ ಮಿತಿ

ಅಭ್ಯರ್ಥಿಗಳ ವಯಸ್ಸು ಸೆಪ್ಟೆಂಬರ್ 14 2023ಕ್ಕೆ ಗರಿಷ್ಠ 45 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು. ಇನ್ನೂ ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ನಿಗದಿ ಮಾಡಲಾಗಿದೆ ಎಂದು ಕಂಪನಿ ಅಧಿಸೂಚನೆ ತಿಳಿಸಿದೆ.

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ

ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳು ಮೊದಲು ಲಿಖಿತ ಪರೀಕ್ಷೆಗೆ ಹಾಜರಾಗಬೇಕು. ಅಲ್ಲಿ ಆಯ್ಕೆ ಆಗುವವರಿಗೆ ನೇರ ಸಂದರ್ಶನ ಇರಲಿದೆ. ಇನ್ನೂ ಹುದ್ದೆಗಳಿಗೆ ಆಯ್ಕೆ ಆಗುವವರಿಗೆ ವೇತನ ನಿಗದಿ ಮಾಡಿಲ್ಲ. ಭಾರತದಲ್ಲಿ ಎಲ್ಲಿಯಾದರೂ ಅವರಿಗೆ ಪೋಸ್ಟಿಂಗ್ ನೀಡಲಾಗುವುದು ಎಂದು ಕಂಪನಿ ಹೇಳಿದೆ.

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಮತ್ತು ಹೆಚ್ಚಿನ ಮಾಹಿತಿಗೆ ಈ ಜಾಲತಾಣ https://bobfinancial.turbohire.co/ ಕ್ಕೆ ಭೇಟಿ ನಿಡಬೇಕು ಎಂದು ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+