ನಮ್ಮ ಮೆಟ್ರೋದಲ್ಲಿ ಮಾಸಿಕ ₹2,00,000 ಸಂಬಳದ ಹುದ್ದೆಗೆ ಅರ್ಜಿ ಆಹ್ವಾನ
Namm Metro Recruitment 2024: ಬೆಂಗಳೂರು ಜೀವನಾಡಿ ಸಾರಿಗೆಯಲ್ಲೊಂದಾದ ನಮ್ಮ ಮೆಟ್ರೋ ಉದ್ಯೋಗವಕಾಶಗಳನ್ನು ಒದಗಿಸುತ್ತಲೇ ಬಂದಿದೆ. ಹಾಗೆಯೇ ಇದೀಗ ಬಿಎಂಆರ್‌ಸಿಎಲ್ ಸಂಸ್ಥೆಯಲ್ಲಿ ಒಟ್ಟು 11 ಉದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಆಹುದ್ದೆಗಳು ಯಾವುವು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಮಾಸಿಕ ವೇತನದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬಿಎಂಆರ್‌ಸಿಎಲ್ ಸಂಸ್ಥೆಯಲ್ಲಿ ಖಾಲಿಯಿರುವ ಮುಖ್ಯ ಎಂಜಿನಿಯರ್, ಮುಖ್ಯ ಡೆಪ್ಯುಟಿ ಎಂಜಿನಿಯರ್/ನಿರ್ವಾಹಕ ಎಂಜಿನಿಯರ್, ಸಹಾಯಕ ಎಂಜಿನಿಯರ್/ವಿಭಾಗ ಎಂಜಿನಿಯರ್‌ನ ಒಟ್ಟು 11 ಹುದ್ದೆಗಳ ಭರ್ತಿ ಮಾಡಲು ಸಂಸ್ಥೆಯು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು ಬೆಂಗಳೂರು ಮೆಟ್ರೋ ರೈಲು ನೇಮಕಾತಿ 2024 ಸಂಬಂದಿತ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದಾಗಿದೆ.

ನೇಮಕಾತಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಜುಲೈ 31 ಆಗಿದ್ದು, ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗಾಗಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ.
ಹುದ್ದೆಯ ವಿವರ: ಸಲಹೆಗಾರ/ಮುಖ್ಯ ಎಂಜಿನಿಯರ್ (ಸಿವಿಲ್), ಮುಖ್ಯ ಡೆಪ್ಯುಟಿ ಎಂಜಿನಿಯರ್/ನಿರ್ವಾಹಕ ಎಂಜಿನಿಯರ್ (ಟ್ರ್ಯಾಕ್), ಸಹಾಯಕ ಎಂಜಿನಿಯರ್ / ವಿಭಾಗ ಎಂಜಿನಿಯರ್ ಸೇರಿ ಒಟ್ಟು 11 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸ್ಪೀಡ್ ಪೋಸ್ಟ್/ಕೊರಿಯರ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಉದ್ಯೋಗ ಸ್ಥಳ ಬೆಂಗಳೂರು ಆಗಿದೆ. ಅರ್ಜಿ ಸಲ್ಲಿಕೆಯ ದಿನಾಂಕ ಜುಲೈ 1ರಿಂದ ಆರಂಭವಾಗಿದ್ದು, ಜುಲೈ 31ರವರೆಗೂ ಸಮಯವಕಾಶ ಇದೆ.
ಈ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಗರಿಷ್ಠ 55 ವರ್ಷ ಮತ್ತು ಕನಿಷ್ಠ 35 ವರ್ಷದ ವಯೋಮಿತಿ ಆಗರಬೇಕಾಗುತ್ತದೆ.
* ಸಲಹೆಗಾರ/ಮುಖ್ಯ ಎಂಜಿನಿಯರ್ (ಸಿವಿಲ್) ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಸಿವಿಲ್ ಇಂಜಿನೀಯರಿಂಗ್ ವಿಭಾಗದಲ್ಲಿ ಬಿಇ ಅಥವಾ ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕಾಗುತ್ತದೆ. ಆಯ್ಕೆಯಾದವರಿಗೆ ಮಾಸಿಕ ವೇತನ 40,000-2,10,693 ರೂಪಾಯಿವರೆಗೂ ಇರುತ್ತದೆ.
* ಡೆಪ್ಯುಟಿ ಮುಖ್ಯ ಎಂಜಿನಿಯರ್/ನಿರ್ವಾಹಕ ಎಂಜಿನಿಯರ್ (ಟ್ರ್ಯಾಕ್) ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಸಿವಿಲ್ ಇಂಜಿನೀಯರಿಂಗ್ ವಿಭಾಗದಲ್ಲಿ ಬಿಇ ಅಥವಾ ಬಿ.ಟೆಕ್ ಪದವಿ ಪೂರ್ಣಗೊಳಿಸಿರಬೇಕಾಗುತ್ತದೆ. ಅಥವಾ ಕನಿಷ್ಠ 12 ವರ್ಷದ ಅನುಭವ ಹೊಂದಿರುವ ಬಿಇ ಅಥವಾ ಬಿ.ಟೆಕ್ ಪದವಿದರರಿಗೆ ಆದ್ಯತೆ ನೀಡಲಾಗುತ್ತದೆ. ಇವರಿಗೆ ಮಾಸಿಕ ವೇತನ 40,000-2,10,693 ರೂಪಾಯಿವರೆಗೂ ಇರುತ್ತದೆ.
* ಸಹಾಯಕ ಎಂಜಿನಿಯರ್/ವಿಭಾಗ ಎಂಜಿನಿಯರ್ (ಟ್ರ್ಯಾಕ್) ಹುದ್ದೆಗೆ ಅರ್ಜಿ ಸಲ್ಲಿಸಬಯಸುವವರು ಬಿಇ ಅಥವಾ ಬಿ.ಟೆಕ್ ಪದವಿ ಅಥವಾ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೋಮಾ ಮುಗಿಸಿರಬೇಕಾಗುತ್ತದೆ. ಇವರಿಗೂ ಕೂಡ 40,000-2,10,693 ರೂಪಾಯಿವರೆಗೂ ಮಾಸಿಕ ವೇತನ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆಯ ವಿವರ: ಬಿಎಂಆರ್‌ಸುಎಲ್ ಸಂಸ್ಥೆಯಿಂದ ಅರ್ಜಿಗಳ ಪರಿಶೀಲನೆ ನಡೆದ ಬಳಿಕ ಪೂರಕ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನದಲ್ಲಿನ ಅಭ್ಯರ್ಥಿಗಳ ಪ್ರದರ್ಶನವನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿಯ ನಮೂನೆಯನ್ನು ಪಡೆದುಕೊಂಡು, ಅರ್ಜಿ ನಮೂನೆಯನ್ನು ಭರ್ತಿ ಮಾಡಿ ದಾಖಲೆಗಳೊಂದಿಗೆ, ಕೆಳಗಿನ ವಿಳಾಸಕ್ಕೆ ಸ್ಪೀಡ್ ಪೋಸ್ಟ್/ಕೊರಿಯರ್ ಮೂಲಕ ಕಳುಹಿಸಿ. ಅಭ್ಯರ್ಥಿಗಳು ಸ್ಪೀಡ್ ಪೋಸ್ಟ್/ಕೊರಿಯರ್ ಹಾಳೆ ಮೇಲೆ ಅರ್ಜಿ ಸಲ್ಲಿಸಲು ಬಯಸುವ ನಿರ್ದಿಷ್ಟ ಹುದ್ದೆಯನ್ನು ಉಲ್ಲೇಖ ಮಾಡಬೇಕಾಗುತ್ತದೆ.
ಅರ್ಜಿ ಸಲ್ಲಿಕೆಯ ವಿಳಾಸ: ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ, 3ನೇ ಮಹಡಿ, BMTC ಸಂಕೀರ್ಣ, K.H.ರಸ್ತೆ, ಶಾಂತಿನಗರ, ಬೆಂಗಳೂರು 560027.












Click it and Unblock the Notifications