100 ಇಂಜಿನಿಯರ್ ಹುದ್ದೆಗೆ ಅರ್ಜಿ ಕರೆದ ಬಿಎಂಆರ್‌ಸಿಎಲ್
ಬೆಂಗಳೂರು, ಮಾರ್ಚ್ 07 : ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ 100 ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಏಪ್ರಿಲ್ 8, 2019 ಕೊನೆ ದಿನ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಕಾಂಟ್ರಕ್ಟ್ ಬೇಸಿಸ್ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಎಕ್ಸಿಕ್ಯುಟೀಚ್ ಇಂಜಿನಿಯರ್ (ಬಿ.ಇ/ಬಿ.ಟೆಕ್), ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಇಂಜಿನಿಯರ್ (ಬಿ.ಇ/ಬಿ.ಟೆಕ್), ಅಸಿಸ್ಟೆಂಟ್ ಇಂಜಿನಿಯ್ (ಡಿಪ್ಲೊಮಾ, ಬಿಇ, ಬಿ.ಟೆಕ್), ಸೆಕ್ಷನ್ ಇಂಜಿನಿಯರ್ (ಡಿಪ್ಲೊಮಾ, ಬಿಇ, ಬಿಟೆಕ್) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ವಯೋಮಿತಿ : ಎಕ್ಸಿಕ್ಯುಟೀಚ್ ಇಂಜಿನಿಯರ್ ಹುದ್ದೆಗೆ 50, ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಇಂಜಿನಿಯರ್ ಹುದ್ದೆಗೆ 45, ಅಸಿಸ್ಟೆಂಟ್ ಇಂಜಿನಿಯ್ ಹುದ್ದೆಗೆ 40, ಸೆಕ್ಷನ್ ಇಂಜಿನಿಯರ್ ಹುದ್ದೆಗೆ 35 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ.
ವೇತನ ಶ್ರೇಣಿ : ಎಕ್ಸಿಕ್ಯುಟೀಚ್ ಇಂಜಿನಿಯರ್ 80,000, ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಇಂಜಿನಿಯರ್ 65,000, ಅಸಿಸ್ಟೆಂಟ್ ಇಂಜಿನಿಯ್ 50,000, ಸೆಕ್ಷನ್ ಇಂಜಿನಿಯರ್ 36, 000 ಪ್ರತಿ ತಿಂಗಳ ವೇತನ ನಿಗದಿ ಮಾಡಲಾಗಿದೆ.
ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ, ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ. ಲಕೋಟೆ ಮೇಲೆ ಯಾವ ಹುದ್ದೆಗೆ ಅರ್ಜಿ ಎಂದು ಸ್ಪಷ್ಟವಾಗಿ ಬರೆದಿರಬೇಕು.
ಅರ್ಜಿ ಸಲ್ಲಿಸಲು ವಿಳಾಸ
General Manager (HR)
Bangalore Metro Rail Corporation Limited
III Floor, BMTC Complex
K.H.Road, Shanthinagar
Bengaluru 560027
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications