ನಮ್ಮ ಮೆಟ್ರೋ ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 19: ನಮ್ಮ ಮೆಟ್ರೋ- ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಲ್) ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ವಾಕ್ ಇನ್ ಸಂದರ್ಶನ ನಡೆಸಲಾಗುತ್ತಿದೆ. ಅಕ್ಟೋಬರ್ 31, 2017ರಂದು ಸಂದರ್ಶನ ನಿಗದಿಯಾಗಿದೆ.

ಸಂಸ್ಥೆ : ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಲ್)
ಹುದ್ದೆ: ತಹಸೀಲ್ದಾರ್, ಉಪ ತಹಸೀಲ್ದಾರ್ ಹಾಗೂ ಸರ್ವೇಯರ್.
ಒಟ್ಟು ಹುದ್ದೆಗಳು: 3
ಉದ್ಯೋಗದ ಸ್ಥಳ: ಬೆಂಗಳೂರು (ಕರ್ನಾಟಕ)
ಸಂದರ್ಶನದ ದಿನಾಂಕ: ಅಕ್ಟೋಬರ್ 31, 2017.

BMRCL Recruitment 2017 Apply For Tahsildar Surveyor

ವಯೋಮಿತಿ: ತಹಸೀಲ್ದಾರ್ ಹಾಗೂ ಉಪ ತಹಸೀಲ್ದಾರ್ ಹುದ್ದೆಗೆ ಗರಿಷ್ಠ 45 ವರ್ಷ.

ವಿದ್ಯಾರ್ಹತೆ:

* ತಹಸೀಲ್ದಾರ್ ಹುದ್ದೆಯ ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಯಲಗಳಲ್ಲಿ ಪದವಿ ಪೂರ್ಣಗೊಳಿಸಿರಬೇಕು.

* ಉಪ ತಹಸೀಲ್ದಾರ್ ಹಾಗೂ ಸರ್ವೆಯರ್ ಹುದ್ದೆಯ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ಪಿಯುಸಿ (10+2)ಗಣಿತ, ವಿಜ್ಞಾನ ವಿಷಯ ಓದಿರಬೇಕು. ಅಥವಾ ಎಸ್ಸೆಸೆಲ್ಸಿ ಆಗಿದ್ದು, ಸರ್ವೇ ವಿಭಾಗದಲ್ಲಿ ಡಿಪ್ಲೋಮಾ/ಐಟಿಐ ಪಡೆದವರು ಹಾಜರಾಗಬಹುದು.

ಆಯ್ಕೆ ವಿಧಾನ: ಮೇಲೆ ತಿಳಿಸಿರುವ ಹುದ್ದೆಗಳಿಗೆ ಅಕ್ಟೋಬರ್ 31, 2017ರಂದು ವಾಕ್ ಇನ್ ಸಂದರ್ಶನ ನಡೆಸಲಾಗುತ್ತದೆ. ವಿದ್ಯಾರ್ಹತೆಗೆ ಸಂಬಂಧಿಸಿದ ಪ್ರಮಾಣ ಪತ್ರ, ಮೂಲ ದಾಖಲೆ ಪತ್ರಗಳು, ನಕಲು ಪ್ರತಿಗಳನ್ನು ಸಂದರ್ಶನದ ವೇಳೆ ತರತಕ್ಕದ್ದು.

ಇನ್ನು ಹೆಚ್ಚಿನ ವಿವರಣೆಗಾಗಿ ಇಲ್ಲಿ ಕ್ಲಿಕ್ಕಿಸಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BMRC recruitment 2017 notification has been released on official website for the recruitment of total 03 (three) jobs out of which 01 (one) vacancy for Tahsildar, 01 (one) for Dy. Tahsildar & 01 (one) for Surveyor vacancy. Walk-in-Interview 31st October 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ