BMRCL Jobs 2023: ಸಿವಿಲ್ ಎಂಜಿನಿಯರ್‌ಗೆ ಉದ್ಯೋಗವಕಾಶ, ವೇತನ, ಅರ್ಜಿ ಸಲ್ಲಿಕೆ ಬಗ್ಗೆ ತಿಳಿಯಿರಿ
ಬೆಂಗಳೂರು, ಜುಲೈ 31: ಬೆಂಗಳೂರು ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL) ಸಂಸ್ಥೆಯು ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಅವ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದ. ಈ ಸಂಬಂಧ ಅರ್ಹರಿಂದ ಅರ್ಜಿ ಆಹ್ವಾನಿಸಿದ್ದು, ಆಗಸ್ಟ್ 24ರೊಳಗೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ
ಬೆಂಗಳೂರು ರೈಲ್ ಕಾರ್ಪೊರೇಷನ್ ಲಿಮಿಟೆಡ್ (BMRCL)ನಲ್ಲಿ ಒಟ್ಟು 2 ಚೀಫ್ ಜನರಲ್ ಮ್ಯಾನೇಜರ್/ ಚೀಫ್ ನಗರದಲ್ಲಿ (ಸಿವಿಲ್) ಹುದ್ದೆಗಳು ಖಾಲಿ ಇವೆ. ಸಿವಿಲ್ ಎಂಜಿನಿಯರ್ ಮಾಡಿದವರಿಗೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಉದ್ಯೋಗ ಪಡೆಯುವುದು ಉತ್ತಮ ಅವಕಾಶ ಇದಾಗಿದೆ.

ಅರ್ಜಿ ಸಲ್ಲಿಕೆಗೂ ಮುನ್ನ ಅಭ್ಯರ್ಥಿಗಳ ಖಾಲಿ ಹುದ್ದೆಗಳ ಹೆಚ್ಚಿನ ಮಾಹಿತಿ, ಶೈಕ್ಷಣಿಕ ಅರ್ಹತೆ, ವೇತನ, ವೆಬ್‌ಸೈಟ್ ವಿಳಾಸ ಹಾಗೂ ಇನ್ನಿತರ ಅಂಶಗಳನ್ನು ಇಲ್ಲಿ ತಿಳಿಯಿರಿ.
ನೇಮಕಾತಿ ಪೂರ್ಣ ವಿವರ
ಹುದ್ದೆ ಹೆಸರು- ಚೀಫ್ ಜನರಲ್ ಮ್ಯಾನೇಜರ್/ ಚೀಫ್ ಸ್ಟೇಶನ್ (ಸಿವಿಲ್)
ಒಟ್ಟು ಹುದ್ದೆ ಸಂಖ್ಯೆ - 2
ಮಾಸಿಕ ವೇತನ - ರೂ.37,400 ನಿಂದ 67,000 ರೂ.ವರೆಗೆ
ಪೋಸ್ಟಿಂಗ್ - ಬೆಂಗಳೂರು
ಅರ್ಜಿ ಸಲ್ಲಿಕೆ ಕೊನೆ ದಿನ - ಆಗಸ್ಟ್ 24
ವಿದ್ಯಾರ್ಹತೆ ಏನಿರಬೇಕು
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದಾದರೂ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಬೇಕು ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ (BMRCL) ಮಾನ್ಯತೆ ಅಧಿಸೂಚನೆ ತಿಳಿಸಿದೆ.

ವೇತನ ಮತ್ತು ವಯಸ್ಸಿನ ಮಿತಿ
ಅರ್ಜಿ ಸಲ್ಲಿಸಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕ 37,400 ರೂಪಾಯಿಯಿಂದ 67,000 ರೂಪಾಯಿವರೆಗೆ ನಿಯಮಾನುಸಾರ ವೇತನ ಇರಲಿದೆ. ಇನ್ನೂ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಇದೇ ಜುಲೈ 28ಕ್ಕೆ ಗರಿಷ್ಠ 55 ಮೀರಿರಬಾರದು. ನಿಯಮಾನುಸಾರ ಅಭ್ಯರ್ಥಿಗಳ ವಯಸ್ಸಿನಲ್ಲಿ ಸಡಿಲಿಕೆ ಇರಲಿದೆ ಎಂದು ನಮ್ಮ ಮೆಟ್ರೋ ಹೇಳಿದೆ.
ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುವುದು. ಅದರಲ್ಲಿ ಆಯ್ಕೆಯಾಗುವವರಿಗೆ ನೇತ ಸಂದರ್ಶನ ನಡೆಸಲಾಗುವುದು ಎಂದು ಅಧಿಸೂಚನೆ ತಿಳಿಸಿದೆ.
ಅರ್ಜಿ ಸಲ್ಲಿಕೆ ವಿಧಾನ
ಅಭ್ಯರ್ಥಿಗಳು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವುದಾದರೆ, ''ಜನರಲ್ ಮ್ಯಾನೇಜರ್ (HR), ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, 3ನೇ ಮಹಡಿ, BMTC ಕಾಂಪ್ಲೆಕ್ಸ್, ಕೆ.ಎಚ್. ರಸ್ತೆ, ಶಾಂತಿನಗರ,ಬೆಂಗಳೂರು - 560027 ಇಲ್ಲಿಗೆ ಭರ್ತಿ ಮಾಡಿದ ಅರ್ಜಿ ಕಳುಹಿಸಬೇಕು.












Click it and Unblock the Notifications