ಬಿಎಚ್‌ಇಎಲ್‌ನಲ್ಲಿ 29 ಹುದ್ದೆಗಳಿವೆ ಅರ್ಜಿ ಹಾಕಿ
ಬೆಂಗಳೂರು, ಮಾರ್ಚ್ 29 : ಬಿಎಚ್‌ಇಎಲ್ 29 ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 16ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್) 12ಎಸ್‌ಎಂಓ, 17 ಜಿಡಿಎಂಓ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿಸಬೇಕು.
ವೇತನ ಶ್ರೇಣಿ
ಸೀನಿಯರ್ ಮೆಡಿಕಲ್ ಆಫೀಸರ್ (ಎಸ್‌ಎಂಓ) ಹುದ್ದೆ : 29,100 ರೂ.ಗಳು
ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ (ಜಿಡಿಎಂಓ) ಹುದ್ದೆ : 50500 ರೂ.ಗಳು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಬಿಬಿಎಸ್ ಕೋರ್ಸ್ ಪೂರ್ಣಗೊಳಿಸಿರಬೇಕು. ಅರ್ಜಿ ಆಹ್ವಾನಿಸಿರುವ ಹುದ್ದೆಗಳಲ್ಲಿ ಕನಿಷ್ಟ ಒಂದು ವರ್ಷದ ಅನುಭವ ಹೊಂದಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಎಸ್‌ಎಂಓ ಹುದ್ದೆಗೆ 37, ಜಿಡಿಎಂಓ ಹುದ್ದೆಗೆ 32 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 1/3/2018ಕ್ಕೆ ಅನ್ವಯವಾಗುವಂತೆ.
ಪ್ರಮುಖ ಅಂಶಗಳು
* ಬಿಎಚ್ಇಎಲ್‌ನಲ್ಲಿ ಉದ್ಯೋಗ
* ಎಸ್‌ಎಂಓ ಮತ್ತು ಜಿಡಿಎಂಓ ಹುದ್ದೆಗಳು
* ಒಟ್ಟು ಹುದ್ದೆಗಳು 29
* ಏಪ್ರಿಲ್ 16 ಅರ್ಜಿ ಸಲ್ಲಿಸಲು ಕೊನೆಯ ದಿನ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications