ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ದೂರದರ್ಶನದಲ್ಲಿ ವಿವಿಧ ಉದ್ಯೋಗಾವಕಾಶ

ದೂರದರ್ಶನ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗ ಈ ಕೆಳಗಿನ 6 ವಿವಿಧ ಬಗೆಯ ವರ್ಗಗಳಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

|
Google Oneindia Kannada News

ಬೆಂಗಳೂರು, ಮೇ 08 : ದೂರದರ್ಶನ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗ ಈ ಕೆಳಗಿನ ವರ್ಗಗಳಲ್ಲಿ ಹಂಗಾಮಿಯಾಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಸಹಾಯಕ ಸುದ್ದಿ ಸಂಪಾದಕ, ನಿರ್ಮಾಪಕ, ಕಾಪಿ ಎಡಿಟರ್, ವರದಿಗಾರ, ವೀಡಿಯೊ ಎಡಿಟರ್, , ಕ್ಯಾಮರಾಮನ್, ಸಿ.ಜಿ. ಆಪರೇಟರ್ ಹುದ್ದೆಗಳಿಗೆ ಸುದ್ದಿ ವಿಭಾಗದಲ್ಲಿ ಅನುಭವವಿರುವವರು, ಪತ್ರಿಕೋದ್ಯಮದಲ್ಲಿ ಪದವಿ ಪಡೆದವರು ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಇರುವವರು 2017, ಮೇ 31ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

Bengaluru Doordarshan Recruitment: Apply For Various Posts

ಹುದ್ದೆಗಳ ವಿವರ
1. ಸಹಾಯಕ ಸುದ್ದಿ ಸಂಪಾದಕ
* ವೇತನ: 1600 ರು. (ದಿನಕ್ಕೆ)
* ವಯೋಮಿತಿ: 25-50
* ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ/ಡಿಪ್ಲೊಮಾ ಉತ್ತೀರ್ಣರಾಗಿರಬೇಕು. ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವ ಉಳ್ಳವರಾಗಿರಬೇಕು.[ಎಸ್ ಬಿಐನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ]

2. ನಿರ್ಮಾಪಕ (Producer)
* ವೇತನ: 1250 ರು. (ದಿನಕ್ಕೆ)
* ವಯೋಮಿತಿ: 25-50
* ವಿದ್ಯಾರ್ಹತೆ: ಮಾನ್ಯತೆ ಪಡೆದ ವಿವಿಯಿಂದ ಪತ್ರಿಕೋದ್ಯಮದಲ್ಲಿ ಪದವಿ/ಡಿಪ್ಲೊಮಾ ಮತ್ತು ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವ.

3. ಕಾಪಿ ಎಡಿಟರ್
* ವೇತನ: 1000 ರು. (ದಿನಕ್ಕೆ)
* ವಯೋಮಿತಿ: 25-50
* ವಿದ್ಯಾರ್ಹತೆ: ಮಾನ್ಯತೆ ಪಡೆದ ವಿವಿಯಿಂದ ಪತ್ರಿಕೋದ್ಯಮದಲ್ಲಿ ಪದವಿ/ಡಿಪ್ಲೊಮಾ ಹಾಗೂ ಸುದ್ದಿ ಪ್ರಸಾರ/ಸುದ್ದಿ ಸಂಸ್ಥೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವ[ಆರ್ ಬಿಐನಲ್ಲಿ 'ಬಿ-ಗ್ರೇಡ್' ಹುದ್ದೆಗಳಿಗೆ ಅರ್ಜಿ ಆಹ್ವಾನ]

4. ವರದಿಗಾರ
* ವೇತನ: 1600 ರು. ದಿನಕ್ಕೆ (3 ವರ್ಷ ಅನುಭವ ಉಳ್ಳವರಿಗೆ), 1250 ರು. ದಿನಕ್ಕೆ (ಫ್ರೆಶರ್)
* ವಿದ್ಯಾರ್ಹತೆ: ಮಾನ್ಯತೆ ಪಡೆದ ವಿವಿಯಿಂದ ಪತ್ರಿಕೋದ್ಯಮದಲ್ಲಿ ಪದವಿ/ಡಿಪ್ಲೊಮಾ.
* ವಯೋಮಿತಿ: 25-50

5. ವೀಡಿಯೋ ಎಡಿಟರ್
* ವೇತನ: 1000 ರು. (ದಿನಕ್ಕೆ)
* ವಯೋಮಿತಿ: 25-50
* ವಿದ್ಯಾರ್ಹತೆ : ಮಾನ್ಯತೆ ಪಡೆದ ವಿವಿಯಿಂದ ಫಿಲಂ/ವಿಡಿಯೋ ಎಡಿಟಿಂಗ್ ನಲ್ಲಿ ಪದವಿ/ಡಿಪ್ಲೊಮಾ ಸಂಬಂಧಿಸಿದ ಕ್ಷೇತ್ರದಲ್ಲಿ 2 ವರ್ಷ ಅನುಭವ.

6. ಕ್ಯಾಮರಾಮನ್
* ವೇತನ: 1000 ರು. (ದಿನಕ್ಕೆ)
* ವಯೋಮಿತಿ: 25-50
* ವಿದ್ಯಾರ್ಹತೆ: ಮಾನ್ಯತೆ ಪಡೆದ ವಿವಿಯಿಂದ ಸಿನೆಮಾಟೊಗ್ರಫಿ/ ವಿಡಿಯೊಗ್ರಫಿ ಪದವಿ/ಡಿಪ್ಲೊಮಾ ಸಂಬಂಧಿಸಿದ ಕ್ಷೇತ್ರದಲ್ಲಿ 1 ವರ್ಷ ಅನುಭವ.

7. ಸಿ.ಜಿ. ಆಪರೇಟರ್
* ವೇತನ: 750 ರು. (ದಿನಕ್ಕೆ)
* ವಯೋಮಿತಿ: 25-50
* ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 10+2 ವ್ಯಾಸಂಗ, ಕಂಪ್ಯೂಟರ್ ಅಪ್ಲಿಕೇಶನ್‍. ಕನ್ನಡ ಭಾಷೆ ಮತ್ತು ಕನ್ನಡ ಟೈಪಿಂಗ್‍ನಲ್ಲಿ (ಇನ್‍ಸ್ಕ್ರಿಪ್ಟ್, ನುಡಿ, ಬರಹ,) ಜ್ಞಾನ

* ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯಲ್ಲಿ ಪಾಸ್‍ ಪೋರ್ಟ್ ಗಾತ್ರದ ಭಾವಚಿತ್ರದೊಂದಿಗೆ 31ನೇ ಮೇ 2017 ಅರ್ಜಿ ಸಲ್ಲಿಸಬೇಕು
* ಸಲ್ಲಿಸಬೇಕಾದ ವಿಳಾಸ
ನಿರ್ದೇಶಕರು (ಸುದ್ದಿ),
ಪ್ರಾದೇಶಿಕ ಸುದ್ದಿ ವಿಭಾಗ,
ದೂರದರ್ಶನ ಕೇಂದ್ರ, ಜೆ.ಸಿ. ನಗರ,
ಬೆಂಗಳೂರು - 560 006.

ವಿಶೇಷ ಸೂಚನೆ
* ಅಭ್ಯರ್ಥಿಗಳು ಕನ್ನಡವನ್ನು ಚೆನ್ನಾಗಿ ಬಲ್ಲವರಾಗಿರಬೇಕು. ಇಂಗ್ಲಿಷ್, ಹಿಂದಿ ಮತ್ತು ಜಾಲತಾಣ ಸೇರಿದಂತೆ ಕಂಪ್ಯೂಟರ್ ಬಳಕೆಯ ಜ್ಞಾನ ಹೊಂದಿರಬೇಕು.
* ಅಭ್ಯರ್ಥಿಗಳು ಬೆಂಗಳೂರು ನಿವಾಸಿಗಳಾಗಿರಬೇಕು.
* ಆಯ್ಕೆ ಪ್ರಕ್ರಿಯೆಯು ಆಯಾ ಹುದ್ದೆಗೆ ತಕ್ಕಂತೆ ಕೌಶಲ್ಯ ಪರೀಕ್ಷೆ/ಲಿಖಿತ ಪರೀಕ್ಷೆ ಒಳಗೊಂಡಿರುತ್ತದೆ.
* ವಿದ್ಯಾರ್ಹತೆ, ವಯಸ್ಸು ಮತ್ತು ಅನುಭವ ದೃಢಪಡಿಸುವ ದಾಖಲಾತಿಗಳನ್ನು ಲಗತ್ತಿಸದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
* ಅಭ್ಯರ್ಥಿಗಳು ಅರ್ಜಿಯಲ್ಲಿ ತಮ್ಮ ಇಮೇಲ್ ವಿಳಾಸ ಮತ್ತು ಮೊಬೈಲ್ ದೂರವಾಣಿ ಸಂಖ್ಯೆಯನ್ನು ತಪ್ಪದೆ ನಮೂದಿಸಬೇಕು. ಕೌಶಲ್ಯ ಪರೀಕ್ಷೆ/ಲಿಖಿತ ಪರೀಕ್ಷೆ ನಡೆಯುವ ದಿನಾಂಕವನ್ನು ಇಮೇಲ್/ಮೊಬೈಲ್ ಫೋನ್ ಮೂಲಕ ತಿಳಿಸಲಾಗುವುದು.
*ಆಯ್ಕೆ ಪ್ರಕ್ರಿಯೆಯನ್ನು ಯಾವುದೇ ಕಾರಣ ನೀಡದೆ ರದ್ದುಪಡಿಸುವ ಹಕ್ಕನ್ನು ಮಹಾನಿರ್ದೇಶಕರು (ಸುದ್ದಿ ಮತ್ತು ಪ್ರಚಲಿತ ವಿದ್ಯಮಾನ), ಡಿಡಿ ನ್ಯೂಸ್ ಹೊಂದಿರುತ್ತಾರೆ.
*ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಯಾವುದೇ ವಿವಾದ ಬೆಂಗಳೂರು ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Bengaluru Doordarshan released employment notification on their official website for the recruitment of Assistant News Editor, Producer, Copy Editor, Reporter, Video Editor, Camera Person and CG Operator. Job seekers should apply online before 31 May 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X