ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 12 ಸಾವಿರ ಉದ್ಯೋಗ ಸೃಷ್ಟಿ, ಯಾವಾಗ?
ಬೆಂಗಳೂರು, ಅಕ್ಟೋಬರ್, 12: ಬೆಂಗಳೂರಿನ ಕೆಂಪೇಗೌಡ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಶೀಘ್ರವೇ 12 ಸಾವಿರ ಉದ್ಯೋಗಗಳು ಸೃಷ್ಟಿ ಆಗಲಿವೆ ಎಂದು ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಹರಿ ಮರಾರ್ ಮಾಹಿತಿ ನೀಡಿದ್ದಾರೆ. ಇದು ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ ಆಗಿದೆ.
ಬುಧವಾರ (ಅಕ್ಟೋಬರ್ 11) ನಗರದಲ್ಲಿ ನಡೆದ ಸೋಲ್ ಬೆಂಗಳೂರು ಬಿಸಿನೆಸ್ ಕಾನ್ಕ್ಷೇವ್‌ನಲ್ಲಿ 'ಬೆಂಗಳೂರು ರೂಪಾಂತರ' ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮುಂದಿನ 2 ವರ್ಷಗಳಲ್ಲಿಲ್ಲಿ ಇಂಡಿಗೋ, ವಿಮಾನ ನಿಲ್ದಾಣ ಆವರಣದಲ್ಲಿ ಏರ್ ಇಂಡಿಯಾ ಹಬ್ ನಿರ್ಮಾಣ ಆಗಲಿದೆ ಎಂದು ತಿಳಿಸಿದರು.

ಅಲ್ಲದೆ 2,500 ಕೋಟಿ ವೆಚ್ಚದ ಏರ್‌ಪೋರ್ಟ್ ಸಿಟಿ, 2ನೇ ಟರ್ಮಿನಲ್‌ನ ಉಳಿದ ಭಾಗದ ಅಭಿವೃದ್ಧಿ ಸೇರಿದಂತೆ ಹಲವು ಕೆಲಸಗಳು ನಡೆಯುತ್ತಿವೆ. ಈ ಮೂಲಕ ಮುಂದಿನ 2 ವರ್ಷದಲ್ಲಿ 12 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎನ್ನುವ ಮಾಹಿತಿಯನ್ನು ನೀಡಿದರು. ಪ್ರಸ್ತುತ ಈಗಿನ ಬೆಳವಣಿಗೆಯನ್ನು ಗಮನಿಸಿದರೆ ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣದ ಅಗತ್ಯ ಇದೆ. ಬೆಂಗಳೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ 2030ರ ವೇಳೆಗೆ ಸುಮಾರು 15 ಸಾವಿರ ಕೋಟಿ ಹೂಡಿಕೆ ಆಗಲಿದೆ ಎಂದರು.












Click it and Unblock the Notifications