ಬೆಳಗಾವಿ ಹಾಲು ಉತ್ಪಾದಕರ ಒಕ್ಕೂಟ ನೇಮಕಾತಿ; ಹುದ್ದೆ, ವೇತನ

ಬೆಳಗಾವಿ, ಆಗಸ್ಟ್ 28; ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ 26/9/2023ರ ತನಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.

ಒಟ್ಟು 46 ಹುದ್ದೆಗಳನ್ನು ಭರ್ತಿ ಮಾಡಲು ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಅರ್ಜಿಗಳನ್ನು ಕರೆದಿದೆ. ಅರ್ಜಿಗಳನ್ನು ಅಂಚೆ/ ಕೊರಿಯರ್/ ಖುದ್ದಾಗಿ ಸಲ್ಲಿಸಲು ಅವಕಾಶವಿಲ್ಲ ಎಂದು ನೇಮಕಾತಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.

Belagavi Milk Union Recruitment Apply For Various Post

ಪ್ರಕಟಣೆಯ ವಿವರ; ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ, ಬೆಳಗಾವಿ ಇದರಲ್ಲಿ ಖಾಲಿ ಇರುವ ವಿವಿಧ ವೃಂದದ ಒಟ್ಟು 46 ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್‌ಲೈನ್ ಮುಖಾಂತರ ಆಹ್ವಾನಿಸಲಾಗಿದೆ.

ನೇಮಕಾತಿಗೆ ಸಂಬಂಧಿಸಿದ ಮಾಹಿತಿಗಳಾದ ಅರ್ಜಿ ನಮೂನೆ, ಅರ್ಜಿ ಸಲ್ಲಿಸುವ ವಿಧಾನ, ಮೀಸಲಾತಿ ವರ್ಗೀಕರಣ, ವಿದ್ಯಾರ್ಹತೆ, ಅನುಭವ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ, ಸಲ್ಲಿಸಬೇಕಾದ ದಾಖಲೆಗಳು ಇತ್ಯಾದಿ ಹೆಚ್ಚಿನ ವಿವರಗಳನ್ನು ಬೆಳಗಾವಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧಿಕೃತ ವೆಬ್‌ಸೈಟ್ Www.bemul.in ನಲ್ಲಿ ನೀಡಲಾಗಿದೆ.

ಆಸಕ್ತರು ಆನ್‌ಲೈನ್ ಮೂಲಕ ಅರ್ಜಿಗಳನ್ನು ದಿನಾಂಕ 28/08/2023 ರಿಂದ 26/09/2023ವರೆಗೆ ಸಲ್ಲಿಸಬಹುದಾಗಿರುತ್ತದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಿ, ಆನ್‌ಲೈನ್ ಮೂಲಕ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಅಂಚೆ/ ಕೊರಿಯರ್/ ಖುದ್ದಾಗಿ ಸಲ್ಲಿಸಲು ಅವಕಾಶ ಇರುವುದಿಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.

ಹುದ್ದೆ, ವೇತನದ ವಿವರ; ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಸಹಾಯಕ ವ್ಯವಸ್ಥಾಪಕರು (ಎ. ಹೆಚ್ & ಎ. ಐ) 2, ಸಹಾಯಕ ವ್ಯವಸ್ಥಾಪಕರು (ವಿತ್ತ) 1, ತಾಂತ್ರಿಕ ಅಧಿಕಾರಿ (ಡಿಟಿ) 3, ತಾಂತ್ರಿಕ ಅಧಿಕಾರಿ (ಇಂ) 3, ತಾಂತ್ರಿಕ ಅಧಿಕಾರಿ (ಕ್ಯುಸಿ/ ಎಂ. ಬಿ) 1, ವಿಸ್ತರಣಾಧಿಕಾರಿ ದರ್ಜೆ-3 10, ಆಡಳಿತ ಸಹಾಯಕ ದರ್ಜೆ-2 5, ಲೆಕ್ಕ ಸಹಾಯಕ ದರ್ಜೆ-2 5, ಮಾರುಕಟ್ಟೆ ಸಹಾಯಕ ದರ್ಜೆ-2 2, ಕೆಮಿಸ್ಟ್ ದರ್ಜೆ-2 4, ಕಿರಿಯ ಸಿಸ್ಟಮ್ ಆಪರೇಟರ್ 1, ಕಿರಿಯ ತಾಂತ್ರಿಕರು 9 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಸಹಾಯಕ ವ್ಯವಸ್ಥಾಪಕರು (ಎ. ಹೆಚ್ & ಎ. ಐ) ವೇತನ 52650-97,100, ಸಹಾಯಕ ವ್ಯವಸ್ಥಾಪಕರು (ವಿತ್ತ) 52,650-97,100, ತಾಂತ್ರಿಕ ಅಧಿಕಾರಿ (ಡಿಟಿ) 43,100-83,900, ತಾಂತ್ರಿಕ ಅಧಿಕಾರಿ (ಇಂ) 43,100-83,900, ತಾಂತ್ರಿಕ ಅಧಿಕಾರಿ (ಕ್ಯುಸಿ/ ಎಂ. ಬಿ) 43,100-83,900 ರೂ.ಗಳು.

ವಿಸ್ತರಣಾಧಿಕಾರಿ ದರ್ಜೆ-3 ಹುದ್ದೆಗೆ ವೇತನ 33,450-62,600, ಆಡಳಿತ ಸಹಾಯಕ ದರ್ಜೆ-2 27,650-52,650, ಲೆಕ್ಕ ಸಹಾಯಕ ದರ್ಜೆ-2 27,650-52,650, ಮಾರುಕಟ್ಟೆ ಸಹಾಯಕ ದರ್ಜೆ-2 27,650-52,650, ಕೆಮಿಸ್ಟ್ ದರ್ಜೆ-2 27,650-52,650, ಕಿರಿಯ ಸಿಸ್ಟಮ್ ಆಪರೇಟರ್ 27,650-52,650, ಕಿರಿಯ ತಾಂತ್ರಿಕರು 21,400-42,000 ರೂ.ಗಳು. ನಿಗದಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+