BEL Recruitment 2023: ಒಟ್ಟು 230 ಹುದ್ದೆಗಳ ನೇಮಕಾತಿ, ಕೈತುಂಬ ಸಂಬಳ, ಅರ್ಜಿ ಸಲ್ಲಿಕೆ, ಆಯ್ಕೆಯ ಮಾಹಿತಿ
ಬೆಂಗಳೂರು, ಅಕ್ಟೋಬರ್ 06: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL jobs) ತನಲ್ಲಿ ಖಾಲಿ ಇರುವ ಹಲವು ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವಂತೆ ಕೋರಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL jobs) ಸಂಸ್ಥೆಯಲ್ಲಿ ಒಟ್ಟು 232 ಪ್ರೊಬೇಶನರಿ ಎಂಜಿನಿಯರ್, ಪ್ರೊಬೇಶನರಿ ಆಫೀಸರ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಇದೇ ಅಕ್ಟೋಬರ್ 28ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲಿ ಉದ್ಯೋಗ ನೀಡಲಾಗುವುದು ಎಂದು ಬಿಇಎಲ್ ತಿಳಿಸಿದೆ. ಅರ್ಜಿ ಸಲ್ಲಿಕೆ ಮೊದಲು ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ ನೇಮಕಾತಿ ಮಾಹಿತಿ ತಿಳಿಯಿರಿ.

ನೇಮಕಾತಿ ಪೂರ್ಣ ವಿವರ
ಸಂಸ್ಥೆ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
ಹುದ್ದೆ: ಪ್ರೊಬೇಶನರಿ ಎಂಜಿನಿಯರ್, ಪ್ರೊಬೇಶನರಿ ಆಫೀಸರ್
ಖಾಲಿ ಹುದ್ದೆ: 232
ಮಾಸಿಕ ಮಾಸಿಕ: 40,000 ರಿಂದ 1,40,000ರೂಪಾಯಿ
ಅರ್ಜಿ ಸಲ್ಲಿಕೆಗೆ ಕೊನೆ: ಅಕ್ಟೋಬರ್ 28
ಪೋಸ್ಟಿಂಗ್: ಕರ್ನಾಟಕ
ಶೈಕ್ಷಣಿಕ ಅರ್ಹತೆ
ಪ್ರೊಬೇಶನರಿ ಎಂಜಿನಿಯರ್: ಬಿ.ಎಸ್ಸಿ, ಬಿಇ/ಬಿ.ಟೆಕ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್/ ಮೆಕ್ಯಾನಿಕಲ್/ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ನಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಪ್ರೊಬೇಶನರಿ ಆಫೀಸರ್ ಹುದ್ದೆಗೆ ಎಂಬಿಎ, MSW, ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್/ ಇಂಡಸ್ಟ್ರಿಯಲ್ ರಿಲೇಶನ್ಸ್/ ಪರ್ಸನಲ್ ಮ್ಯಾನೇಜ್ಮೆಂಟ್ನಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಬೇಕು. ಇನ್ನೂ ಪ್ರೊಬೇಶನರಿ ಅಕೌಂಟ್ಸ್ ಆಫೀಸರ್ ಕೆಲಸ ಸಿಎ, ಸಿಎಂಎ ಆಗಿರಬೇಕು ಎಂದು ಅಧಿಸೂಚನೆ ಮಾಹಿತಿ ನೀಡಿದೆ.

ವಯಸ್ಸು ಎಷ್ಟಿರಬೇಕು: ಸಡಿಲಿಕೆ ವಿವರ
ಪ್ರೊಬೇಶನರಿ ಅಕೌಂಟ್ಸ್ ಆಫೀಸರ್ ಹುದ್ದೆ ಸೇರ ಬಯಸುವವರಿಗ ಗರಿಷ್ಠ 30 ವರ್ಷ ಇರಬೇಕಿದ್ದು, ಉಳಿದ ಹುದ್ದೆಗಳಿಗೆ 25 ವರ್ಷ ಗರಿಷ್ಠ ಮಿತಿ ಇರುವವ ಅಭ್ಯರ್ಥಿಗಳ ಅರ್ಜಿ ಸಲ್ಲಿಸಬಹುದು.
ಇದರಲ್ಲಿ ಇತರೆ ಹಿಂದುಳಿ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ, ಪರಿಶಿಷ್ಟ ಜಾತ-ಪಂಗಡದವರಿಗೆ ಐದು ವರ್ಷ ಮತ್ತು PWBD ಅಭ್ಯರ್ಥಿಗಳಿಗೆ ಹತ್ತು ವರ್ಷಗಳು ವಯೋಮಿತಿಯಲ್ಲಿ ಸಡಿಲಿಕೆ ಸಿಗಲಿದೆ.
ಅರ್ಜಿ ಶುಲ್ಕ ವಿವರ
ಪರಿಶಿಷ್ಟ ಜಾತಿ-ಪಂಗಡದ ಮತ್ತು PwBD/ESM ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ವಿಲ್ಲ. ಸಾಮಾನ್ಯ/EWS/OBC (NCL) ಅಭ್ಯರ್ಥಿಗಳಿಗೆ ರೂ.1180 ಇದ್ದು, ಅವರು ಆನ್‌ಲೈನ್ ಮೂಲಕ ಹಣ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ ಮತ್ತು ಉದ್ಯೋಗದ ಸ್ಥಳ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುವುದು ನಂತರ ನೇರ ಸಂದರ್ಶನ ನಡೆಯಲಿದೆ. ಆಯ್ಕೆ ಆಗುವವರಿಗೆ ಆಂಧ್ರ ಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಪೊಸ್ಟಿಂಗ್ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/10/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 28, 2023











Click it and Unblock the Notifications