BEL Recruitment 2023: ಬಿಇಎಲ್‌ನ 205 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ, ಆಸಕ್ತರಿಗೆ ಇಲ್ಲಿದೆ ಮಾಹಿತಿ
ಬೆಂಗಳೂರು, ಜೂನ್ 15: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಮೇಲೆ ಭರ್ತಿ ಮಾಡಿಕೊಳ್ಳಲು ಮುಂದಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಜೂನ್ 24ರೊಳಗೆ ಅರ್ಜಿ ಸಲ್ಲಿಸುವಂತೆ ಸಂಸ್ಥೆ ತಿಳಿಸಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಂಸ್ಥೆಯು ಒಟ್ಟು 205 ಹುದ್ದೆಗಳನ್ನು ಭರ್ತಿ ಮಾಡುವ ಗುರಿಯನ್ನು ಹೊಂದಿದೆ. ಅದರಲ್ಲಿ 191 ಹುದ್ದೆಗಳು ಟ್ರೈನಿ ಇಂಜಿನಿಯರ್ -I ಮತ್ತು 14 ಖಾಲಿ ಹುದ್ದೆಗಳು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗೆ ಇದ್ದು, ಅದರ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಅರ್ಹ ಅಭ್ಯರ್ಥಿಗಳು ಬಿಇಎಲ್ ಅಧಿಕೃತ ವೆಬ್‌ಸೈಟ್ bel-india.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಇದಕ್ಕು ಮುನ್ನ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ವಿಧಾನ, ವೇತನ, ವಯೋಮಿತಿ, ವಿದ್ಯಾರ್ಹತೆ ಸೇರಿದಂತೆ ಇನ್ನಿತರ ಅಂಶಗಳನ್ನು ಇಲ್ಲಿ ತಿಳಿಯಿರಿ.
ವಯೋಮಿತಿ ವಿವರ
ಟ್ರೈನಿ ಇಂಜಿನಿಯರ್ -I ಮತ್ತು ಪ್ರಾಜೆಕ್ಟ್ ಇಂಜಿನಿಯರ್-I ಹುದ್ದೆಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳಿಗೆ 01 ಜುಲೈ 2023ಕ್ಕೆ ಗರಿಷ್ಠ ವಯಸ್ಸು 28 ರಿಂದ 32 ವರ್ಷಗಳು ತುಂಬಿರಬೇಕು.
ಶೈಕ್ಷಣಿಕ ವಿದ್ಯಾರ್ಹತೆ
4 ವರ್ಷಗಳ ಪೂರ್ಣಾವಧಿ B.Sc (Eng.)/B.E/B. ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್/ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಶನ್/ಟೆಲಿಕಮ್ಯುನಿಕೇಶನ್/ ಕಮ್ಯುನಿಕೇಶನ್/ ಮೆಕ್ಯಾನಿಕಲ್/ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್/ ಕಂಪ್ಯೂಟರ್ ಸೈನ್ಸ್/ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್/ ವಿಭಾಗಗಳಲ್ಲಿ ಯಾವುದೇ AICTE ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ ಟೆಕ್ ಎಂಜಿನಿಯರಿಂಗ್ ಕೋರ್ಸ್ ಪೂರ್ಣಗೊಳಿಸಿರಬೇಕು.
ಅರ್ಜಿ ಶುಲ್ಕ ವಿವರ
ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ (ಬಿಇಎಲ್) ಪ್ರಾಜೆಕ್ಟ್ ಇಂಜಿನಿಯರ್-I ಮತ್ತು ಟ್ರೈನಿ ಇಂಜಿನಿಯರ್-I ಹುದ್ದೆಗೆ ಅರ್ಜಿ ಶುಲ್ಕ ಕ್ರಮವಾಗಿ ರೂಪಾಯಿ 472 ಮತ್ತು 177 ರೂಪಾಯಿ ಪಾವತಿಸಬೇಕಿದೆ. SC/ST/ PwD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಕಂಪನಿಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುವುದು. ಬಳಿಕ ಒಂದು ಸುತ್ತಿನ ಸಂದರ್ಶನ ಇರಲಿದೆ. ಅದರಲ್ಲಿ ಶಾರ್ಟ್‌ಲಿಸ್ಟ್ ಆದವರಿಗೆ ಪೋಸ್ಟಿಂಗ್ ನೀಡಲಾಗುವುದು ಎಂದು ತಿಳಿಸಲಾಗಿದೆ.
ಅರ್ಜಿ ಸಲ್ಲಿಕೆ ವಿಧಾನ
ಅರ್ಜಿ ಸಲ್ಲಿಸುವವರು ಮೊದಲು ಬಿಇಎಲ್ ವೆಬ್‌ಸೈಟ್ bel-india.in ಗೆ ಭೇಟಿ ನೀಡಬೇಕು. ಮುಖಪುಟದಲ್ಲಿ ಕಾಣುವ ವೃತ್ತಿಗಳ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕಾಣುವ ಕಾಂಪೊನೆಂಟ್ಸ್ ಮತ್ತು EM SBU ಬೆಂಗಳೂರುಗಾಗಿ ಟ್ರೈನಿ ಇಂಜಿನಿಯರ್-I/ ಪ್ರಾಜೆಕ್ಟ್ ಇಂಜಿನಿಯರ್-I ನೇಮಕಾತಿಗಾಗಿ ಅರ್ಜಿ ಲಿಂಕ್ ಅನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.
ಆಯ್ಕೆಯಾದ ಬಳಿಕ ಪರದೆ ಮೇಲೆ ಕಾಣುವ ಹುದ್ದೆಗಳ ಮೇಲೆ ಕ್ಲಿಕ್ ಮಾಡಿ ಮತ್ತು ಫಾರ್ಮ್ ಅನ್ನು ಭರ್ತಿ ಮಾಡಬೇಕು. ಭರ್ತಿಗೂ ಮುನ್ನ ಅರ್ಜಿಯನ್ನು ಒಮ್ಮೆ ಸ್ಪಷ್ಟವಾಗಿ ಓದಿಕೊಳ್ಳಿ. ವಿವರಗಳನ್ನು ಪರಿಶೀಲಿಸಿ ಶುಲ್ಕವನ್ನು ಪಾವತಿಸಿ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ತೆಗೆದುಕೊಳ್ಳಿ ಎಂದು ಬಿಇಎಲ್ ತಿಳಿಸಿದೆ.












Click it and Unblock the Notifications