ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BEL Recruitment 2022: ಬಿಇಎಲ್‌ನಲ್ಲಿ 100 ಟ್ರೈನಿ ಇಂಜಿನಿಯರ್ ಹುದ್ದೆಗಳಿವೆ

|
Google Oneindia Kannada News

ಬೆಂಗಳೂರು, ಸೆ.9: ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) 2022ನೇ ಸಾಲಿನ ನೇಮಕಾತಿ ಮುಂದುವರೆಸಿದೆ. ಈ ಕುರಿತಂತೆ ಅಧಿಕೃತ ವೆಬ್‌ಸೈಟಿನಲ್ಲಿ ಪ್ರಕಟಣೆ ಹೊರಡಿಸಿದೆ.100ಕ್ಕೂ ಅಧಿಕ ಪ್ರಾಜೆಕ್ಟ್, ಟ್ರೈನಿ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆಗಳಿಗೆ ಆಸಕ್ತ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 23, 2022ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಹುದ್ದೆ ಹೆಸರು: Project Engineer,Trainee Engineer I
ಒಟ್ಟು ಹುದ್ದೆಗಳು:150
ಟ್ರೈನಿ ಇಂಜಿನಿಯರ್: 40 ಹುದ್ದೆ
ಪ್ರಾಜೆಕ್ಟ್ ಇಂಜಿನಿಯರ್: 60 ಹುದ್ದೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 23, 2022

ಸಂಬಳ ನಿರೀಕ್ಷೆ:
Project Engineer: 30,000 ಪ್ರತಿ ತಿಂಗಳು
Trainee Engineer: 40,000 ಪ್ರತಿ ತಿಂಗಳು

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಬಿಇ/ ಬಿ. ಟೆಕ್ ಪದವಿ (ಅಧಿಸೂಚನೆಯನ್ನು ಪರಿಶೀಲಿಸಿ).

ಕೆಪಿಎಸ್‌ಸಿ ನೇಮಕಾತಿ; ಸಹಾಯಕ ಕಾರ್ಯಪಾಲಕ ಇಂಜಿನಿಯರ್ 18 ಹುದ್ದೆಗಳುಕೆಪಿಎಸ್‌ಸಿ ನೇಮಕಾತಿ; ಸಹಾಯಕ ಕಾರ್ಯಪಾಲಕ ಇಂಜಿನಿಯರ್ 18 ಹುದ್ದೆಗಳು

ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಪೂರ್ಣಾವಧಿ ಬಿಇ/ ಬಿ. ಟೆಕ್/ ಎಂ.ಇ/ಎಂ.ಟೆಕ್ (ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್/ ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿಕಮ್ಯೂನಿಕೇಷನ್) ಶೇ 55 ರಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು. ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಅಂಕಗಳಲ್ಲಿ ವಿನಾಯತಿ ಸಿಗಲಿದೆ.

BEL Recruitment 2022: Apply for 100 Trainee Engineer Post

ಪ್ರಾಜೆಕ್ಟ್ ಇಂಜಿನಿಯರ್: ಕನಿಷ್ಠ 55% ಅಂಕಗಳು ಮತ್ತು ಕನಿಷ್ಠ 02 ವರ್ಷಗಳ ಅನುಭವದೊಂದಿಗೆ ಇಂಜಿನಿಯರಿಂಗ್‌ನ ಸಂಬಂಧಿತ ವಿಭಾಗಗಳಲ್ಲಿ AICTE ಅನುಮೋದಿತ ಸಂಸ್ಥೆ / ವಿಶ್ವವಿದ್ಯಾಲಯದಿಂದ ಪೂರ್ಣ ಸಮಯದ BE/ B.Tech ಇಂಜಿನಿಯರಿಂಗ್‌ (4 ವರ್ಷಗಳು) ಕೋರ್ಸ್.

ಟ್ರೈನಿ ಇಂಜಿನಿಯರ್: ಕನಿಷ್ಠ 55% ಅಂಕಗಳು ಮತ್ತು ಕನಿಷ್ಠ 01 ವರ್ಷಗಳ ಅನುಭವದೊಂದಿಗೆ ಇಂಜಿನಿಯರಿಂಗ್ ಸಂಬಂಧಿತ ವಿಭಾಗಗಳಲ್ಲಿ AICTE ಅನುಮೋದಿತ ಸಂಸ್ಥೆ / ವಿಶ್ವವಿದ್ಯಾಲಯದಿಂದ ಪೂರ್ಣ ಸಮಯದ BE/ B.Tech ಇಂಜಿನಿಯರಿಂಗ್ (4 ವರ್ಷಗಳು) ಕೋರ್ಸ್.

SBI Recruitment 2022: 5008ಕ್ಕೂ ಅಧಿಕ ಹುದ್ದೆಗಳಿವೆ, ಅರ್ಜಿ ಹಾಕಿSBI Recruitment 2022: 5008ಕ್ಕೂ ಅಧಿಕ ಹುದ್ದೆಗಳಿವೆ, ಅರ್ಜಿ ಹಾಕಿ

ವಯೋಮಿತಿ:

ಪ್ರಾಜೆಕ್ಟ್ ಇಂಜಿನಿಯರ್: ವಯೋಮಿತಿ: 32 ವರ್ಷ

ಟ್ರೈನಿ ಇಂಜಿನಿಯರ್: 28 ವರ್ಷ

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಿನಾಯಿತಿ, ಹಿಂದುಳಿದ ವರ್ಗ (ಒಬಿಸಿ) ದ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ದಿವ್ಯಾಂಗ ಅಭ್ಯರ್ಥಿಗಳಿಗೆ 10 ವರ್ಷ ವಿನಾಯಿತಿಯನ್ನು ನಿಯಮಾನುಸಾರ ಸಿಗಲಿದೆ.

ಅರ್ಜಿ ಸಲ್ಲಿಸಿ: ಅಂಚೆ-ಕಚೇರಿಯಲ್ಲಿ ಕಾರು ಚಾಲಕರಿಗೆ 63,000 ಸಂಬಳಅರ್ಜಿ ಸಲ್ಲಿಸಿ: ಅಂಚೆ-ಕಚೇರಿಯಲ್ಲಿ ಕಾರು ಚಾಲಕರಿಗೆ 63,000 ಸಂಬಳ

ಅರ್ಜಿ ಶುಲ್ಕ:
ಟ್ರೈನಿ ಇಂಜಿನಿಯರ್:
ಸಾಮಾನ್ಯ, ಆರ್ಥಿಕವಾಗಿ ಹಿಂದುಳಿದ ವರ್ಗ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ: 150 ರು ಪ್ಲಸ್ 18% ಜಿಎಸ್ ಟಿ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿ, ದಿವ್ಯಾಂಗ: ಯಾವುದೇ ಶುಲ್ಕವಿಲ್ಲ.

ಪ್ರಾಜೆಕ್ಟ್ ಇಂಜಿನಿಯರ್:
ಸಾಮಾನ್ಯ, ಆರ್ಥಿಕವಾಗಿ ಹಿಂದುಳಿದ ವರ್ಗ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ: 400ರು ಪ್ಲಸ್ 18% ಜಿಎಸ್ ಟಿ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭ್ಯರ್ಥಿ, ದಿವ್ಯಾಂಗ: ಯಾವುದೇ ಶುಲ್ಕವಿಲ್ಲ.

ಅರ್ಜಿ ಶುಲ್ಕ ಪಾವತಿಸುವ ವಿಧಾನ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಲೆಕ್ಟ್ ಮೂಲಕ ರಿಮೆಟ್ ಮಾಡತಕ್ಕದ್ದು.

ನೇಮಕಾತಿ ಪ್ರಕ್ರಿಯೆ:
ಪದವಿ ಅಂತಿಮ ವರ್ಷದ ಅಂಕಗಳ ಸರಾಸರಿ,ಮೆರಿಟ್ ಆಧಾರದ ಮೇಲೆ, ಅನುಭವ, ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಆಧಾರದ ಮೇಲೆ ನೇಮಕಾತಿ. ಬಿಇಎಲ್ ಅಧಿಕೃತ ವೆಬ್ ತಾಣದಲ್ಲಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುತ್ತದೆ.

ಪ್ರಮುಖ ದಿನಗಳು:

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 23/09/2022

ಅರ್ಜಿ ಸಲ್ಲಿಸುವ ವಿಧಾನ:
* ಬಿ.ಇ.ಎಲ್ ಅಧಿಸೂಚನೆ ಓದಿಕೊಂಡು, ಅರ್ಹತೆಯುಳ್ಳ ಅಭ್ಯರ್ಥಿಗಳು ಅಧಿಕೃತ ವೆಬ್ ತಾಣ(bel-india.in)ದಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ.
* ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಮುನ್ನ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ನೀಡಿ.
* ವಯೋಮಿತಿ, ವಿದ್ಯಾರ್ಹತೆ, ಅನುಭವ, ವಯೋಮಿತಿ ವಿನಾಯಿತಿ ಮುಂತಾದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸತಕ್ಕದ್ದು.
* ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆ ಅರ್ಜಿ ನಮೂನೆ(Application for Project Engineer/ Trainee Engineer)ಯನ್ನು ಕ್ಲಿಕ್ ಮಾಡಿ ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ಪ್ರಮಾಣ ಪತ್ರಗಳನ್ನು ಲಗತ್ತಿಸಿ.
* ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬಹುದು. ಆನ್ ಲೈನ್ ಮೂಲಕವೇ ಪೇಮೆಂಟ್ ಮಾಡಬಹುದು. ಡೆಬಿಟ್ ಕಾರ್ಡ್/ ರುಪೇ ಕಾರ್ಡ್/ ವೀಸಾ ಕಾರ್ಡ್/ ಮಾಸ್ಟರ್ ಕಾರ್ಡ್/ ಮಾಸ್ಟ್ರೋ ಅಲ್ಲದೆ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವ್ಯಾಲೆಟ್/ಯುಪಿಐ ಮೂಲಕ ಹಣ ಪಾವತಿಸಬಹುದು.
* ಅರ್ಜಿ ಸಲ್ಲಿಸಿದ್ದಕ್ಕೆ ಹಾಗೂ ಶುಲ್ಕ ಪಾವತಿಗೆ ಇ ರಸೀತಿ ಪಡೆದುಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

English summary
BEL recruitment 2022 notification has been released on official website for the recruitment of 100 Trainee Engineer Post at Bharat Electronics Limited.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X