ಬಿಇಎಲ್ ನೇಮಕಾತಿ 2021: 41 ಇಂಜಿನಿಯರಿಂಗ್ ಹುದ್ದೆಗಳಿವೆ
ಬೆಂಗಳೂರು, ಜನವರಿ 03: ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) 2021ನೇ ಸಾಲಿನ ನೇಮಕಾತಿ ಕುರಿತಂತೆ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಣೆ ಹೊರಡಿಸಿದೆ. 41ಕ್ಕೂ ಅಧಿಕ ಪ್ರಾಜೆಕ್ಟ್ ಇಂಜಿನಿಯರ್, ಇಂಜಿನಿಯರ್ ಗಳನ್ನು ನೇಮಿಸಲಾಗುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಜನವರಿ 16, 2021ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)
ಹುದ್ದೆ ಹೆಸರು: Project Engineer - I, Sr. Assistant Engineer(SSI), Sr. Assistant. Engineer(WFS/ PS & TESTING/CS) & Sr. Assistant. Engineer(CSS)
ಒಟ್ಟು ಹುದ್ದೆಗಳು: 41
ಹುದ್ದೆಯ ತಾಣ: ಭಾರತದೆಲ್ಲೆಡೆ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜನವರಿ 16, 2021
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಬಿಇ/ ಬಿ. ಟೆಕ್ ಪದವಿ, ಎಂಬಿಎ, ಪಿಜಿ ಡಿಪ್ಲೋಮಾ, ಪಿಜಿ ಪದವಿ, ಬಿ. ಆರ್ಕ್, ಎಂಬಿಎ(ಅಧಿಸೂಚನೆಯನ್ನು ಪರಿಶೀಲಿಸಿ).
ವಯೋಮಿತಿ:
ಹಿರಿಯ ಸಹಾಯಕ ಇಂಜಿನಿಯರ್: ಗರಿಷ್ಠ 50 ವರ್ಷ
ಪ್ರಾಜೆಕ್ಟ್ ಇಂಜಿನಿಯರ್/ಪ್ರಾಜೆಕ್ಟ್ ಅಧಿಕಾರಿ: 28 ವರ್ಷ
ನೇಮಕಾತಿ: ಪದವಿ ಅಂತಿಮ ವರ್ಷದ ಅಂಕಗಳ ಸರಾಸರಿ, ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ
ಪ್ರಮುಖ ದಿನಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 30-12-2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 16-01-2021
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications