ಬಿಇಎಲ್ ನೇಮಕಾತಿ 2020: 934 ಟ್ರೈನಿ ಇಂಜಿನಿಯರ್ ಹುದ್ದೆಗಳಿವೆ
ಬೆಂಗಳೂರು, ನ.12: ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) 2020ನೇ ಸಾಲಿನ ನೇಮಕಾತಿ ಕುರಿಂತೆ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಣೆ ಹೊರಡಿಸಿದೆ. 934ಕ್ಕೂ ಅಧಿಕ ಪ್ರಾಜೆಕ್ಟ್ ಇಂಜಿನಿಯರ್, ಟ್ರೈನಿ ಇಂಜಿನಿಯರ್ ಗಳನ್ನು ನೇಮಿಸಲಾಗುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ನವೆಂಬರ್ 21ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(BEL)
ಹುದ್ದೆ ಹೆಸರು: ಪ್ರಾಜೆಕ್ಟ್ ಇಂಜಿನಿಯರ್, ಟ್ರೈನಿ ಇಂಜಿನಿಯರ್
ಒಟ್ಟು ಹುದ್ದೆಗಳು: 934
ಹುದ್ದೆಯ ತಾಣ: ಬೆಂಗಳೂರು, ಅಂಬಾಲಾ, ಅಗ್ರಾ, ಇತರೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ನವೆಂಬರ್ 21, 2020
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಬಿಇ/ ಬಿ. ಟೆಕ್ ಪದವಿ, ಎಂಬಿಎ, ಪಿಜಿ ಡಿಪ್ಲೋಮಾ, ಪಿಜಿ ಪದವಿ, ಬಿ. ಆರ್ಕ್, ಎಂಬಿಎ.

ವಯೋಮಿತಿ
ಪ್ರಾಜೆಕ್ಟ್ ಇಂಜಿನಿಯರ್/ಪ್ರಾಜೆಕ್ಟ್ ಅಧಿಕಾರಿ: 28 ವರ್ಷ
ಟ್ರೈನಿ ಇಂಜಿನಿಯರ್/ಪ್ರಾಜೆಕ್ಟ್ ಅಧಿಕಾರಿ: 25 ವರ್ಷ
ನೇಮಕಾತಿ : ಪದವಿ ಅಂಕಗಳ ಸರಾಸರಿ, ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.
ಅರ್ಜಿ ಶುಲ್ಕ:
ಟ್ರೈನಿ ಇಂಜಿನಿಯರ್/ಪ್ರಾಜೆಕ್ಟ್ ಅಧಿಕಾರಿ
ಸಾಮಾನ್ಯ/ಒಬಿಸಿ: 200 ರು.
ಪ್ರಾಜೆಕ್ಟ್ ಇಂಜಿನಿಯರ್/ಪ್ರಾಜೆಕ್ಟ್ ಅಧಿಕಾರಿ
ಸಾಮಾನ್ಯ/ಒಬಿಸಿ: 500ರು.
ಎಸ್ ಸಿ/ ಎಸ್ಟಿ: ಯಾವುದೇ ಶುಲ್ಕವಿಲ್ಲ
ಪ್ರಮುಖ ದಿನಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 11-11-2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 21.11.2020
ಪ್ರಾಜೆಕ್ಟ್ ಇಂಜಿಯರ್ ಹುದ್ದೆಗಳಿಗೆ ಕೊನೆ ದಿನಾಂಕ: 25.11.2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications