ಬಿಇಎಲ್ ನಲ್ಲಿ ಇಂಜಿನಿಯರ್ ಗಳಿಗೆ ಉದ್ಯೋಗಾವಕಾಶ

ಬೆಂಗಳೂರು, ಮಾರ್ಚ್ 02: ಭಾರತ್‌ ಇಲೆಕ್ಟ್ರಾನಿಕ್ಸ್‌ ಲಿಮಿಟೆಡ್(ಬಿಇಎಲ್) 2018ನೇ ಸಾಲಿನ ಉದ್ಯೋಗಗಳಿಗೆ ಅರ್ಜಿ ಆಹ್ವಾನ ನೀಡಿದೆ. ಒಟ್ಟು 23 ಡೆಪ್ಯೂಟಿ ಇಂಜಿನಿಯರ್‌ ಪೋಸ್ಟ್‌ಗಳಿಗೆ ನೊಟಿಫೀಕೇಶನ್‌ ಹೊರಡಿಸಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್‌ 14, 2018. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಾಗುತ್ತದೆ.

ಉದ್ಯೋಗದ ವಿವರ:

ಸಂಸ್ಥೆ ಹೆಸರು : ಭಾರತ್‌ ಇಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಲ್)

ಹುದ್ದೆ ಹೆಸರು : ಡೆಪ್ಯೂಟಿ ಇಂಜಿನಿಯರ್‌

ಒಟ್ಟು ಹುದ್ದೆಗಳು : 23

ಉದ್ಯೋಗ ಸ್ಥಳ : ಬೆಂಗಳೂರು

BEL Recruitment 2018 Notification for 23 Deputy Engineer post

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್‌ 14, 2018

ವೇತನ ಶ್ರೇಣಿ : 40000 /- ಇಂದ 140000 /-

ವಿದ್ಯಾರ್ಹತೆ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿಇ/ಬಿ.ಟೆಕ್/ಎಎಂಐಇ ವಿದ್ಯಾರ್ಹತೆ ಹೊಂದಿರಬೇಕು. (ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯೂನಿಕೇಷನ್, ಎಲೆಕ್ಟ್ರಾನಿಕ್ಸ್ ಎಂಡ್ ಟೆಲಿ ಕಮ್ಯುನಿಕೇಷನ್, ಕಮ್ಯೂನಿಕೇಷನ್, ಟೆಲಿಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್, ಎಂಬಿಎ (ಮಾರ್ಕೆಂಟಿಗ್).

ಸಾಮಾನ್ಯ ವರ್ಗ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ ಪ್ರಥಮ ದರ್ಜೆಯಲ್ಲಿ ಪದವಿ ಪಡೆದಿರಬೇಕು. ಎಸ್ ಸಿ/ ಎಸ್ಟಿ/ ಅಂಗವಿಲ ಅಭ್ಯರ್ಥಿಗಳು ಎಐಸಿಟಿನಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿಯನ್ನು ಜಸ್ಟ್ ಪಾಸ್ ಆಗಿ ಪೂರೈಸಿದ್ದಾರೆ ಸಾಕು.

ವಯೋಮಿತಿ: 01/02/2018ರಂತೆ 26 ವರ್ಷಗಳು. ಒಬಿಸಿಗೆ 3, ಎಸ್ ಸಿ/ ಎಸ್ಟಿಗೆ 10 ವರ್ಷಗಳ ವಿನಾಯಿತಿ ಇದೆ.

ಅರ್ಜಿ ವಿವರ, ಅರ್ಜಿ ಸಲ್ಲಿಸುವ ವಿಧಾನ ಇನ್ನಿತರ ಮಾಹಿತಿಯನ್ನು ಬಿಇಎಲ್ ಅಧಿಕೃತ ವೆಬ್ ಸೈಟಿನಿಂದ ಪಡೆದುಕೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+